ಕಾಸರಗೋಡು: ಪುಸ್ತಕ ಓದುವಿಕೆಂ ಅನುಭವದ ಕುರಿತು ಟಿಪ್ಪಣಿ ರಚನೆ ಸ್ಪರ್ಧೆ ಆನ್ ಲೈನ್ ರೂಪದಲ್ಲಿ ಜರುಗಲಿದೆ. ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಜೂ.19ರಂದು ನಡೆಯುವ ವಾಚನ ದಿನ ಅಂಗವಾಗಿ ಕಾಸರಗೋಡು ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ವತಿಯಿಂದ ಈ ಸ್ಪರ್ಧೆ ನಡೆಯಲಿದೆ. ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಹೈಯರ್ ಸೆಕೆಂಡರಿ ವಿಭಾಗ ವಿದ್ಯಾರ್ಥಿಗಳಿಗಾಗಿ ಈ ಸ್ಪರ್ಧೆ ನಡೆಸಲಾಗುವುದು. ಹಿರಿಯ ಪ್ರಾಥಮಿಕ ವಿಭಾಗದವರಿಗೆ ಬಾಲಸಾಹಿತ್ಯ, ಪ್ರೌಢಶಾಲೆಗಳಿಗೆ ಕಥೆ ಮತ್ತು ಹೈಯರ್ ಸೆಕೆಂಡರಿ ವಿಭಾಗದ ಮಂದಿಗೆ ಕಾದಂಬರಿ ಹೀಗೆ ತಾವು ಓದಿದ ಕೃತಿ ನೀಡಿರುವ ಅನುಭವಗಳ ಟಿಪ್ಪಣಿ ರಚಿಸಬೇಕಿದೆ. ಟಿಪ್ಪಣಿ 250 ಶಬ್ದಗಳನ್ನು ಮೀರಕೂಡದು. ರಚನೆಗಳ ಪಿ.ಡಿ.ಎಫ್.ನ್ನು prdcontest@gmail.com ಎಂಬ ವಿಳಾಸಕ್ಕೆ ಜೂ.20ರ ಮುಂಚಿತವಾಗಿ ಕಳುಹಿಸಬೇಕು. ವಯೋಮಿತಿ ಖಚಿತ ಪಡಿಸುವ ದಾಖಲು, ಗುರುತುಚೀಟಿ ಇತ್ಯಾದಿಗಳ ನಕಲನ್ನೂ ಜತೆಗೆ ಕಳುಹಿಸಬೇಕು. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.