ತಿರುವನಂತಪುರ: ರಾಜ್ಯದಲ್ಲಿ ಕೊರೋನಾ ಸಾವಿನ ಲೆಕ್ಕಾಚಾರದಲ್ಲಿ ವಿರೋಧಾಭಾಸ ಕಂಡುಬರುತ್ತಿದೆ. ರಾಜ್ಯ ಸರ್ಕಾರ ಮತ್ತು ಕೇರಳ ಮಿಷನ್‌ನ ಅಂಕಿ ಅಂಶಗಳ ನಡುವೆ ದೊಡ್ಡ ವ್ಯತ್ಯಾಸ ಬಹಿರಂಗಗೊಂಡಿದೆ. ಕೇರಳ ಮಿಷನ್ ಪ್ರಕಾರ, ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿದ ಅಂಕಿಅಂಶಗಳಿಗಿಂತ ರಾಜ್ಯದಲ್ಲಿ 7000 ಕ್ಕೂ ಹೆಚ್ಚು ಕೊರೋನಾ ಸಾವುಗಳು ಸಂಭವಿಸಿವೆ.
ಪ್ರತಿಪಕ್ಷದ ನಾಯಕ ವಿ.ಡಿ.ಸತೀಸನ್ ಈ ವಿಷಯವನ್ನು ವಿಧಾನಸಭೆಯಲ್ಲಿ ಇಂದು ಬಹಿರಂಗಪಡಿಸಿದರು. ಅಂಕಿಅಂಶಗಳನ್ನು ದೃಢೀಕರಿಸುವ ದಾಖಲೆಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ಕೇರಳ ಮಿಷನ್ ಈ ತಿಂಗಳ 23 ರಂದು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿದ ಉತ್ತರದಲ್ಲಿ ಈ ಅಂಕಿಅಂಶ ವ್ಯೆತ್ಯಾಸ ವೇದ್ಯವಾಗಿದೆ. 2020 ರ ಜನವರಿಯಿಂದ ಕೇರಳದಲ್ಲಿ 23,486 ಸಾವುಗಳು ದಾಖಲಾಗಿವೆ. ನಿನ್ನೆ ಮುಖ್ಯಮಂತ್ರಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಒಟ್ಟು ಸಾವಿನ ಸಂಖ್ಯೆ 16,170 ಮಾತ್ರ.