ಕಾಸರಗೋಡು: ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದವರನ್ನು ಪತ್ತೆ ಮಾಡಿ ತರಬೇತಿ ನೀಡುವ ಪೋಲೀಸ್ ಇಲಾಖೆಯ 'ಹೋಪ್' ಯೋಜನೆಯ ಮೂಲಕ ಯಶಸ್ಸು ಕಂಡಿದೆ. ಯೋಜನೆಯನ್ವಯ ಈ ಬಾರಿ ಎಸ್ಸೆಸೆಲ್ಸಿ ಪರೀಕ್ಷೆಗೆ ಹಾಜರಾದ ಎಲ್ಲವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಯೋಜನೆಯನ್ವಯ ಈ ಬಾರಿ 24 ಮಂದಿ ಮಕ್ಕಳು, ಕಳೆದ ವರ್ಷ 22 ಮಂದಿ ಮಕ್ಕಳು ಉತ್ತೀರ್ಣರಾಗಿದ್ದಾರೆ.
ಕೋವಿಡ್ ಮುಗ್ಗಟ್ಟಿನ ಅವಧಿಯಲ್ಲೂ ಆನ್ ಲೈನ್ ಪ್ಲಾಟ್‍ಫಾರಂ ಮೂಲಕ ಮತ್ತು ಕಾಸರಗೋಡು ನಿಯಂತ್ರಣ ಕೊಠಡಿಯಲ್ಲಿ ಸಜ್ಜುಗೊಳಿಸಿದ ತರಗತಿ ಕೊಠಡಿಗಳಲ್ಲಿ ಕಲಿಕೆಗೆ ಸೌಲಭ್ಯ ಒದಗಿಸಲಾಗಿತ್ತು. ಜತೆಗೆ ಚಹಾ ಮತ್ತು ಲಘು ಉಪಹಾರವನ್ನೂ ವಿದ್ಯಾರ್ಥಿಗಳಿಗೆ ಒದಗಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರಿಶ್ಚಂದ್ರ ನಾಯ್ಕ್, ಎಸ್.ಐ. ರಾಜೀವನ್, ಸಿ.ಪಿ.ಗಳಾದ ದಿನೂಪ್, ಸುನೀಷ್, ವಿಜೇಶ್,ನಿವಿನ್ ಮತ್ತು ಮೋಟಿವೇಟರ್ ಶಿಕ್ಷಕರಾದ ನಿರ್ಮಲ್ ಕುಮಾರ್ ಕಾಡಗಂ ಕಾಸರಗೋಡು ಜಿಲ್ಲೆಯಲಿ ್ಲಈ ಯೋಜನೆಗೆ ನೇತೃತ್ವ ವಹಿಸುತ್ತಿದ್ದಾರೆ. ಪೆÇಲೀಸ್ ಇಲಾಖೆಯಲ್ಲಿ ಶಿಕ್ಷಕರಾಗಬಲ್ಲ ಅರ್ಹತೆಯಿರುವ ಸಿಬ್ಬಂದಿ ಈ ಮಕ್ಕಳಿಗೆ ಕಲಿಸುತ್ತಿದ್ದಾರೆ. ಈ ಬಾರಿ ಕೆಲವು ಆಸಕ್ತ ಶಿಕ್ಷಕರೂ ಈ ಯೋಜನೆಗೆ ಹೆಗಲು ನೀಡಿ ಸಹಕರಿಸಿದ್ದಾರೆ ಎಂದು ಎಎಸ್‍ಪಿ ಹರಿಶ್ಚಂದ್ರ ನಾಯ್ಕ್ ತಿಳಿಸಿದ್ದಾರೆ.