ತಿರುವನಂತಪುರ: ಕೇರಳದಲ್ಲಿ ಇಂದು 17,481 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 2318, ಎರ್ನಾಕುಳಂ 2270, ಕೋಝಿಕೋಡ್ 2151, ತ್ರಿಶೂರ್ 1983, ಪಾಲಕ್ಕಾಡ್ 1394, ಕೊಲ್ಲಂ 1175, ತಿರುವನಂತಪುರ 1166, ಕೊಟ್ಟಾಯಂ 996, ಆಲಪ್ಪುಳ 969, ಕಣ್ಣೂರು 777, ಕಾಸರಗೋಡು 776, ಪತ್ತನಂತಿಟ್ಟು 684, ವಯನಾಡ್ 475, ಇಡುಕ್ಕಿ 447 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 1,45,993 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ. 11.97 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,57,18,672 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 105 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವನ್ನಪ್ಪಿದವರ ಸಂಖ್ಯೆ ಸರ್ಕಾರ ತಿಳಿಸಿರುವಂತೆ 15,617 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 86 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ ಸುಮಾರು 16,600 ಜನರಿಗೆ ಸೋಂಕು ತಗುಲಿತು. 698 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 2246, ಎರ್ನಾಕುಳಂ 2220, ಕೋಝಿಕೋಡ್ 2129, ತ್ರಿಶೂರ್ 1962, ಪಾಲಕ್ಕಾಡ್ 954, ಕೊಲ್ಲಂ 1164, ತಿರುವನಂತಪುರ 1087, ಕೊಟ್ಟಾಯಂ 955, ಆಲಪ್ಪುಳ 956, ಕಣ್ಣೂರು 701, ಕಾಸರಗೋಡು 761, ಪತ್ತನಂತಿಟ್ಟು 565, ವಯನಾಡ್ 465, ಇಡುಕ್ಕಿ 435 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿತು.
ಇಂದು 97 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರು 21, ಪಾಲಕ್ಕಾಡ್ 13, ತ್ರಿಶೂರ್ 12, ಕಾಸರಗೋಡು 9, ಕೊಲ್ಲಂ 8, ಪತ್ತನಂತಿಟ್ಟು 7, ಎರ್ನಾಕುಳಂ, ವಯನಾಡ್ ತಲಾ 6, ಕೊಟ್ಟಾಯಂ 5, ತಿರುವನಂತಪುರ, ಆಲಪ್ಪುಳ ತಲಾ 3 , ಕೊಝಿಕೋಡ್ 2, ಇಡಕ್ಕಿ ಮತ್ತು ಮಲಪ್ಪುರಂ ತಲಾ 1 ಎಂಬಂತೆ ಕೋವಿಡ್ ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 14,131 ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 747, ಕೊಲ್ಲಂ 2017, ಪತ್ತನಂತಿಟ್ಟು 306, ಆಲಪ್ಪುಳ 535, ಕೊಟ್ಟಾಯಂ 664, ಇಡುಕಿ 262, ಎರ್ನಾಕುಳಂ 1600, ತ್ರಿಶೂರ್ 1583, ಪಾಲಕ್ಕಾಡ್ 1040, ಮಲಪ್ಪುರಂ 2221, ಕೊಝಿಕೋಡ್ 1531, ವಯನಾಡ್ 335, ಕಣ್ಣೂರು 728, ಕಾಸರಗೋಡು 562 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,29,640 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 30,59,441 ಮಂದಿ ಜನರನ್ನು ಕೋವಿಡ್‌ನಿಂದ ಮುಕ್ತಗೊಳಿಸಲಾಗಿದೆ.