ಕಾಸರಗೋಡು: ಇಂದಿನಿಂದ ಕೋವಿಡ್ ಲಾಕ್‌ಡೌನ್ ವಿನಾಯಿತಿಗಳ ಹೊಸ ಮಾರ್ಗಸೂಚಿಗಳ ಪ್ರಕಾರ ಸ್ಥಳೀಯ ಸಂಸ್ಥೆಗಳನ್ನು ಪರೀಕ್ಷಾ ಸಕಾರಾತ್ಮಕತೆಯ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಜೂನ್ 16 ರವರೆಗೆ ಟಿಪಿಆರ್ ದರ ಶೇ. 30 ಕ್ಕಿಂತ ಹೆಚ್ಚಿರುವ ಗ್ರಾಮ ಪಂಚಾಯತಿಗಳಾದ ಮಧೂರು ಮತ್ತು ಬದಿಯಡ್ಕ ಪಂಚಾಯಿತಿಗಳನ್ನು ಕ್ಯಾಟಗರಿ ಡಿ ವಿಭಾಗದಲ್ಲಿ ಸೇರಿಸಲಾಗಿದೆ.ಇಲ್ಲಿ ಪೂರ್ಣಪ್ರಮಾಣದ ಲಾಕ್ ಡೌನ್ ಇರಲಿದೆ.
20 ಕ್ಕಿಂತ ಹೆಚ್ಚಿನ ಪರೀಕ್ಷಾ ಸಕಾರಾತ್ಮಕತೆಯನ್ನು ಹೊಂದಿರುವ ಸಿ ವರ್ಗದಲ್ಲಿ ಚೆಂಗಳ, ಕುಂಬ್ಡಾಜೆ, ಪುತ್ತಿಗೆ, ಕಾರಡ್ಕ, ಕುಂಬಳೆ ಮತ್ತು ಅಜಾನೂರ್ ಗ್ರಾಮ ಪಂಚಾಯಿತಿಗಳು ಸೇರಿವೆ.
ಬಿ ಕೆಟಗರಿಯಲ್ಲಿ ಉದುಮ, ಕೈಯೂರ್-ಚೀಮೆನಿ, ನೀಲೇಶ್ವರ, ಮಡಿಕ್ಕೈ, ಮೊಗ್ರಾಲ್ ಪುತ್ತೂರು, ಕಳ್ಳಾರ್, ಚೆಮ್ಮನಾಡ್, ಪಳ್ಳಿಕ್ಕೆರೆ, ಕಾಞಂಗಾಡ್, ಈಸ್ಟ್ ಎಳೆರಿ, ಪನತ್ತಡಿ, ಕುತ್ತಿಕೋಲ್, ದೇಲಂಪಾಡಿ, ಮುಳಿಯಾರ್ , ಪಿಲಿಕೋಡ್, ಎಣ್ಮಕಜೆ, ಪುಲ್ಲೂರ್-ಪೆರಿಯಾ, ಬಳಾಲ್, ತ್ರಿಕ್ಕರಿಪುರ ಮತ್ತು ಮಂಗಲ್ಪಾಡಿ ಸೇರಿವೆ.