HEALTH TIPS

ಕೇರಳದ 15 ನೇ ವಿಧಾನಸಭೆಯ ಎರಡನೇ ಅಧಿವೇಶನ ನಾಳೆಯಿಂದ: ಸರಣಿ ವಿವಾದಗಳ ಬಗೆಗಿನ ವಾದ-ಪ್ರತಿವಾದಗಳು ಬುಗಿಲೇಳುವ ಸಾಧ್ಯತೆ


        ತಿರುವನಂತಪುರ:  ರಾಜ್ಯದ 15 ನೇ  ವಿಧಾನಸಭೆಯ ಎರಡನೇ ಅಧಿವೇಶನ ನಾಳೆಯಿಂದ ಪ್ರಾರಂಭವಾಗಲಿದೆ.  ಈ ಬಾರಿ ಕೂಡ ಕೊರೋನಾ ಮಾನದಂಡಗಳಿಗೆ ಅನುಗುಣವಾಗಿ ಅಧಿವೇಶನ  ನಡಾವಳಿ ನಡೆಸಲಾಗುವುದು.  20 ದಿನಗಳ ಅಧಿವೇಶನದಲ್ಲಿ ಎರಡನೇ ಪಿಣರಾಯಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಉನ್ನತ ಮಟ್ಟದ ಮರ ಮಟ್ಟು ಮಾರಾಟ  ವಿವಾದ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎತ್ತಿದರೆ, ಸದನವು ಕೋಲಾಹಲಕ್ಕೆ ಎಡೆಯಾಗುವ ಸಾಧ್ಯತೆಗಳಿವೆ.
        ಹದಿನೈದನೇ ಕೇರಳ ವಿಧಾನಸಭೆಯ ಎರಡನೇ ಅಧಿವೇಶನದಲ್ಲಿ, 2021-22ನೇ ಸಾಲಿನ ಬಜೆಟ್ ವಿನಂತಿಗಳ ಕುರಿತು ವಿವಿಧ ವಿಷಯ ಸಮಿತಿಗಳ ಪರಿಶೀಲನೆಯ ನಂತರ ಸದನಕ್ಕೆ ಸಲ್ಲಿಸಲಾದ ವರದಿಗಳ ಕುರಿತು ಚರ್ಚೆ ಮತ್ತು ಅಂಗೀಕಾರ ನಡೆಯಲಿದೆ.  20 ದಿನಗಳ ಅಧಿವೇಶನದಲ್ಲಿ, ಅಧಿಕೃತೇತರ ಸದಸ್ಯರಿಗೆ ನಾಲ್ಕು ದಿನಗಳನ್ನು ನಿಗದಿಪಡಿಸಲಾಗಿದೆ.  ಈ ದಿನಗಳಲ್ಲಿ ಸದಸ್ಯರು ಖಾಸಗಿ ಮಸೂದೆಗಳು ಮತ್ತು ನಿರ್ಣಯಗಳನ್ನು ತಿಲಕಿಸಲು ಸದಸ್ಯರಿಗೆ ನೋಟಿಸ್ ನೀಡಲಾಗಿದೆ.
      2021-22ನೇ ಸಾಲಿನ ಪೂರಕ ವಿನಂತಿಗಳ ಚರ್ಚೆಗೆ ಮತ್ತು ಬಜೆಟ್ ವಿನಂತಿಗಳ ಮೇಲಿನ ವಿನಿಯೋಜನೆ ಮಸೂದೆಯನ್ನು ಪರಿಗಣಿಸಲು ಪ್ರತಿ ದಿನವನ್ನು ನಿಗದಿಪಡಿಸಲಾಗಿದೆ.  ಕೇರಳದ ಹಣಕಾಸು ಮಸೂದೆಗಳು 2021 ನ್ನು ಪರಿಗಣಿಸುವ ಸಾಧ್ಯತೆಗಳುವೆ.  ಸರ್ಕಾರವು ಯಾವುದಾದರೂ ಶಾಸನ ಜಾರಿಗೆ ತರುವ ಸಾಧ್ಯತೆಯಿದ್ದರೆ,  ಸದನದಲ್ಲಿ ಹೆಚ್ಚಿನ ಸಮಯವನ್ನು ನಿಗದಿಪಡಿಸಲಾಗುತ್ತದೆ.  ವಿಚಾರಣೆಯನ್ನು ಪೂರ್ಣಗೊಳಿಸಿದ ನಂತರ ಆಗಸ್ಟ್ 18 ರಂದು ವಿಧಾನಸಭೆ ಮುಂದೂಡಲ್ಪಡುವುದು.
           ಏತನ್ಮಧ್ಯೆ, ಮರದ ಅವ್ಯವಹಾರ ವಿವಾದ ಮತ್ತು  ಮಹಿಳೆಯರ ಮೇಲಿನ ಕಿರುಕುಳ ದೂರನ್ನು ಎದುರಿಸುತ್ತಿರುವ ಸಚಿವ ಎ.ಕೆ.ಶಶೀಂದ್ರನ್ ಅವರ ಬಗೆಗೂ ಭಾರೀ ಕಾವೇರಿದ ವಾದ ವಿವಾದಗಳ ಸಾಧ್ಯತೆಗಳಿವೆ.   ರಾಜ್ಯಪಾಲರ ಉಪವಾಸ ಸೇರಿದಂತೆ ವರದಕ್ಷಿಣೆ ಕಿರುಕುಳದ ವಿಷಯವನ್ನು ಚರ್ಚಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.  ಅಲ್ಪಸಂಖ್ಯಾತ ವಿದ್ಯಾರ್ಥಿವೇತನದ ವಿಷಯವನ್ನು ಸದನದಲ್ಲಿ ಚರ್ಚಿಸಬಹುದು.  ವಿಧಾನಸಭೆ ಅಧಿವೇಶನಕ್ಕೆ ಮುನ್ನ ಈ ವಿಷಯಗಳ ಕುರಿತು ವಿಧಾನಸಭೆಯ ಒಳಗೆ ಮತ್ತು ಹೊರಗೆ ತೀವ್ರ ಪ್ರತಿಭಟನೆ ನಡೆಸಲು ಪ್ರತಿಪಕ್ಷಗಳು ನಿರ್ಧರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries