ನವದೆಹಲಿ: ಕೋವಿಡ್-19 ಪ್ರಕರಣಗಳು ಕ್ರಮೇಣವಾಗಿ ಕುಗ್ಗುತ್ತಿರಬಹುದು ಆದರೆ ಅದರ ವೈರಾಣು ರೂಪಾಂತರಗೊಳ್ಳುತ್ತಿದೆ. ದೆಹಲಿಯಲ್ಲಿ ಶೂನ್ಯ ಪ್ರಕರಣಗಳು ದಾಖಲಾಗುವುದು ಕಷ್ಟ ಸಾಧ್ಯ ಎಂದು ತಜ್ಞರು ಹೇಳಿದ್ದಾರೆ.
ಕೊರೋನಾ ಭವಿಷ್ಯದಲ್ಲಿ ಸ್ಥಳೀಯ ಪ್ರಭೇಧಗಳ ಎಂಡಮಿಕ್ ಆಗಲಿದ್ದು, ಕೊರೋನಾದ ಕೆಲವೇ ಕೆಲವು ಪ್ರಕರಣಗಳಾದರೂ ಇರಲಿವೆ ಎಂದು ದೆಹಲಿ ಸರ್ಕಾರಿ ಸ್ವಾಮ್ಯದ ಎಲ್‌ಎನ್ ಜೆಪಿ ಆಸ್ಪತ್ರೆಯ ನಿರ್ದೇಶಕ ಡಾ. ಸುರೇಶ್ ಕುಮಾರ್ ಹೇಳಿದ್ದಾರೆ.
"ದೆಹಲಿಯಲ್ಲಿ ಶೂನ್ಯ ಪ್ರಕರಣಗಳು ದಾಖಲಾಗುವುದು ಸಾಧ್ಯವಿಲ್ಲ. ವೈರಾಣು ರೂಪಾಂತರಗೊಳ್ಳುತ್ತಿದೆ. ಅದರ ಭವಿಷ್ಯದ ರೂಪಾಂತರವನ್ನು ಅಂದಾಜಿಸುವುದು ಕಷ್ಟ" ಎಂದು ಡಾ. ಸುರೇಶ್ ಕುಮಾರ್ ಹೇಳಿದ್ದಾರೆ.
ಕೊರೋನಾ ವೈರಾಣು ಏಕೆ ರೂಪಾಂತರಗೊಳ್ಳುತ್ತಿದೆ ಎಂಬುದಕ್ಕೆ ಕಾರಣ ನೀಡಿರುವ ಅಮೃತ ಆಸ್ಪತ್ರೆಯ ಸ್ಥಳೀಯ ನಿರ್ದೇಶಕರಾದ ಡಾ. ಸಂಜೀವ್ ಕೆ. ಸಿಂಗ್ ಕೊರೋನಾ ಎಂಆರ್ ಎನ್‌ಎ ವೈರಾಣುವಾಗಿದ್ದು, ತನ್ನ ರಚನೆಯನ್ನು ನಿರಂತರವಾಗಿ ಬದಲಾವಣೆ ಮಾಡಿಕೊಳ್ಳುತ್ತಿರುತ್ತದೆ.
ಈ ವೈರಾಣು ಜೀವಂತವಾಗಿ ಉಳಿಯುವುದಕ್ಕೆ ರೂಪಾಂತರಗೊಳ್ಳುತ್ತಿರುತ್ತದೆ. ಕೋವಿಡ್-19 ಇರಲಿದೆ, ಅದು ಎಲ್ಲಾ 193 ದೇಶಗಳನ್ನೂ ಬಾಧಿಸದೇ ಇರಬಹುದು ಆದರೆ ಅದರ ಅಸ್ತಿತ್ವ ಇರಲಿದೆ ಎಂದು ಹೇಳಿದ್ದಾರೆ.