ತಿರುವನಂತಪುರ: ಕೋವಿಡ್ ಲಾಕ್ ಡೌನ್ ನಿಯಂತ್ರಣಗಳನ್ನು ಇಂದು ಮಧ್ಯರಾತ್ರಿಯಿಂದ ಹಂತಾನುಹಂತವಾಗಿ ಹಿಂತೆಗೆಯಲಾಗುತ್ತಿದ್ದರೂ, ದೇವಾಲಯ-ಆರಾಧನಾಲಯಗಳಿಗೆ ಭಕ್ತರ ಪ್ರವೇಶಕ್ಕೆ ಈಗ ಅನುಮತಿ ನೀಡಲಾಗುವುದಿಲ್ಲ. ಜನಸಂದಣಿಗೆ ಎಡೆಯಾಗುವ ಕೆಲವಾರು ವಿಭಾಗಗಳಿಗೆ ಇನ್ನೂ ಕೆಲವು ದಿನಗಳ ಬಳಿಕವಷ್ಟೇ ಅನ್ ಲಾಕ್ ನಿರ್ದೇಶನಗಳು ಬರಲಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಆರಾಧನಾಲಯಗಳಲ್ಲಿ ಕಾರ್ಯನಿರ್ವಹಿಸಲು ನಂಬಿಕೆ-ನಡವಳಿಕೆಗಳಿಗೆ ಸಂಬಂಧಿಸಿ ಜನರಿಗೆ ಕುತೂಹಲ ಸಹಜ. ಆದರೆ ನಾವು ಇನ್ನೂ ಕೆಲವು ದಿನಗಳವರೆಗೆ ಕಾಯಬೇಕಾಗಿದೆ ಎಂದು ಅವರು ಹೇಳಿರುವರು.