HEALTH TIPS

ಟಿ.ಪಿ.ಆರ್.18ಕ್ಕಿಂತ ಅಧಿಕ: "ಡಿ"ಕ್ಯಾಟಗರಿಯಲ್ಲಿ ಕಾಸರಗೋಡು ಜಿಲ್ಲೆಯ 8 ಗ್ರಾಮಪಂಚಾಯತ್ ಗಳು

                                    

             ಕಾಸರಗೋಡು: ಗುರುವಾರದಿಂದ ಕೋವಿಡ್ ಲಾಕ್ ಡೌನ್ ರಿಯಾಯಿತಿಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳ ಟೆಸ್ಟ್ ಪಾಸಿಟಿವಿಟಿ ಹಿನ್ನೆಲೆಯಲ್ಲಿ ವಿಂಗಡಿಸಲಾಗಿದೆ. 

                     ಜೂ.23ರಿಂದ 29 ವರೆಗಿನ ಗಣನೆಗಳ ಪ್ರಕಾರ ರೋಗ ಖಚಿತತೆ ಗಣನೆ ಶೇ 18ಕ್ಕಿಂತ ಅಧಿಕ ಇರುವ ಹಿನ್ನೆಲೆಯಲ್ಲಿ ಮುಳಿಯಾರು, ಮಧೂರು, ಮಂಜೇಶ್ವರ, ಮೊಗ್ರಾಲ್ ಪುತ್ತೂರು, ಪುಲ್ಲೂರು-ಪೆರಿಯ, ಚೆಂಗಳ, ಬೇಡಡ್ಕ, ಉದುಮಾ ಗ್ರಾಮ ಪಂಚಾಯತ್ ಗಳನ್ನು "ಡಿ" ವಿಭಾಗದಲ್ಲಿ ಸೇರ್ಪಡೆಗೊಳಿಸಲಾಗಿದೆ. 

        ಟೆಸ್ಟ್ ಪಾಸಿಟಿವಿಟಿ ಗಣನೆ 12 ರಿಂ 18 ರ ಮಧ್ಯೆ ಇರುವ ಕ್ಯಾಟಗರಿ "ಸಿ"ಯಲ್ಲಿ ಬದಿಯಡ್ಕ, ಕೋಡೋಂ-ಬೇಳೂರು, ಪಳ್ಳಿಕ್ಕರೆ, ಪೈವಳಿಕೆ, ವೆಸ್ಟ್ ಏಲೇರಿ, ಚೆಮ್ನಾಡು, ಅಜಾನೂರು, ಕಾರಡ್ಕ ಗ್ರಾಮ ಪಂಚಾಯತ್ ಗಳನ್ನು, ಕಾಞಂಗಾಡು, ನೀಲೇಶ್ವರ ನಗರಸಭೆಗಳನ್ನು ಅಳವಡಿಸಲಾಗಿದೆ. 

              ಟೆಸ್ಟ್ ಪಾಸಿಟಿವಿಟಿ ಸರಾಸರಿ  ಗಣನೆ 6 ರಿಂದ 12 ರ ಮಧ್ಯೆ ಇರುವ "ಬಿ" ಕ್ಯಾಗರಿಯಲ್ಲಿ ಬಳಾಲ್, ಕಾಸರಗೋಡು, ಎಣ್ಮಕಜೆ, ಕಳ್ಳಾರ್, ದೇಲಂಪಾಡಿ, ಕಿನಾನೂರು-ಕರಿಂದಲಂ, ಕುಂಬ್ಡಾಜೆ, ಕುಂಬಳೆ, ಮಡಿಕೈ, ಮಂಗಲ್ಪಾಡಿ, ಈಸ್ಟ್ ಏಳೇರಿ, ಪನತ್ತಡಿ ಎಂಬ ಸ್ಥಳೀಯಾಡಳಿತ ಸಂಸ್ಥೆಗಳನ್ನು ಅಳವಡಿಸಲಾಗಿದೆ.

          ಟೆಸ್ಟ್ ಪಾಟಿಸಿಟಿವಿಟಿ ಸರಾಸರಿ ಗಣನೆ 6ಕ್ಕಿಂತ ಕಡಿಮೆಯಿರುವ "ಎ" ಕ್ಯಾಟಗರಿಯಲ್ಲಿ ಪುತ್ತಿಗೆ, ಪಿಲಿಕೋಡು, ಕಯ್ಯೂರು-ಚೀಮೇನಿ, ತ್ರಿಕರಿಪುರ, ಮೀಂಜ, ವಲಿಯಪರಂಬ, ಪಡನ್ನ, ಬೆಳ್ಳೂರು, ವರ್ಕಾಡಿ  ಎಂಬ ಸ್ಥಳೀಯಾಡಳಿತ ಸಂಸ್ಥೆಗಳನ್ನು ಸೇರಿಸಲಾಗಿದೆ. 

                            ಪ್ರತಿ ಕ್ಯಾಟಗರಿಯಲ್ಲಿ ಅನುಮತಿ ಹೊಂದಿರುವವು

ಕ್ಯಾಟಗರಿ "ಡಿ"-

                   ಟೆಸ್ಟ್ ಪಾಸಿಟಿವಿಟಿ ಗಣನೆ ಶೇ 18ಕ್ಕಿಂತ ಅಧಿಕವಾಗಿರುವ ಕ್ಯಾಟಗರಿ "ಡಿ"ಯಲ್ಲಿ ಸೇರಿರುವ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ರಾಜ್ಯದ ಎಲ್ಲೆಡೆ ಇರುವಂತೆ ಶನಿ, ಭಾನುವಾರದ ಸಂಪೂರ್ಣ ಲಾಕ್ ಡೌನ್ ಇರುವುದು.

ಕ್ಯಾಟಗರಿ "ಸಿ"-

        ಅಗತ್ಯದ ಸಾಮಾಗ್ರಿಗಳ ಅಂಗಡಿಗಳು ಮಾತ್ರ ಬೆಳಗ್ಗೆ 7 ರಿಂದ ಸಂಜೆ 7 ವರೆಗೆ ತೆರೆದು ಕಾರ್ಯಾಚರಿಸಲು ಅನುಮತಿಯಿದೆ. ಇತರ ಅಂಗಡಿಗಳು( ವಿವಾಹ ಸಂಬಂಧ ಬಟ್ಟೆಬರೆ ಅಂಗಡಿ, ಜ್ಯುವೆಲ್ಲರಿ, ಫುಟ್ ವೇರ್, ಕಲಿಕೋಪಕರಣ, ದುರಸ್ತಿ ಅಂಗಡಿ) ಶುಕ್ರವಾರ ಮಾತ್ರ ಬೆಳಗ್ಗೆ 7 ರಿಂದ ಸಂಜೆ 7 ವರೆಗೆ ಅಧಾರ್ಂಶ ಸಿಬ್ಬಂದಿಯೊಂದಿಗೆ ಚಟುವಟಿಕೆ ನಡೆಸಬಹುದು. ಹೋಟೆಲ್ ಗಳು, ರೆಸ್ಟಾರೆಂಟ್ ಗಳಲ್ಲಿ ಪಾರ್ಸೆಲ್/ ಹೋಂ ಡೆಲಿವರಿ ಮಾತ್ರ. ಸಾರ್ವಜನಿಕ ಸಂಸ್ಥೆಗಳು, ಕಂಪನಿಗಳು, ಕಮೀಷನ್ ಗಳು, ನಿಗಮಗಳು, ಸ್ಥಳೀಯಾಡಳಿತ ಸಂಸ್ಥೆಗಳು ಇತ್ಯಾದಿ ಶೇ 25 ಸಿಬ್ಬಂದಿಯನ್ನು ಬಳಸಿ ಚಟುವಟಿಕೆ ನಡೆಸಬಹುದು. 

ಕ್ಯಾಟಗರಿ "ಬಿ"-

           ಸಾರ್ವಜನಿಕ ಸಂಸ್ಥೆಗಳು, ಕಂಪನಿಗಳು, ಕಮೀಷನ್ ಗಳು, ನಿಗಮಗಳು, ಸ್ಥಳೀಯಾಡಳಿತ ಸಂಸ್ಥೆಗಳು ಶೇ 50 ಸಿಬ್ಬಂದಿಯನ್ನು ಬಳಸಿ ಕಾರ್ಯಾಚರಿಸಬಹುದು. ಉಳಿದವರು ವರ್ಕ್ ಫ್ರಂ ಹೋಂ ಕರ್ತವ್ಯ ನಡೆಸಬೇಕು. ಅಗತ್ಯದ ಸಾಮಾಗ್ರಿಗಳ ಅಂಗಡಿಗಳು ಮಾತ್ರ ಬೆಳಗ್ಗೆ 7 ರಿಂದ ಸಂಜೆ 7 ವರೆಗೆ ಚಟುವಟಿಕೆ ನಡೆಸಬಹುದು. ಇತರ ಅಂಗಡಿಗಳು ಸೋಮ, ಬುಧ, ಶುಕ್ರ ವಾರಗಳಂದು ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಚಟುವಟಿಕೆ ನಡೆಸಬಹುದು. ಪರಸ್ಪರ ಸಂಪರ್ಕವಿಲ್ಲದ ಹೊರಾಂಗಣ ಕ್ರೀಡಾ ಚಟುವಟಿಕೆಗಳಿಗೆ ಅನುಮತಿಯಿದೆ. ಸಾಮಾಜಿಕ ಅಂತರ ಪಾಲಿಸಿ ಬೆಳಗ್ಗೆ ಮತ್ತು ಸಂಜೆ ವ್ಯಾಯಾಮ ನಡೆಸಬಹುದು. ಹೋಟೆಲ್, ರೆಸ್ಟಾರೆಂಟ್ ಗಳಲ್ಲಿ ಪಾರ್ಸೆಲ್/ ಹೋಂ ಡೆಲಿವರಿ ಮಾತ್ರ. ಮನೆಗಳಲ್ಲಿ ಕೆಲಸದಾಳುಗಳು ಸಂಚಾರ ನಡೆಸಬಹುದು. ಆರಧನಾಲಯಗಳಲ್ಲಿ ಗರಿಷ್ಠ 15 ಮಂದಿಗೆ ಪ್ರವೇಶಾತಿ ಇರುವುದು. ಕೋವಿಡ್ ಕಟ್ಟುನಿಟ್ಟು ಕಡ್ಡಾಯವಾಗಿ ಪಾಲಿಸಬೇಕು. 

