ತಿರುವನಂತಪುರ: ರಾಜ್ಯದಲಿ ಇಂದು ಮತ್ತೆ ಕೋವಿಡ್ ಸೋಂಕಿನಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಇಂದು 16,848 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 2752, ತ್ರಿಶೂರ್ 1929, ಎರ್ನಾಕುಳಂ 1901, ಕೋಝಿಕೋಡ್ 1689, ಕೊಲ್ಲಂ 1556, ಪಾಲಕ್ಕಾಡ್ 1237, ಕೊಟ್ಟಾಯಂ 1101, ತಿರುವನಂತಪುರ 1055, ಆಲಪ್ಪುಳ 905, ಕಣ್ಣೂರು 873, ಕಾಸರಗೋಡು 643,ಪತ್ತನಂತಿಟ್ಟು 517, ವಯನಾಡ್ 450. ಇಡುಕ್ಕಿ 240 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 1,41,431 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.11.91 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,55,72,679 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 104 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಕೋವಿಡ್ ನಿಂದ ಮೃತಪಟ್ಟವರ ಸ|ಂಖ್ಯೆ 15,512 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 101 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ ಒಟ್ಟು 15,855 ಮಂದಿ ಜನರಿಗೆ ಸೋಂಕು ತಗುಲಿತು. 783 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 2673, ತ್ರಿಶೂರ್ 1908, ಎರ್ನಾಕುಳಂ 1837, ಕೋಝಿಕೋಡ್ 1671, ಕೊಲ್ಲಂ 1549, ಪಾಲಕ್ಕಾಡ್ 747, ಕೊಟ್ಟಾಯಂ 1037, ತಿರುವನಂತಪುರ 976, ಆಲಪ್ಪುಳ 895, ಕಣ್ಣೂರು 780, ಕಾಸರಗೋಡು 616, ಪತ್ತನಂತಿಟ್ಟು 495, ವಯನಾಡ್ 437, ಇಡುಕ್ಕಿ 234 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿರುವುದು ದೃಢಪಟ್ಟಿದೆ.
ಇಂದು 109 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ. ಕಣ್ಣೂರು 23, ಕಾಸರಗೋಡು 20, ಪತ್ತನಂತಿಟ್ಟು 14, ತ್ರಿಶೂರ್, ಪಾಲಕ್ಕಾಡ್ 10, ಎರ್ನಾಕುಳಂ 7, ಮಲಪ್ಪುರಂ 6, ವಯನಾಡ್ 5, ತಿರುವನಂತಪುರ 4, ಕೊಲ್ಲಂ, ಕೊಟ್ಟಾಯಂ ತಲಾ 3, ಆಲಪ್ಪುಳ ಮತ್ತು ಕೋಝಿಕೋಡ್ ತಲಾ 2 ಎಂಬಂತೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 12,052 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 451, ಕೊಲ್ಲಂ 726, ಪತ್ತನಂತಿಟ್ಟು 343, ಆಲಪ್ಪುಳ 604, ಕೊಟ್ಟಾಯಂ 525, ಇಡುಕ್ಕಿ 278, ಎರ್ನಾಕುಳಂ 1091, ತ್ರಿಶೂರ್ 1479, ಪಾಲಕ್ಕಾಡ್ 1046, ಮಲಪ್ಪುರಂ 2453, ಕೊಝಿಕೋಡ್ 1493, ವಯನಾಡ್ 299, ಕಣ್ಣೂರು 761, ಕಾಸರಗೋಡು 503 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,26,398 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.ರಾಜ್ಯಾದ್ಯಂತ ಒಟ್ಟು 30,45,310 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,05,178 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,80,426 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 24,752 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. 2049 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.