ನವದೆಹಲಿ: ಮೆಟ್ರೋಪಾಲಿಟನ್ ನಗರಗಳ ಹೊರತಾಗಿ ಕೋವಿಡ್-19 ಲಸಿಕೆಗಳ ಸಂಗ್ರಹಕ್ಕಾಗಿ ಖಾಸಗಿ ಆಸ್ಪತ್ರೆಗಳು ಪರದಾಡುತ್ತಿವೆ. ಹೊಸ ಲಸಿಕೆ ನೀತಿಯಡಿ ಲಸಿಕೆ ಉತ್ಪಾದಕರಿಗೆ ಕಡಿಮೆ ಪೂರೈಕೆ ಹಾಗೂ ರಾಜ್ಯಗಳ ಮಟ್ಟದಲ್ಲಿ ಸಮನ್ವಯದ ಕೊರತೆಗಳು ಖಾಸಗಿ ಆಸ್ಪತ್ರೆಗಳನ್ನು ಬಾಧಿಸುತ್ತಿವೆ.
ಲಸಿಕೆ ಅಭಿಯಾನ ನಿಧಾನಗತಿಯಲ್ಲಿರುವುದಕ್ಕೆ ಕೇಂದ್ರ ಸರ್ಕಾರದಿಂದ ಆಕ್ಷೇಪ ವ್ಯಕ್ತವಾಗಿದ್ದ ಕೆಲವೇ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ಪತ್ರಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ.
ಈ ತಿಂಗಳಲ್ಲಿ ಹೆಚ್ಚು ಪ್ರಮಾಣದ ಲಸಿಕೆಗಳು ಕೇಂದ್ರ ಕೋಟಾದಡಿ ಹೋಗಿದ್ದು, ಹೆಲ್ತ್ ಕೇರ್ ಸೇವೆ ಒದಗಿಸುತ್ತಿರುವ ಖಾಸಗಿ ಸಂಸ್ಥೆಗಳು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಲಸಿಕೆ ಉತ್ಪಾದನೆ ಹೆಚ್ಚಳವಾಗಿದ್ದು, ಈ ಪೈಕಿ ಹೆಚ್ಚಿನ ಪ್ರಮಾಣದ ಲಸಿಕೆಯನ್ನು ಕೇಂದ್ರ ಸರ್ಕಾರ ವಿತರಣೆಗಾಗಿ ತೆಗೆದುಕೊಳ್ಳುತ್ತಿದೆ.
ಪರಿಣಾಮವಾಗಿ ಖಾಸಗಿ ಕ್ಷೇತ್ರಕ್ಕೆ ಲಭ್ಯತೆ ಕಡಿಮೆಯಾಯಿತು. ಜುಲೈ 15 ರಿಂದ ಅಷ್ಟೇ ಲಸಿಕೆ ಸಂಗ್ರಹ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಗತಿಯಲ್ಲಿದೆ.