ಕಾಸರಗೋಡು: ಕಳೆದ ಒಂದು ವಾರದ ಸರಾಸರಿ ಕೋವಿಡ್ ಟೆಸ್ಟ್ ಪಾಸಿಟಿವಿಟಿ ರೇಟ್ (ಟಿಪಿಆರ್) ಆಧರಿಸಿ, ಜಿಲ್ಲೆಯ ವರದಿ ಪ್ರಕಟಗೊಂಡಿದೆ. 14 ಸ್ಥಳೀಯಾಡಳಿತ ಸಂಸ್ಥೆಗಳನ್ನು ಡಿ ವಿಭಾಗದಲ್ಲಿ, 16 ಸ್ಥಳೀಯಾಡಳಿತ ಸಂಸ್ಥೆಗಳು ಸಿ ವಿಭಾಗದಲ್ಲಿ, 9 ಸ್ಥಳೀಯಾಡಳಿತ ಸಂಸ್ಥೆಗಳು ಬಿ ವಿಭಾಗದಲ್ಲಿ ಮತ್ತು ಗಡಿ ಗ್ರಾಮ ಪಂಚಾಯತಿಗಳಾದ ವರ್ಕಾಡಿ ಮತ್ತು ಮೀಂಜ ಮಾತ್ರ ಎ ವಿಭಾಗದಲ್ಲಿ ಸೇರಿಸಲಾಗಿದೆ. ಜಿಲ್ಲೆಯ ಸರಾಸರಿ ಸಾಪ್ತಾಹಿಕ ಟಿಪಿಆರ್ ಶೇಕಡಾ 13.75 ಶೇ.ಆಗಿದೆ. ಜುಲೈ 21 ರಿಂದ 27 ರವರೆಗೆ ಜಿಲ್ಲೆಯಲ್ಲಿ ಒಟ್ಟು 37541 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಯಿತು. ಈ ಪೈಕಿ 5163 ಧನಾತ್ಮಕವಾಗಿವೆ.
ಪ್ರತಿ ವಿಭಾಗದಲ್ಲಿ ಒಂದು ವಾರದ ಪರೀಕ್ಷೆ, ಸಕಾರಾತ್ಮಕ ಪ್ರಕರಣ ಮತ್ತು ಒಂದು ವಾರದ ಸರಾಸರಿ ಟಿಪಿಆರ್ ಕ್ರಮದಲ್ಲಿ ಕೆಳಗೆ ನೀಡಲಾಗಿದೆ.
ವರ್ಗ ಎ (5% ಕ್ಕಿಂತ ಕಡಿಮೆ)
ವರ್ಕಾಡಿ (414 ಟೆಸ್ಟ್, 11 ಪಾಸಿಟಿವ್, ಟಿಪಿಆರ್ 2.66), ಮೀಂಜ (281 ಟೆಸ್ಟ್, 12 ಪಾಸಿಟಿವ್, ಟಿಪಿಆರ್ 4.27)
ವರ್ಗ ಬಿ (ಶೇ 5 ರಿಂದ 10)
ಬೆಳ್ಳೂರು (218 ಟೆಸ್ಟ್, 11 ಪಾಸಿಟಿವ್, ಟಿಪಿಆರ್ 5.05), ಈಸ್ಟ್ ಎಳೇರಿ (920 ಟೆಸ್ಟ್, 57 ಪಾಸಿಟಿವ್, ಟಿಪಿಆರ್ 6.20), ವಲಿಯಪರಂಬ (929 ಟೆಸ್ಟ್, 60 ಪಾಸಿಟಿವ್, ಟಿಪಿಆರ್ 6.46), ಕಳ್ಳಾರ್ (866 ಟೆಸ್ಟ್, 61 ಪಾಸಿಟಿವ್, ಟಿಪಿಆರ್ 7.04),ಕಾಸರಗೋಡು( 1531 ಟೆಸ್ಟ್‍ಗಳಲ್ಲಿ 113 ಪಾಸಿಟಿವ್, ಟಿ.ಪಿ.ಆರ್ 7.38 ಶೇ.)ಉದುಮಾ (1669 ಟೆಸ್ಟ್, 136 ಪಾಸಿಟಿವ್, ಟಿಪಿಆರ್ 8.15), ಕುಂಬ್ಡಾಜೆ (201 ಟೆಸ್ಟ್, 17 ಪಾಸಿಟಿವ್, ಟಿಪಿಆರ್ 8.46), ಬಳಾಲ್ (1338 ಟೆಸ್ಟ್, 127 ಪಾಸಿಟಿವ್, ಟಿಪಿಆರ್ 9.49), ಎಣ್ಮಕಜೆ (246 ಟೆಸ್ಟ್, 24 ಪಾಸಿಟಿವ್, ಟಿಪಿಆರ್ 9.6).
ಕ್ಯಾಟಗರಿ ಸಿ (10 ರಿಂದ 15 ಶೇ)
ಮಧೂರು (889 ಟೆಸ್ಟ್, 91 ಪಾಸಿಟಿವ್, ಟಿಪಿಆರ್ 10.24), ಚೆಮ್ಮನಾಡ್ (2354 ಟೆಸ್ಟ್, 252 ಪಾಸಿಟಿವ್, ಟಿಪಿಆರ್ 10.71), ಪನತ್ತಡಿ (1093 ಟೆಸ್ಟ್, 123 ಪಾಸಿಟಿವ್, ಟಿಪಿಆರ್ 11.25), ಪಡನ್ನ(595 ಟೆಸ್ಟ್, 67 ಪಾಸಿಟಿವ್, ಟಿಪಿಆರ್ 11.26), ಪೈವಳಿಕೆ (337 ಟೆಸ್ಟ್, 38 ಪಾಸಿಟಿವ್, ಟಿಪಿಆರ್ 11.28), ಬದಿಯಡ್ಕ (502 ಟೆಸ್ಟ್, 57 ಪಾಸಿಟಿವ್, ಟಿಪಿಆರ್ 11.35), ಕುಂಬಳೆ (676 ಟೆಸ್ಟ್, 77 ಪಾಸಿಟಿವ್, ಟಿಪಿಆರ್ 11.39), ಮಂಜೇಶ್ವರ (293 ಟೆಸ್ಟ್, 36 ಪಾಸಿಟಿವ್, ಟಿಪಿಆರ್ 12.29), ಪಳ್ಳಿಕ್ಕೆರೆ(1450 ಟೆಸ್ಟ್, 180 ಪಾಸಿಟಿವ್, ಟಿಪಿಆರ್ 12.41), ಕಾಞಂಗಾಡ್ (2128 ಟೆಸ್ಟ್, 269 ಪಾಸಿಟಿವ್, ಟಿಪಿಆರ್ 12.64), ಮೊಗ್ರಾಲ್ ಪುತ್ತೂರು (475 ಟೆಸ್ಟ್, 62 ಪಾಸಿಟಿವ್, ಟಿಪಿಆರ್ 13.05), ವೆಸ್ಟ್ ಎಳೇರಿ (807 ಟೆಸ್ಟ್, 108 ಪಾಸಿಟಿವ್, ಟಿಪಿಆರ್ 13.38), 23 32 ಪಾಸಿಟಿವ್, ಟಿಪಿಆರ್ 13.39), ಕಿನಾನೂರ್ -ಕರಿಂದಳ (1496 ಪರೀಕ್ಷೆ, 212 ಧನಾತ್ಮಕ, ಟಿಪಿಆರ್ 14.17), ಪುಲ್ಲೂರ್-ಪೆರಿಯಾ (1528 ಪರೀಕ್ಷೆ, 224 ಧನಾತ್ಮಕ, ಟಿಪಿಆರ್ 14.66), ಪುತ್ತಿಗೆ (239 ಟೆಸ್ಟ್, 32 ಪಾಸಿಟಿವ್, ಟಿಪಿಆರ್ 13.39), ಚೆಂಗಳ (1172 ಪರೀಕ್ಷೆ, 175 ಧನಾತ್ಮಕ, ಟಿಪಿಆರ್ 149).
ಕ್ಯಾಟಗರಿ ಡಿ ( ಶೇ.15 ಕ್ಕಿಂತ ಹೆಚ್ಚು)
ಕೋಡೋಂ ಬೆಳ್ಳೂರು(1494 ಪರೀಕ್ಷೆ, 226 ಧನಾತ್ಮಕ, ಟಿಪಿಆರ್ 15.13), ಕುತ್ತಿಕೋಲ್ (1225 ಪರೀಕ್ಷೆ, 192 ಧನಾತ್ಮಕ, ಟಿಪಿಆರ್ 15.67), ಪಿಲಿಕೋಡ್ (945 ಪರೀಕ್ಷೆ, 149 ಧನಾತ್ಮಕ, ಟಿಪಿಆರ್ 15.77), ಮಂಗಲ್ಪಾಡಿ (872 ಪರೀಕ್ಷೆ, 147 ಧನಾತ್ಮಕ, 161 ಧನಾತ್ಮಕ) ದೇಲಂಪಾಡಿ (602 ಟೆಸ್ಟ್ ,260 ಪಾಸಿಟಿವ್, ಟಿಪಿಆರ್ 21.70), ಬೇಡಡ್ಕ(1306 ಟೆಸ್ಟ್, 227 ಪಾಸಿಟಿವ್, ಟಿಪಿಆರ್ 17.38, ತೃಕ್ಕರಿಪುರ (675 ಟೆಸ್ಟ್, 126 ಪಾಸಿಟಿವ್, ಟಿಪಿಆರ್ 18.67), ಕಾರಡ್ಕ (239 ಟೆಸ್ಟ್, 45 ಪಾಸಿಟಿವ್, ಟಿಪಿಆರ್ 18.83), ನೀಲೇಶ್ವರ(1198 ಟೆಸ್ಟ್, 260 ಪಾಸಿಟಿವ್, ಟಿಪಿಆರ್ 21.70), ಚೆರ್ವತ್ತೂರ್ (1114 ಟೆಸ್ಟ್, 242 ಪಾಸಿಟಿವ್, ಟಿಪಿಆರ್ 21.72), ಅಜನೂರ್ (1272 ಟೆಸ್ಟ್, 277 ಪಾಸಿಟಿವ್, ಟಿಪಿಆರ್ 21.78), ಮುಳಿಯಾರ್ (555 ಟೆಸ್ಟ್, 152 ಪಾಸಿಟಿವ್, ಟಿಪಿಆರ್ 27.39), ಕಯ್ಯೂರು ಚೀಮೇನಿ(916 ಟೆಸ್ಟ್, 253 ಪಾಸಿಟಿವ್, ಟಿಪಿಆರ್ 27.62, ಮಡಿಕೈ(481 ಟೆಸ್ಟ್, 143 ಪಾಸಿಟಿವ್, ಟಿಪಿಆರ್ 29.73).