HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ "ಸುಭಿಕ್ಷ" ಕೃಷಿ: 1174.97 ಹೆಕ್ಟೇರ್ ಬಂಜರು ಭೂಮಿಯಲ್ಲಿ ಜರುಗಿದ ರೈತಾಪಿ ಚಟುವಟಿಕೆಗಳು: ಕಾಞಂಗಾಡು ಬ್ಲೋಕ್ ಪಂಚಾಯತ್ ಜಿಲ್ಲೆಯಲ್ಲೇ ಪ್ರಥಮ

   

               ಕಾಸರಗೋಡು: ರಾಜ್ಯ ಸರಕಾರದ "ಸುಭಿಕ್ಷ ಕೇರಳಂ" ಯೋಜನೆಯ ಅನುಷ್ಠಾನದಲ್ಲಿ ಕಾಸರಗೋಡು ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.  

               ಜಿಲ್ಲೆಯ 1174.97 ಹೆಕ್ಟೇರ್ ಬಂಜರು ಜಾಗದಲ್ಲಿ ಕೃಷಿ ನಡೆಸಲಾಗಿದೆ. ಇದರಲ್ಲಿ 560.39 ಹೆಕ್ಟೇರ್ ಜಾಗದಲ್ಲಿ ಭತ್ತದ ಕೃಷಿ, 360.3 ಹೆಕ್ಟೇರ್ ಜಾಗದಲ್ಲಿ ಮರಗೆಣಸು ಬೆಳೆ, 193.887 ಹೆಕ್ಟೇರ್ ಜಾಗದಲ್ಲಿ ತರಕಾರಿ, 38.5 ಹೆಕ್ಟೇರ್ ಜಾಗದಲ್ಲಿ ಹಣ್ಣು ಬೆಳೆ, 15.4 ಹೆಕ್ಟೇರ್ ಜಾಗದಲ್ಲಿ ಅಲಸಂಡೆ ಇತ್ಯಾದಿಗಳ ಕೃಷಿ, 6.5 ಹೆಕ್ಟೇರ್ ಜಾಗದಲ್ಲಿ ಕಿರು ಧಾನ್ಯಗಳ ಬೆಳೆ ನಡೆಸಲಾಗಿದೆ. 

                ಸುಭಿಕ್ಷ ಕೇರಳಂ ಯೋಜನೆಯ ಅಂಗವಾಗಿ ಹೆಚ್ಚುವರಿ ಬಂಜರು ಜಾಗವನ್ನು ಕೃಷಿಯೋಗ್ಯವಾಗಿಸುವ ಮೂಲಕ ಕಾಞಂಗಾಡು ಬ್ಲೋಕ್ ಪಂಚಾಯತ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಇಲ್ಲಿ 308.40 ಹೆಕ್ಟೇರ್ ಬಂಜರು ಭೂಮಿಯಲ್ಲಿ ಕೃಷಿ ನಡೆಸಲಾಗಿದೆ. ಪರಪ್ಪ ಬ್ಲೋಕ್ ಪಂಚಾಯತ್ 227.94 ಹೆಕ್ಟೇರ್ ಬಂಜರು ಜಾಗದಲ್ಲಿ ಕೃಷಿ ನಡೆಸಿ ಈ ಸಾಲಿನಲ್ಲಿ ಎರಡನೇ ಸ್ಥಾನ ಪಡೆದಿದೆ. ನೀಲೇಶ್ವರ ಬ್ಲೋಕ್ ಪಂಚಾಯತ್ 152.5 ಹೆಕ್ಟೇರ್ ಬಂಜರು ಜಾಗದಲ್ಲಿ ಕೃಷಿ ನಡೆಸಿ ಮೂರನೇ, ಕಾರಡ್ಕ ಬ್ಲೋಕ್ ಪಂಚಾಯತ್ 255.00 ಹೆಕ್ಟೇರ್ ಬಂಜರು ನೆಲದಲ್ಲಿ ಕೃಷಿ ನಡೆಸಿ ನಾಲ್ಕನೇ, ಕಾಸರಗೋಡು ಬ್ಲೋಕ್ ಪಂಚಾಯತ್ 139.15 ಹೆಕ್ಟೇರ್ ಬಂಜರು ಜಾಗದಲ್ಲಿ ಕೃಷಿ ನಡೆಸಿ ಐದನೇ, ಮಂಜೇಶ್ವರ ಬ್ಲೋಕ್ ಪಂಚಾಯತ್ 91.98 ಹೆಕ್ಟೇರ್ ಬಂಜರು ಜಾಗದಲ್ಲಿ ಕೃಷಿ ನಡೆಸಿ 6ನೇ ಸ್ಥಾನಗಳನ್ನು ಪಡೆದುಕೊಂಡಿವೆ. 

                 ಕೃಷಿ ಅಧಿಕಾರಿಗಳು, ಇತರ ಕೃಷಿ ಇಲಖೆ ಸಿಬ್ಬಂದಿ, ಗ್ರಾಮ ಪಂಚಾಯತ್ ಪದಾಧಿಕಾರಿಗಳ, ಸ್ವಯಂ ಸೇವಾ ಸಂಘಟನೆಗಳ ಸಕ್ರಿಯ ಜಂಟಿ ಯತ್ನಗಳ ಪರಿಣಾಮ ಈ ಜನಪರ ಯಜ್ಞ ಯಶಸ್ವಿಯಾಗಿದೆ. 

                ಸುಭಿಕ್ಷ ಕೇರಳಂ ಯೋಜನೆ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ 12928.56 ಟನ್ ಆಹಾರ ಧಾನ್ಯಗಳ ಉತ್ಪಾದನೆ ನಡೆದಿದೆ. ಈ ಮೂಲಕ ಸರಿಸುಮಾರು 15 ಕೋಟಿ ರೂ.ನ ಅಧಿಕ ಆದಾಯ ಜಿಲ್ಲೆಗೆ ಲಭಿಸಿದೆ ಎಂದು ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ ತಿಳಿಸಿದರು. 

             ನೇಜಿ ಸಾಮಾಗ್ರಿಗಳ ಸಂಖ್ಯೆಯಲ್ಲೂ ಹೆಚ್ಚಳವುಂಟಾಗಿದೆ. ಎಡೆಬೆಳೆ ಕೃಷಿಗೂ ಯೋಜನೆಯ ಮೂಲಕ ಪ್ರಯೋಜನವಾಗಿದೆ. 

    ಲಾಕ್ ಡೌನ್ ಅವಧಿಯನ್ನು ಈ ರೀತಿ ಸದುಪಯೋಗಪಡಿಸಲಾಗಿದೆ. ಆನಿವಾಸಿ ಭಾರತೀಯರು, ಗೃಹಿಣಿಯರು, ಯುವಜನತೆ ಜಂಟಿಯಾಗಿ ಕೃಷಿ ನಡೆಸಿದ್ದಾರೆ. ಇದಕ್ಕೆ ಪೂರಕವಾಗಿ ಸುಭಿಕ್ಷ ಕೇರಳಂ ಯೋಜನೆ ಅಂಗವಾಗಿ ವಿವಿಧ ವಿಷಯಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 94 ತರಗತಿಗಳು ನಡೆದಿವೆ. ಕೃಷಿ ವಿವಿಯ ಪರಿಣತರು ನಡೆಸಿದ 246 ಕೃಷಿ ಪಾಠಶಾಲೆಗಳೂ ಕೃಷಿಕರಿಗೆ ಸಹಕಾರಿಯಾಗಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries