ತಿರುವನಂತಪುರ: ರಾಜ್ಯದಲ್ಲಿ ಇಂದು 18,531 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 2816, ತ್ರಿಶೂರ್ 2498, ಕೋಝಿಕೋಡ್ 2252, ಎರ್ನಾಕುಳಂ 2009, ಪಾಲಕ್ಕಾಡ್ 1624, ಕೊಲ್ಲಂ 1458, ತಿರುವನಂತಪುರ 1107, ಕಣ್ಣೂರು 990, ಆಲಪ್ಪುಳ 986, ಕೊಟ್ಟಾಯಂ 760, ಕಾಸರಗೋಡು 669, ವಯನಾಡ್ 526, ಪತ್ತನಂತಿಟ್ಟು 485, ಇಡುಕ್ಕಿ 351ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 1,55,568 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.11.91 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,61,06,272 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 98 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 15,969 ಕ್ಕೆ ಏರಿಕೆಯಾಗಿದೆ.
ಸೋಂಕು ಪತ್ತೆಯಾದವರಲ್ಲಿ 113 ಮಂದಿ ಜನರು ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 17,538 ಮಂದಿಗೆ ಸೋಂಕು ತಗಲಿದೆ. 806 ಮಂಂದಿಯ ಸÀಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 2707, ತ್ರಿಶೂರ್ 2472, ಕೋಝಿಕೋಡ್ 2233, ಎರ್ನಾಕುಲಂ 1956, ಪಾಲಕ್ಕಾಡ್ 1097, ಕೊಲ್ಲಂ 1454, ತಿರುವನಂತಪುರ 1032, ಕಣ್ಣೂರು 884, ಆಲಪ್ಪುಳ 984, ಕೊಟ್ಟಾಯಂ 737, ಕಾಸರಗೋಡು652, ವಯನಾಡ್ ಅ18, ಪತ್ತನಂತಿಟ್ಟು 472, ಇಡುಕ್ಕಿ 340 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಸೋಂಕು ಇಂದು 74 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಕಂಡುಬಂದಿದೆ. ತ್ರಿಶೂರ್, ಪಾಲಕ್ಕಾಡ್, ಕಣ್ಣೂರು ತಲಾ 13, ಕಾಸರಗೋಡು 9, ಎರ್ನಾಕುಲಂ 6, ಪತ್ತನಂತಿಟ್ಟು, ವಯನಾಡ್ ತಲಾ 5, ಮಲಪ್ಪುರಂ 3, ಕೊಲ್ಲಂ, ಇಡುಕ್ಕಿ, ಕೋಝಿಕೋಡ್ 2 ಮತ್ತು ತಿರುವನಂತಪುರ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 15,507 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರಂ 856, ಕೊಲ್ಲಂ 1413, ಪತ್ತನಂತಿಟ್ಟು 502, ಆಲಪ್ಪುಳ 1914, ಕೊಟ್ಟಾಯಂ 684, ಇಡುಕ್ಕಿ 235, ಎರ್ನಾಕುಲಂ 1419, ತ್ರಿಶೂರ್ 1970, ಪಾಲಕ್ಕಾಡ್ 1026, ಮಲಪ್ಪುರಂ 2401, ಕೋಝಿಕೋಡ್ 1348, ವಯನಾಡ್ 387, ಕಣ್ಣೂರು 718, ಕಾಸರಗೋಡು 634 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,38,124 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 30,99,469 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,24,351 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,98,407 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 25,944 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. 2207 ಮಂದಿ ಹೊಸ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪಿಆರ್ 5ಕ್ಕಿಂತ ಕೆಳಗೆ 73, 5 ರಿಂದ 10 ರ ನಡುವೆ 335, 10 ಮತ್ತು 15 ರ ನಡುವೆ 355, 15 ಕ್ಕಿಂತ ಮೇಲೆ 271 ಸ್ಥಳೀಯಾಡಳಿತ ಸಂಸ್ಥೆಗಳಿವೆ.