ತಿರುವನಂತಪುರ: ಓಣಂಗೆ ಸಂಬಂಧಿಸಿದಂತೆ ವಿಶೇಷ ಓಣಂ ಕಿಟ್ ನೀಡಲು ನಿರ್ಧರಿಸಲಾಗಿದೆ. ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಓಣಂಗೆ ಸಂಬಂಧಿಸಿದಂತೆ ಆಗಸ್ಟ್ ತಿಂಗಳಲ್ಲಿ ವಿಶೇಷ ಓಣಂಕಿಟ್ ನೀಡಲು ಕ್ಯಾಬಿನೆಟ್ ತಾತ್ವಿಕ ಒಪ್ಪಿಗೆ ನೀಡಿದೆ.
ಓಣಂಕಿಟ್‌ನಲ್ಲಿ 13 ವಸ್ತುಗಳನ್ನು ಸೇರಿಸಲಾಗಿದೆ ಎಂದು ಸಪ್ಲೈಕೊ ಸರ್ಕಾರಕ್ಕೆ ಮಾಹಿತಿ ನೀಡಿದೆ. ಕಿಟ್‌ನ ನಿರೀಕ್ಷಿತ ವೆಚ್ಚ 469.70 ರೂ. ಒಟ್ಟು ವೆಚ್ಚ 408 ಕೋಟಿ ರೂ. ಆಗಲಿದೆಯೆಂದು ಸಪ್ಲೈಕೊ ಸರ್ಕಾರಕ್ಕೆ ಮಾಹಿತಿ ನೀಡಿದೆ. ಕಿಟ್‌ನಲ್ಲಿ ಸಕ್ಕರೆ, ತೆಂಗಿನ ಎಣ್ಣೆ, ಶ್ಯಾವಿಗೆ ಮತ್ತು ಚಾಕೊಲೇಟ್ ಸೇರಿದಂತೆ ಹದಿಮೂರು ವಸ್ತುಗಳು ಒಳಗೊಂಡಿದೆ. ರಾಜ್ಯದ 86 ಲಕ್ಷ ಪಡಿತರ ಚೀಟಿ ಹೊಂದಿರುವವರಿಗೆ ಕಿಟ್ ಲಭ್ಯವಾಗಲಿದೆ.