HEALTH TIPS

ರೈತರಿಗೆ ವರದಾನ: ಪ್ರಾಣಿಗಳಿಂದ ಬೆಳೆ ರಕ್ಷಿಸುವುದಕ್ಕೆ ಸೈರನ್ ಉಪಕರಣ ಅಭಿವೃದ್ಧಿಪಡಿಸಿದ ಐಐಟಿಯನ್!

             ಪಾಟ್ನಅಗತ್ಯತೆ ಎಲ್ಲಾ ಆವಿಷ್ಕಾರಗಳ ತಾಯಿ ಎನ್ನುತ್ತಾರೆ. ಈಗ ಬಿಹಾರದಲ್ಲಿ ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದ ಅದೆಷ್ಟೋ ಮಂದಿ ರೈತರಿಗೆ ಐಐಟಿ ವ್ಯಾಸಂಗ ಮಾಡಿದ ವ್ಯಕ್ತಿಯೋರ್ವರು ನೆಮ್ಮದಿ ಮೂಡಿಸುವಂತಹ ಉಪಕರವನ್ನು ಆವಿಷ್ಕರಿಸಿದ್ದಾರೆ.

          ಐಐಟಿ-ಖರಗ್ ಪುರದ ಹಳೆಯ ವಿದ್ಯಾರ್ಥಿ ಅಜಿತ್ ಕುಮಾರ್ ಕೃತಕ ಬುದ್ಧಿಮತ್ತೆ ಚಾಲಿತ ಫಾರ್ಮ್ ಸರ್ವಿಜಲೆನ್ಸ್-ಕಮ್-ಅನಿಮಲ್ ಸ್ಕೇರರ್ (ಎಫ್‌ಎಸ್ ಸಿಎಎಸ್) ಉಪಕರಣವನ್ನು ಭಗಲ್ ಪುರದಲ್ಲಿ ಆವಿಷ್ಕರಿಸಿದ್ದಾರೆ. ಈ ಉಪಕರಣದಿಂದ ಬೆಳೆದುನಿಂತಿರುವ ಬೆಳೆಗಳು ಪ್ರಾಣಿಗಳ ಆಹಾರವಾಗುವುದನ್ನು ತಡೆಗಟ್ಟಬಹುದಾಗಿದೆಯಷ್ಟೇ ಅಲ್ಲದೇ ಬೆಳೆಗಳನ್ನು ಕದಿಯುವುದನ್ನೂ ತಪ್ಪಿಸಬಹುದಾಗಿದೆ.

               ಕಟಾವಿಗೆ ಬಂದಿರುವ ಬೆಳಗಳಿರುವ ಪ್ರಮುಖ ಪ್ರದೇಶಗಳಲ್ಲಿ ಈ ಉಪಕರಣವನ್ನು ಅಳವಡಿಸಬಹುದಾಗಿದ್ದು, ಯಾವುದೇ ಪ್ರಾಣಿ ತನ್ನ ಸುತ್ತಲ ಪ್ರದೇಶದಲ್ಲಿ ಕಂಡುಬಂದಲ್ಲಿ ಸೈರನ್ ಶಬ್ದ ಮಾಡುವುದರೊಂದಿಗೆ ಮಾಲಿಕರ ಮೊಬೈಲ್ ಗೆ ಮೆಸೇಜ್ ನ್ನೂ ಕಳಿಸಲಿದೆ.

        ಇದು ಕೃತಕ ಬುದ್ಧಿಮತ್ತೆ ಚಾಲಿತ ಉಪಕರಣ ಇದಾಗಿದ್ದು, ಕಂಪ್ಯೂಟರೈಸ್ಡ್ ಸೆನ್ಸಾರ್ ಆಧಾರಿತ ಎಲಕ್ಟ್ರಾನಿಕ್ ಉಪಕರಣ ಇದಾಗಿದೆ. ಇದಕ್ಕೆ ನೈಟ್ ವಿಷನ್ ಕ್ಯಾಮರಾ ಅಳವಡಿಸಲಾಗಿದೆ.

ಭಗಲ್ ಪುರ ಜಿಲ್ಲೆಯ ಕಹಲ್ ಗೌನ್ ನ ಶ್ಯಾಮ್ ಪುರದ ನಿವಾಸಿ ಅಜಿತ್ ಕುಮಾರ್ ಈ ಉಪಕರಣ ಅಭಿವೃದ್ಧಿಪಡಿಸಿದ್ದಾರೆ. ಎಂಎನ್ ಸಿ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಜಿತ್ ಕುಮಾರ್ ಸ್ಟೆಪುಫೈ ಲ್ಯಾಬ್ಸ್ ಎಂಬ ಸ್ವಂತ ಉದ್ಯಮವನ್ನು ಮತ್ತೋರ್ವ ಐಐಟಿ ಬ್ಯಾಚ್ ಮೇಟ್ ಸಾಗರ್ ಕುಮಾರ್ ಅವರೊಂದಿಗೆ ಸೇರಿ ಸ್ಥಾಪಿಸಿದ್ದರು.

            "ಈ ಉಪಕರಣ ಬ್ಯಾಟರಿ ಚಾಲಿತವಾಗಿದ್ದು, ಕಂಬ ಅಥವಾ ಮರಕ್ಕೆ ಅಳವಡಿಸಬಹುದಾಗಿದೆ, ಬ್ಯಾಟರಿ ಚಾರ್ಜ್ ಮಾಡುವುದಕ್ಕೆ ಸಣ್ಣ ಸೋಲಾರ್ ಪ್ಯಾನಲ್ ಗಳು ಸಾಕಿದ್ದು, ರೈತರ ಅವಶ್ಯಕತೆಗೆ ತಕ್ಕಂತೆ ವಿನ್ಯಾಸ ಮಾಡಬಹುದಾಗಿದೆ, ಈ ಉಪಕರಣಗಳನ್ನು ಕಹಲ್ ಗೌನ್ ನ ಖೀರಿಘಾಟ್ ನಲ್ಲಿ ಪ್ರಾಯೋಗಿಕವಾಗಿ ಬಳಕೆ ಮಾಡಲಾಗಿದೆ" ಎಂದು ಅಜಿತ್ ಕುಮಾರ್ ಮಾಹಿತಿ ನೀಡಿದ್ದಾರೆ.

ಈ ಉಪಕರಣದ ಬೆಲೆಯನ್ನು 15000 ಕ್ಕೆ ನಿಗದಿಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ಹಾಗೂ ತಾಂತ್ರಿಕ ವೈಶಿಷ್ಟ್ಯಗಳನ್ನು ಸೇರಿಸುವುದರಿಂದ ಬೆಲೆ ಸ್ವಲ್ಪ ವ್ಯತ್ಯಯವಾಗಲಿದೆ ಎಂದು ಅಜಿತ್ ಕುಮಾರ್ ಹೇಳಿದ್ದಾರೆ. ಇದೇ ವೇಳೆ ಕುಮಾರ್ ತಮ್ಮ ಪತ್ನಿ ಅಲ್ಕಾ ರಂಜನ್ ಸಿಂಗ್ ಅವರೊಂದಿಗೆ ಸ್ಟೆಪುಫೈ ಲ್ಯಾಬ್ ಮೂಲಕ ರೊಬೋಟಿಕ್ಸ್, STEM, ಜೆಇಇ( ಮೇನ್ ಹಾಗೂ ಅಡ್ವಾನ್ಸ್ಡ್) ಗೆ ಯುವಕರಿಗೆ ತರಬೇತಿ ನೀಡುತ್ತಿದ್ದು,

          2020 ರಲ್ಲಿ ಕುಮಾರ್ ಅವರು ತಮ್ಮ ಗ್ರಾಮಕ್ಕೆ ಸ್ಯಾನಿಟಿಸೇಷನ್ ಮಾಡಲು ಯುವಿಸಿ ಸ್ಯಾನಿಟೈಸರ್ ರೋಬೋಟ್ ನ್ನು ತಯಾರಿಸಿದ್ದರು. ಇದನ್ನು ಭಾರತೀಯ ರೈಲ್ವೆ ಸಹ ಪ್ರಾಯೋಗಿಕವಾಗಿ ಬಳಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries