ಕೊರೊನಾ ಲಸಿಕೆ ನನ್ನ ಮೇಲೆ ಪರಿಣಾಮ ಬೀರಿದೆಯೇ? ಇದು ತೆಗೆದುಕೊಂಡ ಬಳಿಕ ನನ್ನಲ್ಲಿ ಆ್ಯಂಟಿ ಬಾಡಿ ಅಧಿಕವಾಗಿದೆಯೇ ಎಂಬ ಪ್ರಶ್ನೆ ಲಸಿಕೆ ತೆಗೆದುಕೊಂಡ ಪ್ರತಿಯೊಬ್ಬರಲ್ಲೂ ಇದೆ. ಈ ರೀತಿಯ ಪ್ರಶ್ನೆಯಿಂದಾಗಿ ಕೆಲವರು ಆ್ಯಂಟಿಬಾಡಿ ಪರೀಕ್ಷೆ ಮಾಡಿಸುತ್ತಿದ್ದಾರೆ.
ಕೊರೊನಾ 2ನೇ ಅಲೆ ದೇಶದಲ್ಲಿ ಕಡಿಮೆಯಾದ ಕಾರಣ ಮತ್ತೆ ಆಫೀಸ್, ಉದ್ಯಮಗಳು, ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿವೆ. ಕೆಲವು ಆಫೀಸ್‌ಗಳಲ್ಲಿ ಉದ್ಯೋಗಿಗಳಿಗೆ ಆಫೀಸ್‌ಗೆ ಬರಲು ಹೇಳುತ್ತಿದ್ದಾರೆ, ಆಫೀಸ್‌ಗೆ ಬರುವ ಕೋವಿಡ್ ಲಸಿಕೆ ಪಡೆದಿರಬೇಕು ಹಾಗೂ ಆ್ಯಂಟಿಬಾಡಿ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚಿಸುತ್ತಿದ್ದಾರೆ. ಆ್ಯಂಟಿ ಬಾಡಿ ಪರೀಕ್ಷೆ ಮಾಡಿಸಿದಾಗ ಅವರೂ ಇನ್ನೂ ಕ್ವಾರಂಟೈನ್‌ನಲ್ಲಿ ಇದ್ದು ಬರಬೇಕೆ? ಇಲ್ಲಾ ಕೆಲಸಕ್ಕೆ ಬರಬಹುದಾ ಎಂಬುವುದನ್ನು ನಿರ್ಧರಿಸಲಾಗುವುದು.
ಆ್ಯಂಟಿಬಾಡಿ ಪರೀಕ್ಷೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುವುದರ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಾ ಇವೆ. ಈ ಪರೀಕ್ಷೆ ಮಾಡುವುದರಿಂದ ಕೊರೊನಾವೈರಸ್ ತಡೆಗಟ್ಟುವ ಸಾಮರ್ಥ್ಯ ವ್ಯಕ್ತಿಯಲ್ಲಿ ಇದೆ ಎಂದು ತಿಳಿಯುವುದೇ? ಈ ಪರೀಕ್ಷೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:
ಆ್ಯಂಟಿಬಾಡೀಸ್ ಎಂದರೇನು?
ಆ್ಯಂಟಿಬಾಡೀಸ್ ಎನ್ನುವುದು ಒಂದು ಪ್ರೊಟೀನ್ ಆಗಿದ್ದು ಇದನ್ನು ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯೂ ಉತ್ಪಾದಿಸುತ್ತದೆ. ಆದರೆ ಇವುಗಳು ಒಂದು ನಿರ್ದಿಷ್ಟ ಕಾಯಿಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ ಕೊರೊನಾ ತಡೆಗಟ್ಟುವ ಆ್ಯಂಟಿಬಾಡಿಗಳಾದರೆ ಅವು ಕೊರೊನಾವೈರಸ್ ವಿರುದ್ಧ ಮಾತ್ರ ಹೋರಾಡುತ್ತದೆ, ಇದರ ಸೋಂಕು ತಡೆಗಟ್ಟಲ್ಲ. ಅದೇ ರೀತಿ ಬೇರೆ ಕಾಯಿಲೆ ತಡೆಗಟ್ಟುವ ಆ್ಯಂಟಿ ಬಾಡೀಸ್ ಕೊರೊನಾವೈರಸ್ ತಡೆಗಟ್ಟಲ್ಲ. ಆ್ಯಂಟಿಬಾಡಿ ಪರೀಕ್ಷೆಯಲ್ಲಿ ಯಾವ ವೈರಸ್ ವಿರುದ್ಧ ಹೋರಾಡುತ್ತದೆ ಎಂದು ನೋಡುತ್ತಿಲ್ಲ, ಬದಲಿಗೆ ಯಾವುದೇ ಕಾಯಿಲೆ ವಿರುದ್ಧ ಹೋರಾಡುವ ಶಕ್ತಿ ನಿಮ್ಮ ದೇಹದಲ್ಲಿ ಇದೆಯೇ ಎಂಬುವುದು ನೋಡಲಾಗುತ್ತಿದೆ.
ಆ್ಯಂಟಿಬಾಡೀಸ್ ಹೇಗೆ ಕಾರ್ಯನಿರ್ವಹಿಸುತ್ತಿದೆ?
ಆ್ಯಂಟಿಬಾಡಿ ಪರೀಕ್ಷೆಯಲ್ಲಿ ನೆಗೆಟಿವ್ ಬಂದ್ರೆ? ಒಂದು ವೇಳೆ ಆ್ಯಂಟಿಬಾಡಿ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದ್ರೆ ಇನ್ನೂ ಕೊರೊನಾವೈರಸ್ ಬಂದಿಲ್ಲಾ ಅಂದ್ರೆ ಅಥವಾ ಕೊರೊನಾದಿಂದ ಚೇತರಿಸಿದ ಬಳಿಕ ಅಥವಾ ಲಸಿಕೆ ಪಡೆದ ಬಳಿಕ ಬೇಗನೆ ಪರೀಕ್ಷೆ ಮಾಡಿಸಿದ್ದರೆ ವರದಿ ನೆಗೆಟಿವ್ ಬರುವುದು.
ಯಾವಾಗ ಆ್ಯಂಟಿಬಾಡಿ ಪರೀಕ್ಷೆ ಮಾಡಿಸಬೇಕು
ಆ್ಯಂಟಿಬಾಡಿ ಹಾಗೇ ಇರುವುದೇ?
ವಿರುದ್ಧ ವಾದವೂ ಇದೆ!