ತ್ರಿಶೂರ್: ಸಿಪಿಎಂ ಆಡಳಿತದ ಕರುವಣ್ಣೂರ್ ಸಹಕಾರ ಬ್ಯಾಂಕ್ ಹಗರಣದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಗೊಂಡಿದೆ. ಬ್ಯಾಂಕಿನ ವ್ಯವಹಾರದ ಮರೆಯಲ್ಲಿ ಸುಮಾರು 1,000 ಕೋಟಿ ರೂ.ಗಳ ವಂಚನೆ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ಗುರುತಿಸಲಾಗಿದೆ. ಬ್ಯಾಂಕಿನ ಹೆಸರನ್ನು ಬಳಸಿ ರೆಸಾರ್ಟ್ ನಿರ್ಮಿಸಲು ಬೃಹತ್ ಮೊತ್ತದ ಹಣ ದುರುಪಯೋಗಪಡಿಸಲಾಗಿದ್ದು, ಅದರಲ್ಲಿ ಕೋಟಿ ವಿದೇಶಿ ಹೂಡಿಕೆಗಳೂ ಹೊಂದಿವೆ.
ಕಳೆದ ಐದು ವರ್ಷಗಳಲ್ಲಿ ಮಂಡಳಿಯು ಈ ಮೊತ್ತವನ್ನು ದುರುಪಯೋಗಪಡಿಸಿದೆ. ವಂಚಕರು ಬೇನಾಮಿ ವಹಿವಾಟಿನ ಮೂಲಕ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದೆ. ಇದಲ್ಲದೆ, ಮಂಡಳಿಯು ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸುವ ಮೂಲಕ ಮತ್ತು ಅಸ್ತಿತ್ವದಲ್ಲಿಲ್ಲದ ಭೂಮಿಯನ್ನು ಅಡಮಾನಗೊಳಿಸುವ ಮೂಲಕ ಕೋಟಿಯನ್ನು ಗುಳುಂಲರಿಸಿರುವುದು ವೇದ್ಯವಾಗಿದೆ.
ಬ್ಯಾಂಕಿಂಗ್ ಸೋಗಿನಲ್ಲಿ ವ್ಯಾಪಕ ಭೂ ವಂಚನೆಯೂ ನಡೆದಿದೆ. ದುಬಾರಿ ಜಮೀನಿನ ಆಧಾರದ ಮೇಲೆ ಸಾಲಗಾರರಿಂದ ಭೂಮಿಯನ್ನು ಶೀಘ್ರವಾಗಿ ಮುಟ್ಟುಗೋಲು ಹಾಕಿಕೊಂಡ ಬಳಿಕ ಭೂಮಿಯನ್ನು ಮಾರಾಟಮಾಡಿರುವುದೂ ಕಂಡುಬಂದಿದೆ. ಆದರೆ ವಶಪಡಿಸಿದ ಭೂಮಿಗಳನ್ನು ಮಾಡಿರುವುದು ಎಲ್ಲಿಯೂ ದಾಖಲಾಗದೆ ಬೃಹತ್ ಮೊತ್ತ ವಂಚಿಸಿರುವುದು ತನಿಖೆಯಲ್ಲಿ ಕಂಡುಬಂದಿದೆ.