HEALTH TIPS

ನಿಮ್ಗೆ ಗೊತ್ತಾ? Delete ಮಾಡಿದ ನಂತ್ರವೂ ನೀವು ʼWhatsApp ಮೇಸೆಜ್‌ʼಗಳನ್ನ ಓದ್ಬೋದು: ಈ ಟ್ರಿಕ್‌ ಅನುಸರಿಸಿ

            ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್ ತನ್ನ ಬಳಕೆದಾರರಿಗೆ ಸಾಕಷ್ಟು ವೈಶಿಷ್ಟ್ಯಗಳನ್ನು ನೀಡುತ್ತಿದೆ. ಈ ವೈಶಿಷ್ಟ್ಯಗಳಲ್ಲಿ ಒಂದು ಡಿಲೀಟ್ ಫಾರ್ ಎವೆರಿವನ್ ಮೇಸೇಜ್. ಈ ವೈಶಿಷ್ಟ್ಯವು ವಾಟ್ಸಪ್‌ʼನಲ್ಲಿ ಕಳುಹಿಸಲಾದ ಸಂದೇಶಗಳು ಕಣ್ಮರೆಯಾಗಲು ಅನುವು ಮಾಡಿ ಕೊಡುತ್ತದೆ. ಕೆಲವೊಮ್ಮೆ ನಿಮ್ಮ ಸ್ನೇಹಿತರು ಅಥವಾ ಆಪ್ತರು ನಿಮಗೆ ಕಳುಹಿಸಿದ ಸಂದೇಶವನ್ನ ಅಳಿಸಿರಬಹುದು. ಆದಾಗ್ಯೂ, ಕೆಲವೊಮ್ಮೆ ನಾವು ಅಳಿಸಿದ ಸಂದೇಶಗಳನ್ನ ಓದಲು ಬಯಸುತ್ತೇವೆ. ಈ ಬಯಕೆಗೆ ಬೇರೆ ಬೇರೆ ಕಾರಣಗಳಿರ್ಬೋದು.

         ಇಂದು, ನೀವು ವಾಟ್ಸಪ್ʼನಲ್ಲಿ ಅಳಿಸಿದ ನಂತರವೂ ಸಂದೇಶವನ್ನ ಹೇಗೆ ಓದಬೇಕು ಅನ್ನೋದನ್ನ ತಿಳಿಸಿಕೊಡ್ತೇವೆ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್ ಫೋನ್ʼನಲ್ಲಿ ಥರ್ಡ್‌ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಬೇಕು. ಈ ಅಪ್ಲಿಕೇಶನ್ ನಿಮ್ಮ ಫೋನ್ʼನಲ್ಲಿ ಅಧಿಸೂಚನೆಗಳನ್ನು ಉಳಿಸುತ್ತೆ. ಯಾರಾದ್ರೂ ನಿಮಗೆ ವಾಟ್ಸಪ್ʼನಲ್ಲಿ ಸಂದೇಶ ಕಳುಹಿಸಿದ ತಕ್ಷಣ, ಅಧಿಸೂಚನೆಯನ್ನ ಸಹ ಉಳಿಸಲಾಗುತ್ತೆ. ಹಾಗಾಗಿ ಸಂದೇಶ ಅಳಿಸಿದ ನಂತರವೂ, ಅದನ್ನ ಈ ಅಪ್ಲಿಕೇಶನ್ ಮೂಲಕ ಓದಬಹುದು.

                      ಅಳಿಸಿದ ವಾಟ್ಸಪ್ ಸಂದೇಶಗಳನ್ನು ಓದಿ..!

1. ಪ್ಲೇ ಸ್ಟೋರ್‌ಗೆ ಹೋಗಿ Notisave ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿ. ಈ ಆಯಪ್ 1 ಕೋಟಿಗೂ ಹೆಚ್ಚು ಡೌನ್ ಲೋಡ್ʼಗಳನ್ನು ಪಡೆದಿದೆ.

2. ಆಪ್ ಅನ್ನು ಸ್ಥಾಪಿಸಿದ ನಂತ್ರ ಅಗತ್ಯವಿರುವ ಎಲ್ಲಾ ಅನುಮತಿಗಳನ್ನ ನೀಡಿ. ಅಪ್ಲಿಕೇಶನ್ ಅಧಿಸೂಚನೆಗಳು, ಫೋಟೋಗಳು, ಮಾಧ್ಯಮ ಮತ್ತು ಫೈಲ್ʼಗಳನ್ನು ಓದಬೇಕು ಮತ್ತು ಸ್ವಯಂ-ಪ್ರಾರಂಭ ಆಯ್ಕೆಯನ್ನ ಆನ್ ಮಾಡಿ.

3. ಒಮ್ಮೆ ನೀವು ಇದನ್ನ ಮಾಡಿದ ನಂತರ, ಅಪ್ಲಿಕೇಶನ್ ನಿಮ್ಮ ಫೋನ್ʼನಲ್ಲಿ ಅಧಿಸೂಚನೆ ಲಾಗ್ʼಗಳನ್ನು ಇರಿಸಲು ಪ್ರಾರಂಭಿಸುತ್ತೆ, ಇದರಲ್ಲಿ ವಾಟ್ಸಪ್ ಸಂದೇಶಗಳು ಸೇರಿವೆ.

4. ಬಳಕೆದಾರರು ಒಂದು ಸಂದೇಶವನ್ನ ವಾಟ್ಸಪ್ʼನಲ್ಲಿ ಕಳುಹಿಸಿದ ನಂತ್ರ ಅದನ್ನು ಅಳಿಸಿದ್ರೆ, ನೀವು ಅದನ್ನು ಈ ಅಪ್ಲಿಕೇಶನ್ ಓದಲು ಸಾಧ್ಯವಾಗುತ್ತದೆ. ತಪ್ಪಾಗಿ ಸ್ವೈಪ್ ಮಾಡಿದ ಅಧಿಸೂಚನೆಗಳನ್ನ ಸಹ ನೀವು ಓದಬಹುದು.

5. ಗಮನಿಸಬೇಕಾದ ಅಂಶವೆಂದರೆ, ನೀವು ಅಪ್ಲಿಕೇಶನ್ʼನ ಉಚಿತ ಆವೃತ್ತಿಯನ್ನ ಬಳಸಿದರೆ, ನೀವು ಜಾಹೀರಾತುಗಳನ್ನ ಸಹ ವೀಕ್ಷಿಸಬೇಕಾಗುತ್ತೆ. ಇನ್ನೀದು ಪಾವತಿಸಿದ ಆವೃತ್ತಿಯನ್ನ ಸಹ ಹೊಂದಿದೆ.               ಇದಕ್ಕಾಗಿ ನಿಮ್ಗೆ ತಿಂಗಳಿಗೆ ರೂ.65 ಶುಲ್ಕವನ್ನು ವಿಧಿಸಲಾಗುತ್ತದೆ. ಇದಲ್ಲದೆ, ಅಪ್ಲಿಕೇಶನ್ ಸರಳ ಪಠ್ಯ ಸಂದೇಶಗಳನ್ನು ಮಾತ್ರ ಮರು ಪಡೆಯಬಹುದು. ಆದ್ರೆ, ಜಿಐಎಫ್ʼಗಳು, ಇಮೇಜ್ ಮತ್ತು ವೀಡಿಯೊದಂತಹ ಮಾಧ್ಯಮ ಫೈಲ್ʼಗಳನ್ನ ಮರುಪಡೆಯಲು ಸಾಧ್ಯವಿಲ್ಲ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries