ಕೋಝಿಕೋಡ್: ನಿರ್ಮಾಣ ವಲಯದ ಕಾರ್ಮಿಕನೋರ್ವ ಈ ಬಾರಿಯ ವಿಷು ಬಂಪರ್ ಲಾಟರಿಯ ಪ್ರಥಮ ಬಹುಮಾನವನ್ನು ಗೆದ್ದಕೊಂಡಿರುವನು. ತಿರುವಳ್ಳೂರಿನ ವಡಕರ ಮೂಲದ ಶಿಜು 10 ಕೋಟಿ ರೂ.ಗಳ ಮೌಲ್ಯದ ವಿಶು ಬಂಪರ್‌ಗೆ ಭಾಜನನಾದ ಅದೃಷ್ಟವಂತ.
ಜುಲೈ 22 ರಂದು ವಡಗರದಲ್ಲಿ ಬಿಕೆ ಏಜೆನ್ಸಿ ಮಾರಾಟ ಮಾಡಿದ ಟಿಕೆಟ್ ಗೆ ಪ್ರಥಮ ಬಹುಮಾನ ದಕ್ಕಿದೆ ಎಂದು ದೃಢಪಡಿಸಲಾಯಿತು. ಆದರೆ ವಿಜೇತರನ್ನು ಆರಂಭದಲ್ಲಿ ಪತ್ತೆಹಚ್ಚಲಾಗಲಿಲ್ಲ.
ತಿರುವಳ್ಳೂರಿನಲ್ಲಿ ತರಕಾರಿ ವ್ಯಾಪಾರಿಯೊಬ್ಬರಿಗೆ ಟಿಕೆಟ್ ನೀಡಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವದಂತಿಗಳ ನಂತರ, ಅವರ ಹೂಡಿಕೆಯನ್ನು ಸ್ವೀಕರಿಸಲು ಬ್ಯಾಂಕುಗಳು ಮತ್ತು ಸ್ಥಳೀಯರಿಂದ ಅನೇಕ ಆಫರ್ ಗಳು ನಡೆದವು. ನಂತರ, ಅವರು ತನಗೆ ಯಾವುದೇ ಲಾಟರಿ ಬಹುಮಾನ ಬಂದಿಲ್ಲ ಎಂದು ದಮ್ಮಯ್ಯ ಹಾಕಿಯೂ ಯಾರೂ ನಂಬಿರಲಿಲ್ಲ.ಕೊನೆಗೆ ಆ ವ್ಯಾಪಾರಿ ಅಲ್ಪದಿನ ಕಣ್ಮರೆಯಾಗಬೇಕಾಯಿತು.