ಕಾಸರಗೋಡು: ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅವರ ಆದೇಶ ಪ್ರಕಾರ ಇಂದು ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ 19 ಮಾಸ್ ಟೆಸ್ಟಿಂಗ್ ಅಭಿಯಾನ ಜರುಗಲಿದೆ. ತಪಾಸಣೆಗಳು ಕಡಿಮೆಯಾಗುತ್ತಿರುವ ಕಾರಣ ಸ್ಥಳೀಯಾಡಳಿತ ಸಂಸ್ಥೆಗಳು ಡಿ ಕ್ಯಾಟಗರಿಗೆ ಸೇರ್ಪಡೆಗೊಳ್ಳುತ್ತಿವೆ ಎಂಬ ಕಾರಣದಿಂದ ಸಾಮಾಹಿಕ ತಪಾಸಣೆ ನಡೆಸುವುದಾಗಿ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿರುವರು.