ತಿರುವನಂತಪುರ: ಕೇರಳದಲ್ಲಿ ಇಂದು 15,600 ಮಂದಿ ಜನರಿಗೆ ಕೊರೋನಾ ದೃಢಪಟ್ಟಿದೆ. ಮಲಪ್ಪುರಂ 2052, ಎರ್ನಾಕುಳಂ 1727, ತ್ರಿಶೂರ್ 1724, ಕೋಝಿಕೋಡ್ 1683, ಕೊಲ್ಲಂ 1501, ಪಾಲಕ್ಕಾಡ್ 1180, ತಿರುವನಂತಪುರ 1150, ಕಣ್ಣೂರು 962, ಆಲಪ್ಪುಳ 863, ಕಾಸರಗೋಡು 786, ಕೊಟ್ಟಾಯಂ 779, ವಯನಾಡ್ 453,ಪತ್ತನಂತಿಟ್ಟು 449, ಇಡುಕ್ಕಿ 291 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 1,50,630 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.10.36 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,39,18,742 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 148 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 14,108 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 66 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ ಒಟ್ಟು 14,761 ಮಂದಿ ಜನರಿಗೆ ಸೋಂಕು ತಗುಲಿತು. 699 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 1992, ಎರ್ನಾಕುಳಂ 1682, ತ್ರಿಶೂರ್ 1716, ಕೋಝಿಕೋಡ್ 1659, ಕೊಲ್ಲಂ 1497, ಪಾಲಕ್ಕಾಡ್ 751, ತಿರುವನಂತಪುರ 1055, ಕಣ್ಣೂರು 889, ಆಲಪ್ಪುಳ 848, ಕಾಸರಗೋಡು 766, ಕೊಟ್ಟಾಯಂ 751, ವಯನಾಡ್ 438, ಪತ್ತನಂತಿಟ್ಟು 436, ಇಡುಕ್ಕಿ 281 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು ರಾಜ್ಯಾದ್ಯಂತ 74 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 22, ಕಾಸರಗೋಡು 14, ಪಾಲಕ್ಕಾಡ್ 10, ಪತ್ತನಂತಿಟ್ಟು 6, ಮಲಪ್ಪುರಂ 5, ಎರ್ನಾಕುಳಂ 4, ಕೋಝಿಕೋಡ್ 3, ಕೊಲ್ಲಂ, ಇಡುಕ್ಕಿ, ತ್ರಿಶೂರ್, ವಯನಾಡ್ ತಲಾ 2, ತಿರುವನಂತಪುರ ಮತ್ತು ಆಲಪ್ಪುಳ ತಲಾ 1 ಎಂಬಂತೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 11,629 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 541, ಕೊಲ್ಲಂ 1876, ಪತ್ತನಂತಿಟ್ಟು 351, ಆಲಪ್ಪುಳ 899, ಕೊಟ್ಟಾಯಂ 497, ಇಡುಕ್ಕಿ 196, ಎರ್ನಾಕುಳಂ 1199, ತ್ರಿಶೂರ್ 1209, ಪಾಲಕ್ಕಾಡ್ 1162, ಮಲಪ್ಪುರಂ 1259, ಕೋಝಿಕೋಡ್ 1055, ವಯನಾಡ್ 219, ಕಣ್ಣೂರು 653, ಕಾಸರಗೋಡು 513 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,07,925 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 28,89,186 ಮಂದಿ ಜನರನ್ನು ಈವರೆಗೆ ಕೊರೋನಾದಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,82,843 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,58,565 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 24,278 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2218 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.