ನವದೆಹಲಿ: ಪ್ರತಿ ತಿಂಗಳು ಸೆರಮ್ ಇನ್ಸಿಟಿಟ್ಯೂಟ್ ನಿಂದ ದೇಶಕ್ಕೆ 11-12 ಕೋಟಿ ಕೋವಿಶೀಲ್ಡ್ ಲಸಿಕೆ ಸಿಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ರಾಜ್ಯಸಭೆಯಲ್ಲಿ ಇಂದು ತಿಳಿಸಿದರು.
ಕೋವಿಡ್-19 ನಿರ್ವಹಣೆ ಕುರಿತ ಅಲ್ಪಾ ಅವಧಿಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಗಸ್ಟ್ ತಿಂಗಳಲ್ಲಿ ಭಾರತ್ ಬಯೋಟೆಕ್ 3.5 ಕೋಟಿ ಡೋಸ್ ಕೋವಾಕ್ಸಿನ್ ಲಸಿಕೆಯನ್ನು ಪೂರೈಸಲಿದೆ. ಕೊರೋನಾವೈರಸ್ ವಿರುದ್ಧದ ಡಿಎನ್ ಎ- ಆಧಾರಿತ ಲಸಿಕೆಯ ತುರ್ತು ಬಳಕೆಯಾಗಿ ಜಿಡಸ್ ಕ್ಯಾಡಿಲಾ ಅರ್ಜಿ ಸಲ್ಲಿಸಿದೆ. ಜಿಡಾಸ್ ಕ್ಯಾಡಿಲಾ ಮತ್ತು ಭಾರತ್ ಬಯೋಟೆಕ್ ಮಕ್ಕಳ ಮೇಲಿನ ಕೋವಿಡ್ ಲಸಿಕೆ ಪ್ರಯೋಗವನ್ನು ನಡೆಸಿವೆ ಎಂದು ಮಾಹಿತಿ ನೀಡಿದರು.
ಕೊರೊನಾವೈರಸ್ ಬಿಕ್ಕಟ್ಟು ರಾಜಕೀಯಕ್ಕೆ ಕಾರಣವಾಗಬಾರದು ಎಂದು ಸರ್ಕಾರ ಯಾವಾಗಲೂ ಹೇಳುತ್ತಿದೆ. 130 ಕೋಟಿಗೆ ಲಸಿಕೆ ನೀಡುವಿಕೆಯತ್ತ ದೇಶ ಹೆಜ್ಜೆ ಹಾಕಿದೆ. ಮೂರನೇ ಅಲೆ ಕುರಿತು ಮಾತನಾಡುವಾಗ, 130 ಕೋಟಿ ಜನರು ಸಾಮಾನ್ಯ ಜನರಾಗಿದ್ದಾರೆ. ಎಲ್ಲಾ ರಾಜ್ಯಗಳು ಒಗ್ಗೂಡಿ ಕೆಲಸ ನಿರ್ವಹಿಸಿದರೆ ದೇಶದಲ್ಲಿ ಮೂರನೇ ಅಲೆ ಬಾರದಂತೆ ತಡೆಗಟ್ಟಬಹುದಾಗಿದೆ. ಸರ್ಕಾರದ ನಿರ್ಣಯ ಮತ್ತು ಪ್ರಧಾನ ಮಂತ್ರಿ ಮಾರ್ಗದರ್ಶನ ಮೂರನೇ ಅಲೆಯಿಂದ ನಮ್ಮನ್ನು ರಕ್ಷಿಸಲಿದೆ ಎಂದು ಅವರು ಹೇಳಿದರು.
ಅನೇಕ ರಾಜ್ಯಗಳು 10ರಿಂದ 15 ಲಕ್ಷ ಡೋಸ್ ಕೋವಿಡ್ ಲಸಿಕೆಯನ್ನು ತಮ್ಮ ಬಳಿ ಹೊಂದಿವೆ. ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದ್ದು, ರಾಜ್ಯಗಳಿಂದ ಅನುಷ್ಠಾನವಾಗಬೇಕಿದೆ. ಆ ಸಂದರ್ಭದಲ್ಲಿ ರಾಜ್ಯಗಳು ವಿಫಲವಾಗಿವೆ ಅಥವಾ ರಾಜ್ಯಗಳು ಮಾಡಲಿಲ್ಲ ಎಂದು ಹೇಳಲಾಗದು, ಇದನ್ನು ರಾಜಕೀಯ ಮಾಡಲು ಬಯಸುವುದಿಲ್ಲ ಆದರೆ, ಅನೇಕ ರಾಜ್ಯಗಳಲ್ಲಿ 10 ರಿಂದ 15 ಲಕ್ಷ ಡೋಸ್ ಲಸಿಕೆಗಳು ಇರುವುದಾಗಿ ಮಾಂಡವಿಯಾ ತಿಳಿಸಿದರು.