HEALTH TIPS

ರಾಜ್ಯದಲ್ಲಿ ನಿನ್ನೆ 17,466 ಮಂದಿ ಜನರಿಗೆ ಕೋವಿಡ್ ಪತ್ತೆ: 15,247 ಮಂದಿ ಗುಣಮುಖ: ಪರೀಕ್ಷಾ ಸಕಾರಾತ್ಮಕ ದರ ಶೇ. 12.3

 

           ತಿರುವನಂತಪುರ: ರಾಜ್ಯದಲ್ಲಿ ನಿನ್ನೆ 17,466 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ನಿನ್ನೆ ಮಲಪ್ಪುರಂ 2684, ಕೋಝಿಕೋಡ್ 2379, ತ್ರಿಶೂರ್ 2190, ಎರ್ನಾಕುಳಂ 1687, ಪಾಲಕ್ಕಾಡ್ 1552, ಕೊಲ್ಲಂ 1263, ತಿರುವನಂತಪುರ 1222, ಆಲಪ್ಪುಳ  914, ಕಣ್ಣೂರು 884, ಕೊಟ್ಟಾಯಂ 833, ಕಾಸರಗೋಡು 644, ಪತ್ತನಂತಿಟ್ಟು 478, ವಯನಾಡ್ 383, ಇಡುಕ್ಕಿ 353 ಎಂಬಂತೆ ಸೋಂಕು ಪತ್ತೆಯಾಗಿತ್ತು. 

              ನಿನ್ನೆ ಸಂಜೆಯ ವರೆಗಿನ 24 ಗಂಟೆಗಳಲ್ಲಿ 1,42,008 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ 12.3 ಆಗಿತ್ತು. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,62,48,280 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.

          ನಿನ್ನೆ 66 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಈವರೆಗೆ ರಾಜ್ಯದಲ್ಲಿ ಕೋವಿಡ್ ಬಾಧಿಸಿ ಮೃತರಾದವರ ಸಂಖ್ಯೆ 16,035 ಕ್ಕೆ ಏರಿಕೆಯಾಗಿದೆ.

               ಇಂದು, ಸೋಂಕು ಪತ್ತೆಯಾದವರಲ್ಲಿ 78 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ ಒಟ್ಟು 16,662 ಮಂದಿ ಜನರಿಗೆ ಸೋಂಕು ತಗುಲಿತು. 662 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 2607, ಕೋಝಿಕೋಡ್ 2354, ತ್ರಿಶೂರ್ 2174, ಎರ್ನಾಕುಳಂ 1669, ಪಾಲಕ್ಕಾಡ್ 1131, ಕೊಲ್ಲಂ 1255, ತಿರುವನಂತಪುರಂ 1167, ಆಲಪ್ಪುಳ 912, ಕಣ್ಣೂರು 796, ಕೊಟ್ಟಾಯಂ 784, ಕಾಸರಂಗೋಡು 632, ಪತ್ತನಂತಿಟ್ಟು 468, ವಯನಾಡ್ 370, ಇಡುಕ್ಕಿ 343 ಸ|ಂಪರ್ಕದಿಂದ ಸೋಂಕು ಬಾಧಿಸಿದೆ. 

               ನಿನ್ನೆ 64 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರು 16, ವಯನಾಡ್ 9, ಪಾಲಕ್ಕಾಡ್, ಕಾಸರಗೋಡು ತಲಾ 8, ತ್ರಿಶೂರ್ 7, ಕೊಲ್ಲಂ 6, ಪತ್ತನಂತಿಟ್ಟು 3, ಕೊಟ್ಟಾಯಂ, ಮಲಪ್ಪುರಂ 2, ತಿರುವನಂತಪುರ, ಎರ್ನಾಕುಳಂ ಮತ್ತು ಕೋಝಿಕೋಡ್ ತಲಾ 1 ಎಂಬಂತೆ ಸೋಂಕು ಬಾಧಿಸಿದೆ. 

            ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 15,247 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1012, ಕೊಲ್ಲಂ 1460, ಪತ್ತನಂತಿಟ್ಟು 405, ಆಲಪ್ಪುಳ 660, ಕೊಟ್ಟಾಯಂ 495, ಇಡುಕಿ 205, ಎರ್ನಾಕುಳಂ 1306, ತ್ರಿಶೂರ್ 2006, ಪಾಲಕ್ಕಾಡ್ 1124, ಮಲಪ್ಪುರಂ 2467, ಕೊಝಿಕೋಡ್ 2019, ವಯನಾಡ್ 423, ಕಣ್ಣೂರು 1040, ಕಾಸರಗೋಡು 625 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,40,276 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 31,14,716 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

                 ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,35,768 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 4,09,540 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 26,228 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2397 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

              ಟಿಪಿಆರ್ 5ಕ್ಕಿಂತ ಕೆಳಗೆ 73, 5 ರಿಂದ 10 ರ ನಡುವೆ 335,  10 ರಿಂದ 15 ರ ನಡುವೆ 355, ಟಿಪಿಆರ್. 15 ಕ್ಕಿಂತ ಮೇಲೆ  271 ಸ್ಥಳೀಯಾಡಳಿತ ಸಂಸ್ಥೆಗಳು ಇವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries