ನವದೆಹಲಿ: ಸಿಐಎಸ್‌ಸಿಇ (ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್) 10 ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಶನಿವಾರ ಜುಲೈ 24ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು ಎಂದು ಸಿಐಎಸ್‌ಸಿಇ ಮಂಡಳಿಯ ಕಾರ್ಯದರ್ಶಿ ಗೆರ‍್ರೆ ಅರ್ಥೂನ್ ಶುಕ್ರವಾರ ತಿಳಿಸಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಎರಡೂ ತರಗತಿಗಳ ಅಂತಿಮ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. 'ಪರ್ಯಾಯ ಮೌಲ್ಯಮಾಪನ ನೀತಿಯ' ಅನ್ವಯ ಪರೀಕ್ಷಾ ಫಲಿತಾಂಶಗಳನ್ನು ನಿರ್ಧರಿಸಿ ಪ್ರಕಟಿಸಲಾಗುತ್ತದೆ ಎಂದು ಮಂಡಳಿ ತಿಳಿಸಿದೆ.