ಮಲಪ್ಪುರಂ: ಪೆರಿಂತಲ್ಮಣ್ಣದಲ್ಲಿ ಯುಡಿಎಫ್ ಅಭ್ಯಥಿಯ ಗೆಲುವನ್ನು ರದ್ದುಗೊಳಿಸುವಂತೆ ಕೋರಿ ಹೈಕೋಟ್ನಲ್ಲಿ ಅಜಿ ಸಲ್ಲಿಸಲಾಗಿದೆ. ಕ್ಷೇತ್ರದ ಎಡ ಸ್ವತಂತ್ರ ಅಭ್ಯಥಿ ಕೆ.ಪಿ. ಮೊಹಮ್ಮದ್ ಮುಸ್ತಫಾ ಅವರು ನ್ಯಾಯಾಲಯಕ್ಕೆ ಅಜಿ ಸಲ್ಲಿಸಿದ್ದಾರೆ. ಯುಡಿಎಫ್ ಅಭ್ಯಥಿ ನಜೀಬ್ ಕಾಂತಪುರಂ ವಿರುದ್ಧ ಅಜಿ ಸಲ್ಲಿಸಲಾಗಿದೆ.
ಅಂಚೆ ಮತದಾನದಲ್ಲಿ ದೋಷ ಕಂಡುಬಂದಿದೆ ಎಂದು ಅಜಿಯಲ್ಲಿ ಆರೋಪಿಸಲಾಗಿದೆ. ಕ್ಷುಲ್ಲಕ ಕಾರಣಗಳಿಗಾಗಿ ಸುಮಾರು 348 ಅಂಚೆ ಮತಗಳನ್ನು ತಿರಸ್ಕರಿಸಲಾಗಿದೆ. ಈ ಪೈಕಿ ಮೊಹಮ್ಮದ್ ಮುಸ್ತಫ ಸುಮಾರು 300 ಮತಗಳನ್ನು ಪಡೆದಿರುವ ಸಾಧ್ಯತೆಗಳಿವೆ. ಅಂಚೆ ಮತಗಳನ್ನು ತಿರಸ್ಕರಿಸಿದ್ದೇ ಮುಸ್ತಫಾ ಅವರ ಸೋಲಿಗೆ ಕಾರಣ. ಆದ್ದರಿಂದ, ಯುಡಿಎಫ್ ಅಭ್ಯಥಿಯ ಆಯ್ಕೆಯನ್ನು ರದ್ದುಗೊಳಿಸುವಂತೆ ಕೋರಿ ಅಜಿ ಸಲ್ಲಿಸಲಾಗಿದೆ. ಯೂತ್ ಲೀಗ್ ಅಭ್ಯಥಿ ನಜೀಬ್ ಕಾಂತಪುರಂ 38 ಮತಗಳ ಅಂತರದಲ್ಲಿ ಜಯಗಳಿಸಿದ್ದರು.
ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ಯುಡಿಎಫ್ ಅಭ್ಯಥಿಗಳ ಗೆಲುವನ್ನು ರದ್ದುಗೊಳಿಸುವಂತೆ ಕೋರಿ ಹೈಕೋಟ್ನಲ್ಲಿ ಸಲ್ಲಿಸಿದ ಎರಡನೇ ಅಜಿ ಇದಾಗಿದೆ. ಯುಡಿಎಫ್ ಶಾಸಕ ಕೆ ಬಾಬು ಅವರ ಆಯ್ಕೆ ರದ್ದುಗೊಳಿಸುವಂತೆ ಕೋರಿ ಸ್ವರಾಜ್ ಅವರು ಹೈಕೋಟ್ ನ್ನು ಸಂಪಕಿಸಿದ್ದರು.