ಕೋಝಿಕ್ಕೋಡ್: ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಎಂಬ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಒಂದೂವರೆ ವರ್ಷದ ಹುಡುಗನಿಗೆ ವಿಶೇಷ ಚಿಕಿತ್ಸೆಗೆ ಕೇರಳ ಕೈಜೋಡಿಸಿ ಔದಾರ್ಯ ಮೆರೆದಿದೆÉ. ಕಣ್ಣೂರಿನ ಪಚ್ಚಯಂಗಾಡಿ ಮೂಲದ ಒಂದೂವರೆ ವರ್ಷದ ಮೊಹಮ್ಮದ್ ಗೆ ಉನ್ನತ ಚಿಕಿತ್ಸೆಗೆ ಬೇಕಾದ ಮೊತ್ತ 18 ಕೋಟಿ ರೂ. ಆಗಿತ್ತು. ಅಷ್ಟು ಮೊತ್ತ ದಾನಿಗಳಿಂದ ಜಮೆಯಾಗಿದ್ದು, ಇನ್ನು ಯಾರೂ ಹಣವನ್ನು ಕಳುಹಿಸಬೇಕಾಗಿಲ್ಲ ಎಂದು ಕುಟುಂಬ ಹೇಳಿದೆ. ಮುಹಮ್ಮದ್ ಮಾತುಲ್ ನಿವಾಸಿ ರಫೀಕ್ ಮತ್ತು ಮರಿಯಮ್ಮ ದಂಪತಿಗಳ ಪುತ್ರ.
ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಹತ್ತು ಸಾವಿರ ಜನರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುವ ಅಪರೂಪದ ಕಾಯಿಲೆಯಾಗಿದೆ. ರೋಗದಿಂದಾಗಿ ಮಗುವಿಗೆ ನಡೆಯಲು ಸಾಧ್ಯವಾಗುತ್ತಿಲ್ಲ. ಮುಹಮ್ಮದ್ ಅವರ ಸಹೋದರಿ ಅಫ್ರಾ ಳಿಗೆ ಇದೇ ರೋಗದಿಂದ ಬಳಲುತ್ತಿರುವರು. ಆ ಬಳಿಕ ಮೊಹಮ್ಮದ್ ಗೂ ಈ ಕಾಯಿಲೆ ಅಂಟಿಕೊಂಡಿತು.
ಮಗುವಿಗೆ ಚಿಕಿತ್ಸೆ ನೀಡಲು ಸೊಲ್ಜೆನ್ಸ್ಮಾ ಎಂಬ ಔಷಧಿಯ ಒಂದು ಡೋಸ್ ಅಗತ್ಯವಿದೆ. ಈ ಔಷಧಿಯನ್ನು ಅಮೇರಿಕಾದಿಂದ ಆಮದು ಮಾಡಿಕೊಳ್ಳಲು 18 ಕೋಟಿ ರೂ. ಖರ್ಚು ತಗಲುತ್ತದೆ. ಜೊತೆಗೆ ಈ ಔಷಧಿಯನ್ನು ಮುಂದಿನ ನವೆಂಬರ್ ಗೂ ಮೊದಲು ನೀಡಿದರಷ್ಟೇ ಪರಿಣಾಮಕಾರಿ ಎಂದು ವೈದ್ಯರು ಸಲಹೆ ನೀಡಿದ್ದರು. ಇಷ್ಟು ದೊಡ್ಡ ಮೊತ್ತವನ್ನು ಪಡೆಯಲು ಕಡು ಬಡತನದ ಕುಟುಂಬಕ್ಕೆ ಅನ್ಯ ಮಾರ್ಗವಿಲ್ಲದಿದ್ದಾಗ ಮಾಧ್ಯಮಗಳು ಈ ವಿಷಯವನ್ನು ಕೈಗೆತ್ತಿಕೊಂಡವು.
ಸೋಷಿಯಲ್ ಮೀಡಿಯಾದ ಮೂಲಕ ಹರಡಿದ ಸುದ್ದಿಯನ್ನು ಕೇರಳ ಒಟ್ಟಾರೆಯಾಗಿ ಕೈಗೆತ್ತಿಕೊಂಡಿತು. ಎರಡು ದಿನಗಳಲ್ಲಿ, ಮುಹಮ್ಮದ್ ಅವರನ್ನು ಉಳಿಸಲು ಕೈಜೋಡಿಸುವ ವಿನಂತಿಗಳನ್ನು ಫೇಸ್‍ಬುಕ್ ಮತ್ತು ವಾಟ್ಸಾಪ್‍ನಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಿದ್ದರಿಂದ ಕುಟುಂಬವು 18 ಕೋಟಿ ರೂ.ಸಂಗ್ರಹಿಸಿತು. ಮೊದಲ ದಿನದ ಅಂತ್ಯದ ವೇಳೆಗೆ 14 ಕೋಟಿ ರೂ.ಸ|ಂಗ್ರಹವಾದರೆ ಎರಡನೇ ದಿನ ಉಳಿದ ಮೊತ್ತ ಸಂಗ್ರಹಗೊಂಡಿತು. ಮುಹಮ್ಮದ್ ಅವರ ಸಹೋದರಿ ಅಫ್ರಾ, ಹಣಕ್ಕೆ ಸಹಾಯ ಮಾಡಿದವರಿಗೆ ಕೃತಜ್ಞರಾಗಿರುತ್ತೇನೆ ಎಂದು ಹೇಳಿರುವಳು.