ಕ್ಯಾಟಗರಿ "ಎ"-

             ಎಲ್ಲ ಸಾರ್ವಜನಿಕ ಸಂಸ್ಥೆಗಳು, ನಿಗಮಗಳು, ಕಮೀಷನ್ ಗಳು, ಕಂಪನಿಗಳು, ಸ್ಥಳೀಯಾಡಳಿತ ಸಂಸ್ಥೆಗಳು ಶೇ 50 ಸಿಬ್ಬಂದಿ ಬಳಸಿ ಚಟುವಟಿಕೆ ನಡೆಸಬಹುದು. ಉಳಿದವರು ವರ್ಕ್ ಪ್ರಂ ಹೋಂ ಕರ್ತವ್ಯ ನಡೆಸಬಹುದು. ಎಲ್ಲ ಅಂಗಡಿಗಳು(ಅಕ್ಷಯ ಕೇಂದ್ರಗಳ ಸಹಿತ) ಶೇ 50 ಸಿಬ್ಬಂದಿ ಬಳಸಿ ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಚಟುವಟಿಕೆ ನಡೆಸಬಹುದು. ಆಟೋ, ಟಾಕ್ಸಿ ಚಟುವಟಿಕೆ ನಡೆಸಬಹುದು. ಟಾಕ್ಸಿಗಳಲ್ಲಿ ಚಾಲಕ ಅಲ್ಲದೆ ಮೂವರು, ಆಟೋಗಳಲ್ಲಿ ಇಬ್ಬರು ಪ್ರಯಾಣಿಕರು ಸಂಚಾರ ನಡೆಸಬಹುದು. ಒಂದೇ ಕುಟುಂಬದ ಸದಸ್ಯರಾಗಿದ್ದಲ್ಲಿ ಈ ಶರತ್ತು ಅನ್ವಯವಲ್ಲ. ಬಿವರೇಜಸ್ ಔಟ್ ಲೆಟ್ ಗಳು, ಬಾರುಗಳು ಇತ್ಯಾದಿಗಳಲ್ಲಿ ಟೇಕ್ ಎವೇ ಕೌಮಟರ್ ಗಳು ಮಾತ್ರ ಚಟುವಟಿಕೆ ನಡೆಸಬಹುದು. ಪರಸ್ಪರ ಸಂಪರ್ಕವಿಲ್ಲದ ಹೊರಾಂಗಣ ಕ್ರೀಡಾ ಚಟುವಟಿಕೆಗಳಿಗೆ ಅನುಮತಿಯಿದೆ. ಹೋಟೆಲ್, ರೆಸ್ಟಾರೆಂಟ್ ಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ವರೆಗೆ ಪಾರ್ಸೆಲ್/ ಹೋಂ ಡೆಲಿವರಿ ಮಾತ್ರ. ಹೋ ಡೆಲಿವರಿ ರಾತ್ರಿ 9.30 ವರೆಗೆ ನಡೆಸಬಹುದು. ಮನೆ ಕೆಲಸದಾಳುಗಳು ಸಂಚಾರ ನಡೆಸಬಹುದು. ಆರಾಧನಾಲಯಗಳಲ್ಲಿ ಗರಿಷ್ಠ 15 ಮಂದಿಗೆ ಪ್ರವೇಶಾತಿ ಇರುವುದು. ಕೋವಿಡ್ ಕಟ್ಟುನಿಟ್ಟು ಕಡ್ಡಾಯವಾಗಿ ಪಾಲಿಸಬೇಕು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries