ನವದೆಹಲಿ : ಭಾರತದ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಮತ್ತು ಅವರ ಪತ್ನಿ ತಮ್ಮ ಸ್ವಗ್ರಾಮಕ್ಕೆ ತೆರಳಲು ರೈಲು ಪ್ರಯಾಣ ಮಾಡಿದರು.. ಉತ್ತರಪ್ರದೇಶದ ಕಾನ್ಪುರದಲ್ಲಿರುವ ಸ್ವಸ್ಥಳಕ್ಕೆ ಹೋಗಲು ನಿನ್ನೆ ದೆಹಲಿಯ ಸಫ್ದಾರ್ಜಂಗ್ ರೈಲ್ವೆ ನಿಲ್ದಾಣದಲ್ಲಿ ಭಾರತೀಯ ರೈಲ್ವೆಯ ವಿಶೇಷ ರೈಲೊಂದನ್ನು ಹತ್ತಿದ್ದಾರೆ.
ಈ ಸಂದರ್ಭದಲ್ಲಿ ರೈಲ್ವೆ ಮಂತ್ರಿ ಪಿಯೂಶ್ ಗೋಯಲ್ ಮತ್ತು ರೈಲ್ವೆ ಬೋರ್ಡ್ ಚೇರ್ಮನ್ ಸುನೀತ್ ಶರ್ಮ ಅವರು ಉಪಸ್ಥಿತರಿದ್ದು, ಬೀಳ್ಕೊಟ್ಟರು.
ಕೋವಿಂದ್ ಅವರು ಕಳೆದ 15 ವರ್ಷಗಳಲ್ಲಿ ರೈಲು ಪ್ರಯಾಣ ಮಾಡಿರುವ ಮೊದಲ ರಾಷ್ಟ್ರಪತಿಯಾಗಿದ್ದಾರೆ. 2006 ರಲ್ಲಿ ಆಗಿನ ರಾಷ್ಟ್ರಪತಿಗಳಾಗಿದ್ದ ಡಾ. ಎಪಿಜೆ ಅಬ್ದುಲ್ ಕಲಂ ಅವರು ದೆಹಲಿಯಿಂದ ಡೆಹ್ರಾಡೂನ್ಗೆ ರೈಲಿನಲ್ಲಿ ಪ್ರಯಾಣಿಸಿದ್ದರು.