ಪನ್ನಾ, ಮಧ್ಯಪ್ರದೇಶ: ಪನ್ನಾ ಜಿಲ್ಲೆಯಲ್ಲಿ ಸಿಡಿಲು ಬಡಿದ ನಾಲ್ಕು ಪ್ರತ್ಯೇಕ ಘಟನೆಗಳಲ್ಲಿ ಐವರು ಮೃತಪಟ್ಟಿದ್ದು, 18 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಉರೆಹಾ, ಪಿಪಾರಿಯಾ ದೌನ್, ಚೌಮುಖ ಹಾಗೂ ಸಿಮ್ರಾಖುರ್ದ್ ಗ್ರಾಮಗಳಲ್ಲಿ ಈ ಘಟನೆಗಳು ಸಂಭವಿಸಿವೆ ಎಂದು ಉಪವಿಭಾಗಾಧಿಕಾರಿ ರಚನಾ ಶರ್ಮಾ ಹೇಳಿದ್ದಾರೆ.
ಉರೆಹಾ, ಪಿಪಾರಿಯಾ ದೌನ್ ಹಾಗೂ ಚೌಮುಖ ಗ್ರಾಮಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಸಿಮ್ರಾಖುರ್ದ್‌ನಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.