ತಿರುವನಂತಪುರ: ರಾಜ್ಯದಲ್ಲಿ ಇಂದು 12,456 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 1640, ತ್ರಿಶೂರ್ 1450, ಎರ್ನಾಕುಳಂ 1296, ತಿರುವನಂತಪುರ 1113, ಪಾಲಕ್ಕಾಡ್ 1094, ಕೊಲ್ಲಂ 1092, ಕೋಝಿಕೋಡ್ 1091, ಆಲಪ್ಪುಳ 743, ಕಾಸರಗೋಡು 682, ಕಣ್ಣೂರು 675, ಕೊಟ್ಟಾಯಂ 570, ಪತ್ತನಂತಿಟ್ಟು 415, ವಯನಾಡ್ 328, ಇಡುಕ್ಕಿ 267 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 1,19,897 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ. 10.39 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,34,38,111 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 135 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 13,640 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 58 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 11,677 ಮಂದಿ ಜನರಿಗೆ ಸೋಂಕು ತಗುಲಿತು. 659 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 1591, ತ್ರಿಶೂರ್ 1443, ಎರ್ನಾಕುಳಂ 1259, ತಿರುವನಂತಪುರ 1011, ಪಾಲಕ್ಕಾಡ್ 687, ಕೊಲ್ಲಂ 1088, ಕೋಝಿಕೋಡ್ 1064, ಆಲಪ್ಪುಳ 728, ಕಾಸರಗೋಡು 673, ಕಣ್ಣೂರು 603, ಕೊಟ್ಟಾಯಂ 554, ಪತ್ತನಂತಿಟ್ಟು 399, ವಯನಾಡ್ 316, ಇಡುಕ್ಕಿ 261 ಎಂಬಂತೆ ಸ|ಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು ಅರವತ್ತೆರಡು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 21, ಕಾಸರಗೋಡು 8, ಪಾಲಕ್ಕಾಡ್, ವಯನಾಡ್ ತಲಾ 7, ಪತ್ತನಂತಿಟ್ಟು 6, ಕೊಲ್ಲಂ 3, ತಿರುವನಂತಪುರ, ಕೊಟ್ಟಾಯಂ, ಎರ್ನಾಕುಳಂ, ತ್ರಿಶೂರ್ ಮತ್ತು ಮಲಪ್ಪುರಂ ತಲಾ 2 ಎಂಬಂತೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 12,515 ಮಂದಿ ಗುಣಮುಖರಾಗಿದ್ದಾರೆ. ತಿರುವನಂತಪುರ 1471, ಕೊಲ್ಲಂ 1140, ಪತ್ತನಂತಿಟ್ಟು 479, ಆಲಪ್ಪುಳ 759, ಕೊಟ್ಟಾಯಂ 425, ಇಡುಕ್ಕಿ 267, ಎರ್ನಾಕುಳಂ 1172, ತ್ರಿಶೂರ್ 1856, ಪಾಲಕ್ಕಾಡ್ 1183, ಮಲಪ್ಪುರಂ 1535, ಕೊಝಿಕೋಡ್ 814, ವಯನಾಡ್ 274, ಕಣ್ಣೂರು 502, ಕಾಸರಗೋಡು 638 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,03,567 ಮಂದಿ ಜನರಿಗೆ ಈ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 28,43,909 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,90,972 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,66,535 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 24,437 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 2282 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪಿಆರ್ 6 ರ ಕೆಳಗೆ 143, ಟಿಪಿಆರ್. 6 ರಿಂದ 12 ರ ನಡುವೆ 510, ಟಿಪಿಆರ್. 12 ರಿಂದ 18 ರ ನಡುವೆ 293, ಟಿಪಿಆರ್. 18 ಕ್ಕಿಂತ ಮೇಲ್ಪಟ್ಟ 88 ಸ್ಥಳೀಯ ಸಂಸ್ಥೆಗಳು ಇವೆ.