ನವದೆಹಲಿ: 'ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಯ 1.91 ಕೋಟಿಗೂ ಹೆಚ್ಚು ಡೋಸ್‌ಗಳು ಲಭ್ಯವಿವೆ' ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
'ಈವರೆಗೆ ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ 39.46 ಕೋಟಿಗೂ ಹೆಚ್ಚು ಡೋಸ್‌ಗಳನ್ನು ವಿತರಿಸಿದೆ.
'ಇದರಲ್ಲಿ ಪೋಲಾಗಿರುವ ಲಸಿಕೆ ಸೇರಿ ಒಟ್ಟು 37,55,38,390 ಡೋಸ್‌ಗಳನ್ನು ಉಪಯೋಗಿಸಲಾಗಿದೆ. ಇನ್ನೂ 1.91 ಕೋಟಿಗೂ ಹೆಚ್ಚು ಡೋಸ್‌ಗಳು ಬಾಕಿ ಉಳಿದಿವೆ ' ಎಂದು ಸಚಿವಾಲಯ ಮಾಹಿತಿ ನೀಡಿದೆ.