ತಿರುವನಂತಪುರ: ಕೇರಳದಲ್ಲಿ ಇಂದು 11,586 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 1779, ತ್ರಿಶೂರ್ 1498, ಕೋಝಿಕ್ಕೋಡ್ 1264, ಎರ್ನಾಕುಳಂ 1153, ಪಾಲಕ್ಕಾಡ್ 1032, ಕೊಲ್ಲಂ 886, ಕಾಸರಗೋಡು 762, ತಿರುವನಂತಪುರ 727, ಆಲಪ್ಪುಳ 645, ಕಣ್ಣೂರು 609, ಕೊಟ್ಟಾಯಂ 540, ಪತ್ತನಂತಿಟ್ಟು 240, ಇಡುಕ್ಕಿ 230, ವಯನಾಡ್ 221 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 1,09,382 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ 10.59 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,63,57,662 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 135 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 16,170 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 45 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ ಒಟ್ಟು 10,943 ಮಂದಿ ಜನರಿಗೆ ಸೋಂಕು ತಗುಲಿತು. 534 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 1726, ತ್ರಿಶೂರ್ 1486, ಕೋಝಿಕೋಡ್ 1241, ಎರ್ನಾಕುಳಂ 1134, ಪಾಲಕ್ಕಾಡ್ 729, ಕೊಲ್ಲಂ 882, ಕಾಸರಗೋಡು 744, ತಿರುವನಂತಪುರ 665, ಆಲಪ್ಪುಳ 640, ಕಣ್ಣೂರು 532, ಕೊಟ್ಟಾಯಂ 502, ಪತ್ತನಂತಿಟ್ಟು 235, ಇಡುಕ್ಕಿ 216, ವಯನಾಡ್ 211 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು ರಾಜ್ಯಾದ್ಯಂತ 64 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಪಾಲಕ್ಕಾಡ್ 14, ಕಾಸರಗೋಡು 11, ಕಣ್ಣೂರು 10, ವಯನಾಡ್ 7, ತ್ರಿಶೂರ್ 5, ಕೊಲ್ಲಂ 4, ಎರ್ನಾಕುಳಂ 3, ತಿರುವನಂತಪುರಂ, ಪತ್ತನಂತಿಟ್ಟು, ಕೊಟ್ಟಾಯಂ, ಮಲಪ್ಪುರಂ ಮತ್ತು ಕೋಝಿಕ್ಕೋಡ್ 2 ಎಂಬಂತೆ ಸೋಂಕು ಪತ್ತೆಯಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 14,912 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1031, ಕೊಲ್ಲಂ 1091, ಪತ್ತನಂತಿಟ್ಟು 455, ಆಲಪ್ಪುಳ 635, ಕೊಟ್ಟಾಯಂ 999, ಇಡುಕ್ಕಿ 290, ಎರ್ನಾಕುಳಂ 1477, ತ್ರಿಶೂರ್ 2022, ಪಾಲಕ್ಕಾಡ್ 1129, ಮಲಪ್ಪುರಂ 2244, ಕೋಝಿಕೋಡ್ 1687, ವಯನಾಡ್ 304, ಕಣ್ಣೂರು 741, ಕಾಸರಗೋಡು 807 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 1,36,814 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 31,29,628 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,33,215 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 4,07,102 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 26,113 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2219 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪಿಆರ್ 5ಕ್ಕಿಂತ ಕೆಳಗೆ 73, 5 ರಿಂದ 10 ರ ನಡುವೆ 335, 10 ರಿಂದ 15 ರ ನಡುವೆ 355, 15 ಕ್ಕಿಂತ ಮೇಲ್ಪಟ್ಟಯ 271 ಸ್ಥಳೀಯಾಡಳಿತ ಸಂಸ್ಥೆಗಳು ರಾಜ್ಯದಲ್ಲಿವೆ.