ಮಲಪ್ಪುರಂ: ಬೆನ್ನುಮೂಳೆಯ ಸ್ನಾಯು ಕ್ಷೀಣತೆಗೆ ಚಿಕಿತ್ಸೆ ಪಡೆಯುತ್ತಿದ್ದ ಮಗು ಮೃತಪಟ್ಟಿದೆ. ಆರಿಫ್ ಮತ್ತು ರಮಿಸಾ ದಂಪತಿಗಳ 6 ತಿಂಗಳ ಪುತ್ರ ತಸ್ನಿ ಇಮ್ರಾನ್ ಮೃತಪಟ್ಟಿತು. ಚಿಕಿತ್ಸೆಗಾಗಿ ಇಮ್ರಾನ್ 18 ಕೋಟಿ ರೂ. ಸಂಗ್ರಹಿಸಿರುವ ಮಧ್ಯೆ ಮಗು ಇಹಲೋಕ ತ್ಯಜಿಸಿದೆ.
ನಿನ್ನೆ ರಾತ್ರಿ 11.30 ಕ್ಕೆ ಕೋಝಿಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಇಮ್ರಾನ್ ಸಾವನ್ನಪ್ಪಿದ್ದಾನೆ. ಹಠಾತ್ ಸಾವಿಗೆ ಕೋವಿಡ್ ಸೋಂಕು ಪ್ರಮುಖ ಕಾರಣ ಎಂದು ವೈದ್ಯರು ಹೇಳಿದ್ದಾರೆ. ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದಾಗಿ ಇಮ್ರಾನ್ ಮೂರೂವರೆ ತಿಂಗಳುಗಳಿಂದ ಕೋಝಿಕೋಡ್ ವೈದ್ಯಕೀಯ ಕಾಲೇಜಿನಲ್ಲಿ ವೆಂಟಿಲೇಟರ್‍ನಲ್ಲಿ ಚಿಕಿತ್ಸೆಗೊಳಪಡಿಸಲಾಗಿತ್ತು. 18 ಕೋಟಿ ರೂ. ಮೌಲ್ಯದ ಒಂದೇ ಒಂದು ಔಷಧಿಗಾಗಿ ಇಡೀ ಕೇರಳ ಕೈಜೋಡಿಸಿರುವುದು ಇತ್ತೀಚೆಗೆ ಸುದ್ದಿಯಾಗಿತ್ತು. ಜನಿಸಿ 17 ದಿನಗಳ ಬಳಿಕ ಇಮ್ರಾನ್ ಗೆ ರೋಗಲಕ್ಷಣಗಳು ಕಂಡುಬಂದಿದೆ. ಪೆರಿಂದಲ್ಮಣ್ಣ ಮೌಲಾನಾ ಆಸ್ಪತ್ರೆ ಮತ್ತು ಕೋಝಿಕೋಡ್ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ನಂತರ ವಿಶೇಷ ಚಿಕಿತ್ಸೆಗಾಗಿ ಕೋಝಿಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು.
ಮಂಗಡಂ ಶಾಸಕ ಮಂಜಲಂಕುಝಿ ಅಲಿ ನೇತೃತ್ವದ ವೈದ್ಯಕೀಯ ನೆರವು ಸಮಿತಿ ಈಗಾಗಲೇ ಚಿಕಿತ್ಸೆಗಾಗಿ ಸುಮಾರು 16.5 ಕೋಟಿ ರೂ. ಸಂಗ್ರಹಿಸಿತ್ತು. ಇಂದು ಮುಂಜಾನೆ 4.30 ಕ್ಕೆ ವಾಲಂಪುರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.