HEALTH TIPS

ಲಾಕ್ ಡೌನ್ ಅವಧಿಯಲ್ಲಿ ಹೆಚ್ಚು ಮಹತ್ವ ಪಡೆದ ಓದುವಿಕೆ: ವಾಚನ ದಿನಾಚರಣೆಯನ್ನು ಉತ್ಸವವಾಗಿಸಿದ ಸಾಹಿತಿಗಳು : ವೇದಿಕೆಯೊದಗಿಸಿದ ಗ್ರಂಥಾಲಯಗಳು

           ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಪುಸ್ತಕಗಳ ಓದುವಿಕೆ ಹೆಚ್ಚುವರಿ ಮಹತ್ವ ಪಡೆದಿರುವುದನ್ನು ವಾಚನ ದಿನಾಚರಣೆ ಖಚಿತಪಡಿಸಿದೆ. ಹಿರಿಯ ಸಾಹಿತಿಗಳು ಓದುವಿಕೆಯ ಸಕಾರಾತ್ಮಕತೆಯನ್ನು ಸಾರುವ ಮೂಲಕ ಓದುವ ದಿನಾಚರಣೆಯನ್ನು ಉತ್ಸವವಾಗಿಸಿದ್ದಾರೆ. ಇದಕ್ಕೆ ನಾಡಿನ ಗ್ರಂಥಾಲಯಗಳು ವೇದಿಕೆಯೊದಗಿಸಿವೆ. 

                 ಸಾಮಾಜಿಕ ಜಾಲತಾಣಗಳ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಶನಿವಾರ ನಾನಾ ಕಡೆ ವಾಚನ ದಿನಾಚರಣೆ ವೈವಿಧ್ಯಮಯ ಕಾರ್ಯಕ್ರಮಗಳ ಸಹಿತ ನಡೆಯಿತು.

              ಜಿಲ್ಲಾ ಗ್ರಂಥಾಲಯ ಮಂಡಳಿ ವತಿಯಿಂದ ನಡೆಯುವ ವಾಚನ ಪಕ್ಷಾಚರಣೆಗೆ ಈ ವೇಳೆ ಚಾಲನೆ ಲಭಿಸಿದೆ. ತಡಿಯನ್ ಕೊವವ್ವಲ್ ಕೈರಳಿ ಗ್ರಂಥಾಲಯದಲ್ಲಿ ಜರುಗಿದ ಸಮಾರಂಭದಲ್ಲಿ  ಸಹಕಾರಿ ಸಚಿವ ವಿ.ಎನ್.ವಾಸವನ್ ಪಕ್ಷಾಚರಣೆಯನ್ನು ಉದ್ಘಾಟಿಸಿದರು. ಜಿಲ್ಲಾ ಗ್ರಂಥಾಲಯ ಮಂಡಳಿ ಅಧ್ಯಕ್ಷ ಕೆ.ವಿ.ಕುಂuಟಿಜeಜಿiಟಿeಜರಾಮನ್ ಅಧ್ಯಕ್ಷತೆ ವಹಿಸಿದ್ದರು. ಇ.ಪಿ.ರಾಜಗೋಪಾಲನ್ ಮುಖ್ಯ ಅತಿಥಿಯಾಗಿದ್ದರು. ಗ್ರಂಥಾಲಯ ಮತ್ತು ಸಾಮಸ್ಕøತಿಕ ವಲಯಗಳಲ್ಲಿ ನಡೆಸಿದ ಸಾಧನೆಗಾಗಿ ರಾಜ್ಯ ಗ್ರಂಥಾಲಯ ಮಂಡಳಿ ಮಾಜಿ ಕಾರ್ಯದರ್ಶಿ ನ್ಯಾಯವಾದಿ ಪಿ.ಅಪ್ಪುಕುಟ್ಟನ್ ಅವರಿಗೆ ಅಭಿನಂದನೆ ಜರುಗಿತು. ಪಿ.ಎನ್.ಪಣಿಕ್ಕರ್ ಅವರ ಸಂಸ್ಮರಣೆಯನ್ನು ಪೆÇ್ರ.ಕೆ.ಪಿ.ಜಯರಾಜನ್ ನಡೆಸಿದರು. ಗ್ರಂಥಲೋಕಂ ನ ಪ್ರಧಾನ ಸಂಪಾದಕ ಪಿ.ವಿ.ಕೆ.ಪನೆಯಾಲ್ ಪ್ರದಾನ ಭಾಷಣ ಮಾಡಿದರು. 

               ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಸುಮೇಷ್, ಪಂವಾಯತ್ ಸದಸ್ಯೆ ಟಿ.ವಿಜಯಲಕ್ಷ್ಮಿ ಉಪಸ್ಥಿತರಿದ್ದರು.

            ದಿನಾಚರಣೆ ಅಂಗವಾಗಿ ನಡೆದ ವಿವಿಧ ಆನ್ ಲೈನ್ ಸ್ಪರ್ಧೆಗಳಲ್ಲಿ ಕೆ.ಅಮೃತಾ ಮಾಚ್ಚಿಕೋಡ್, ವಿ.ನಂದನಾ ಪೆÇಯಿನಾಚಿ, ಹುಮೈದ್ ಮುಟ್ಟತ್ತೋಡಿ, ಸುಭಾಷ್ ವನಶ್ರೀ ಅವರು ಬಹುಮಾನ ವಿತರಿಸಿದರು. ಜಿಲ್ಲಾ ಕಾರ್ಯದರ್ಶಿ ಡಾ.ಪಿ.ಪ್ರಭಾಕರನ್ ಸ್ವಾಗತಿಸಿದರು. ಕೈರಳಿ ಗ್ರಂಥಾಲಯ ಕಾರ್ಯದರ್ಶಿ ಎ.ಬಾಬುರಾಜ್ ವಂದಿಸಿದರು. ಜು.7 ವರೆಗೆ ಜಿಲ್ಲೆಯ ವಿವಿಧೆಡೆ ವಾಚನ ಪಕ್ಷಾಚರಣೆ ಜರುಗಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries