ಕೋಝಿಕ್ಕೋಡ್: ಮುಂದುವರಿಯುತ್ತಿರುವ ಸಂಕಷ್ಟ, ಲಾಕ್ ಡೌನ್ ಕಾರಣ ಬಹುಸಂಖ್ಯೆಯ ಜನರು ಆರ್ಥಿಕ ಸಂದಿಗ್ದತೆ ಎದುರಿಸುವ ಈ ಕಾಲಘಟ್ಟದಲ್ಲಿ ಈ ಕೂಡಲೇ ಖರ್ಚು, ನೈರ್ಮಲ್ಯ, ವಾಹನ ಸಂಚಾರ ಮೊಟಕು ಮತ್ತು ಆರೋಗ್ಯ ದೃಷ್ಟಿಯಿಂದ ಉತ್ತಮವಾದ ಸೈಕಲ್ ಬಳಕೆಯನ್ನು ಪ್ರೋತ್ಸಾಹಿಸಲು, ಪ್ರಚಾರಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ಕ್ರಮಗಳಿಗೆ ಮುಂದಾಗಬೇಕೆಂದು ವಿಶ್ವ ಸೈಕಲ್ ದಿನಾಚರಣೆಯ ಅಂಗವಾಗಿ ನಡೆದ ಕೇರಳ ಬೈಸಿಕಲ್ ಪ್ರಮೋಶನ್ ಕೌನ್ಸಿಲ್ ನ ಆನ್‍ಲೈನ್ ಸಭೆಯಲ್ಲಿ ವಿನಂತಿಸಲಾಗಿದೆ.
ಕಡಿಮೆ ಬೆಲೆಗೆ ಸೈಕಲ್ ಖರೀದಿಸಲು ಮತ್ತು ಪ್ರಸ್ತುತ ಶೇ. 12 ಜಿಎಸ್‍ಟಿಯನ್ನು ಮನ್ನಾ ಮಾಡುವಂತೆ ಕೇಂದ್ರ ಮತ್ತು ಕೇರಳ ಸರ್ಕಾರಗಳಿಗೆ ಸಭೆ ಕರೆ ನೀಡಿತು.
ಹೆಚ್ಚಿದ ಬಳಕೆ ಮತ್ತು ಬೈಸಿಕಲ್ ಗಳ ದುರಸ್ತಿ ಹಿನ್ನೆಲೆಯಲ್ಲಿ ರಜಾದಿನಗಳು ಸೇರಿದಂತೆ ಬೈಸಿಕಲ್ ಮಾರಾಟ ಮತ್ತು ದುರಸ್ತಿ ಸಂಸ್ಥೆಗಳಿಗೆ ಮುಕ್ತವಾಗಿರಲು ಸಂಬಂಧಪಟ್ಟವರು ಆದಷ್ಟು ಬೇಗ ಅನುಮತಿ ನೀಡಬೇಕು ಎಂದು ಸಭೆ ಒತ್ತಾಯಿಸಿತು.
ವರ್ಷಗಳ ಹಿಂದೆ, ಕೌನ್ಸಿಲ್ ನಿಯೋಗವು ಇತರ ದೇಶಗಳಾದ ಚೀನಾ - ಯುರೋಪ್ - ಯುಕೆ - ಯುಎಸ್ ಎಸ್, ಯುಎಇ ಮತ್ತು ಶ್ರೀಲಂಕಾಗಳಿಗೆ ಅಧ್ಯಯನ ತಂಡವನ್ನು ಕಳುಹಿಸಿತ್ತು. ಮತ್ತು ವಿವರವಾದ ವರದಿ ಮತ್ತು ಅಗ್ಗದ ಬೆಲೆಗೆ ಸೈಕಲ್ ಗಳನ್ನು ಒದಗಿಸುವ ಯೋಜನೆಯನ್ನು ಸಲ್ಲಿಸಿತ್ತು. ಆದರೆ ಅಂದಿನ ರಾಜ್ಯ ಸರ್ಕಾರ ಶೇ.5 ತೆರಿಗೆಯನ್ನಾದರೂ ಮನ್ನಾ ಮಾಡಲು ನಿರಾಕರಿಸಿತ್ತು.
ಸೈಕ್ಲಿಸ್ಟ್ ಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಪರಿಗಣನೆ ಮತ್ತು ರಕ್ಷಣೆ ನೀಡಲಾಗುತ್ತದೆ. ಕೇರಳ ಮುಖ್ಯಮಂತ್ರಿ, ಹಣಕಾಸು ಸಚಿವರು, ಪಿಡಬ್ಲ್ಯುಡಿ ಸಚಿವರು ಮತ್ತು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲು ಸಭೆ ನಿರ್ಧರಿಸಿದ್ದು, ಸರ್ಕಾರಿ ಮಟ್ಟದಲ್ಲಿ ಸೈಕಲ್ ಮಾರ್ಗ, ಜಿಎಸ್‍ಟಿ ವಿನಾಯಿತಿ, ಪ್ರಚಾರ ನಡೆಸಲು ಸಭೆ ಮನವಿ ಮಾಡಿದೆ.
ಕೇರಳದಲ್ಲಿ ಯುವಕರು ವಿದೇಶಿ ಮಾದರಿ ಬೈಸಿಕಲ್ ಕ್ಲಬ್‍ಗಳು ಮತ್ತು ಬೈಸಿಕಲ್ ಬೂತ್‍ಗಳನ್ನು ಪರಿಚಯಿಸುವುದು, ಗೇರ್ ಗಳೊಂದಿಗೆ ಉತ್ತಮ ಗುಣಮಟ್ಟದ ಬೈಸಿಕಲ್‍ಗಳನ್ನು ಬಳಸುವುದು ಮತ್ತು ಕೋಝಿಕ್ಕೋಡ್ ಬೀಚ್‍ನಲ್ಲಿ ಸೈಕಲ್ ಮಾರ್ಗವನ್ನು ನಿರ್ಮಿಸುವುದು ಪ್ರಾಥಮಿಕ ಹಂತದಲ್ಲಿ ಅತ್ಯಗತ್ಯವಾದ ಗಮನಾರ್ಹ ಕಾರ್ಯಗಳು ಆಗಬೇಕು ಎಂದು ಸಭೆ ತೀರ್ಮಾನಿಸಿತು.
ಕೊಚ್ಚಿ ಮೆಟ್ರೋ ನಿಲ್ದಾಣ ಥೈಕುಡಮ್ ನಲ್ಲಿ ಈಗಾಗಲೇ ಸೈಕಲ್ ಬೂತ್ ಪ್ರಾರಂಭವಾಗಿದೆ. ರೈಲ್ವೆ ನಿಲ್ದಾಣಗಳು, ಸಿವಿಲ್ ಸ್ಟೇಷನ್‍ಗಳು, ಬಸ್ ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಬೈಸಿಕಲ್ ಬೂತ್‍ಗಳನ್ನು ಒಂದೇ ಮಾದರಿಯಲ್ಲಿ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕೌನ್ಸಿಲ್ ಅಧ್ಯಕ್ಷ ಸಿ.ಇ.ಚಕ್ಕುಣ್ಣಿ ವಹಿಸಿದ್ದರು. ಆರಂಭಿಕ ದಿನಗಳಲ್ಲಿ ಬೈಸಿಕಲ್ ತುರ್ತು ಅಗತ್ಯ ಮತ್ತು ಪೋಸ್ಟ್‍ಮ್ಯಾನ್‍ಗಳು, ಬಿಲ್ ಸಂಗ್ರಹಕಾರರು, ಪುರಸಭೆಯ ಆರೋಗ್ಯ ನಿರೀಕ್ಷಕರು ಮತ್ತು ವಿದ್ಯುತ್ ಮತ್ತು ದೂರವಾಣಿ ಲೈನ್‍ಮೆನ್‍ಗಳಿಗೆ ಬೈಸಿಕಲ್ ಭತ್ಯೆ ನೀಡಲಾಗುತ್ತಿದೆ ಎಂದು ತಮಗೆ ತಿಳಿದಿದೆ ಎಂದು ಅಧ್ಯಕ್ಷರು ಗಮನಸೆಳೆದರು.
ಬೈಸಿಕಲ್ ಮಾರಾಟ - ಬೈಸಿಕಲ್ ದುರಸ್ಥಿ ಅಂಗಡಿಗಳು ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾರ್ಯವೆಸಗದ ಕಾರಣ ಸಮಸ್ಯೆಗಳಾಗಿವೆ ಎಂದು ಅಂಗಡಿಯೊಂದರ ಮಾಲಕರಾದ ಕೆ.ಸಿ.ಕುರ್ಯಾಕೋಸ್(ತೃಶೂರ್) ಮತ್ತು ನ್ಯೂಬಝಾರ್ ಮರ್ಚೆಂಟ್ ಅಸೋಸಿಯೇಶನ್ ಅಧ್ಯಕ್ಷ ಕೆ.ಪ್ರೇಂಜಿ ಎಂಬವರು ಸಭೆಯಲ್ಲಿ ಉಲ್ಲೇಖಿಸಿದರು.
ಕೌನ್ಸಿಲ್ ಪೋಷಕ ಡಾ.ಕೆ.ಮೊಯ್ದುಮತ್ತು ಡಾ.ಎ.ವಿ. ಅನೂಪ್, ಎಂ.ವಿ. ಕುಂಞಮು ಮತ್ತು ಕನ್ವೀನರ್ಸ್ ಎಂ.ಎಂ. ಸೆಬಾಸ್ಟಿಯನ್, ಎ.ಸಿ. ಗೀವರ್, ಟಿಪಿ. ವಾಸು ಮತ್ತು ಉಪಾಧ್ಯಕ್ಷರು ನ್ಯಾಯವಾದಿ. ಎಂ.ಕೆ.ಅಯ್ಯಪ್ಪನ್, ಜಾಯ್ ಜೋಸೆಫ್. ಕೆಪಿಐ ಅಜಯನ್, ಇತರ ಪದಾಧಿಕಾರಿಗಳಾದ ಸಿ.ವಿ.ಜೋಶಿ, ಜಿಯೋ ಜಾಬ್, ಸಿ.ಮುಹಮ್ಮದ್ ಮಹಾಸುಮ್, ಎನ್.ಪಿ. ರಿಯಾಜ್ ಮತ್ತು ವಿಶೇಷ ಆಹ್ವಾನಿತರಾದ ಕೆ. ಸಿ. ಕುರಿಯಾಕೋಸ್, ಕೆ ಪ್ರೇಮ್‍ಜಿ ಮಾತನಾಡಿದರು. ಕನ್ವೀನರ್ ಎ.ಸಿ. ಗೀವರ್ ಸ್ವಾಗತಿಸಿ, ಸಿ.ಸಿ. ಮನೋಜ್ ವಂದಿಸಿದರು.