ತಿರುವನಂತಪುರ: ರಾಜ್ಯದಲ್ಲಿ ಇಂದು 12,095 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 1553, ಕೊಲ್ಲಂ 1271, ಕೋಝಿಕೋಡ್ 1180, ತ್ರಿಶೂರ್ 1175, ಎರ್ನಾಕುಳಂ 1116, ತಿರುವನಂತಪುರ 1115, ಪಾಲಕ್ಕಾಡ್ 1098, ಆಲಪ್ಪುಳ 720, ಕಣ್ಣೂರು 719, ಕಾಸರಗೋಡು 708, ಕೊಟ್ಟಾಯಂ 550, ಪತ್ತನಂತಿಟ್ಟು 374, ವಯನಾಡ್ 300, ಇಡುಕ್ಕಿ 216 ಎಂಬಂತೆ ಸೋಂಕು ಕಂಡುಬಂದಿದೆ.
ಕಳೆದ 24 ಗಂಟೆಗಳಲ್ಲಿ 1,19,659 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ. 10.11 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,33,18,214 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 146 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ದೃಢಪಡಿಸಿದೆ. ಒಟ್ಟು ಸಾವಿನ ಸಂಖ್ಯೆ 13,505 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 68 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 11,363 ಮಂದಿ ಜನರಿಗೆ ಸೋಂಕು ತಗಲಿತು. 606 ಮಂದಿಗೆ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 1510, ಕೊಲ್ಲಂ 1265, ಕೋಝಿಕೋಡ್ 1167, ತ್ರಿಶೂರ್ 1165, ಎರ್ನಾಕುಳಂ 1091, ತಿರುವನಂತಪುರ 1005, ಪಾಲಕ್ಕಾಡ್ 723, ಆಲಪ್ಪುಳ 712, ಕಣ್ಣೂರು 641, ಕಾಸರಗೋಡು 702, ಕೊಟ್ಟಾಯಂ 531, ಪತ್ತನಂತಿಟ್ಟು 363, ವಯನಾಡ್ 285, ಇಡುಕ್ಕಿ 203 ಎಂಬಂತೆ ಸಂಪರ್ಕಸದಿಂದ ಸೋಂಕು ಬಾಧಿಸಿದೆ.
ಇಂದು 58 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರು 20, ಪತ್ತನಂತಿಟ್ಟು 7, ವಯನಾಡ್ 6, ತಿರುವನಂತಪುರ, ಪಾಲಕ್ಕಾಡ್ ತಲಾ 5, ಕೊಲ್ಲಂ, ಎರ್ನಾಕುಳಂ ತಲಾ 4, ತ್ರಿಶೂರ್ 3, ಕಾಸರಗೋಡು 2, ಆಲಪ್ಪುಳ ಮತ್ತು ಇಡುಕಿ ತಲಾ 1 ಎಂಬಂತೆ ಸೋಂಕು ಬಾಧಿಸಿದೆ.
ರೋಗ ನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 10,243 ಮಂದಿಯನ್ನು ಗುಣಪಡಿಸಲಾಗಿದೆ. ತಿರುವನಂತಪುರ 1647, ಕೊಲ್ಲಂ 990, ಪತ್ತನಂತಿಟ್ಟು 336, ಆಲಪ್ಪುಳ 766, ಕೊಟ್ಟಾಯಂ 364, ಇಡುಕ್ಕಿ 127, ಎರ್ನಾಕುಳಂ 1194, ತ್ರಿಶೂರ್ 1154, ಪಾಲಕ್ಕಾಡ್ 1192, ಮಲಪ್ಪುರಂ 841, ಕೊಝಿಕೋಡ್ 554, ವಯನಾಡ್ 114, ಕಣ್ಣೂರು 588, ಕಾಸರಗೋಡು 376 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 1,03,764 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 28,31,394 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,91,753 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,67,251 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 24,113 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 1988 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪಿಆರ್ 6 ಕೆಳಗೆ 143, ಟಿಪಿಆರ್. 6 ರಿಂದ 12 ರ ನಡುವೆ 510, ಟಿಪಿಆರ್. 12 ರಿಂದ 18 ರ ನಡುವೆ 293, ಟಿಪಿಆರ್. 18 ಕ್ಕಿಂತ ಮೇಲ್ಪಟ್ಟ 88 ಸ್ಥಳೀಯ ಸಂಸ್ಥೆಗಳು ಇವೆ.