HEALTH TIPS

ಕೋವಿಡ್ 19 ಲಸಿಕೆ ಪಡೆದ ನಂತರ ಕೈ ನೋವು ಏಕೆ ಬರುತ್ತದೆ? ಇದು ಎಷ್ಟು ದಿನ ಕಾಡುತ್ತದೆ?

             ಕೊರೊನಾ ಮಾರಕ ರೋಗದ ವಿರುದ್ಧದ ಸಮರದಲ್ಲಿ ಇಡೀ ವಿಶ್ವದ ಗಮನವಿದೆ. ಇದಕ್ಕಾಗಿ ಪ್ರಪಂಚದ ಹಲವು ದೇಶಗಳು ಪ್ರತ್ಯೇಕ ಲಸಿಕೆಗಳನ್ನು ಸಹ ಸಿದ್ಧಪಡಿಸಿದೆ. ಭಾರತವೂ ಕೋವೀಶೀಲ್ಡ್‌ ಹಾಗೂ ಕೋವಾಕ್ಸಿನ್‌ ಎಂಬ ಲಸಿಕೆಗಳನ್ನು ದೇಶದ ಜನತೆಗೆ ನೀಡುವ ಮೂಲಕ ಕೊರೊನಾ ವಿರುದ್ಧದ ಸಮರಕ್ಕೆ ಮುಂದಾಗಿದೆ. ಕೊರೊನಾ ಬಾರದಂತೆ ತಡೆಯಲು ಅಥವಾ ಬಂದರೂ ಯಾವುದೇ ಗಂಭೀರ ಸಮಸ್ಯೆ ಎದುರಾಗದಂತೆ ಈ ಲಸಿಕೆಗಳು ತಡೆಯುತ್ತದೆ ಎನ್ನಲಾಗುತ್ತದೆ.

             ಈ ಹಿನ್ನೆಲೆ ದೇಶದ ಜನತೆ ಲಸಿಕೆ ಪಡೆಯುತ್ತಿದ್ದು, ಲಸಿಕೆ ಪಡೆದ ಮೊದಲ ಕೆಲವು ದಿನಗಳು ಅಥವಾ ಒಂದು ವಾರ ಜ್ವರ, ತಲೆನೋವು, ಮೈ-ಕೈನೋವು, ಲಸಿಕೆ ಪಡೆದ ಕೈ ನೋವು ಅಥವಾ ಊತ ಕಾಣಿಸಿಕೊಳ್ಳುವುದು ಹೀಗೆ ಕೆಲವು ಸಮಸ್ಯೆಗಳು ಕಾಡುವ ಬಗ್ಗೆ ಸಾಕಷ್ಟು ವರದಿಯಾಗಿದೆ. ಕೋವಿಡ್ ಬಂದ ನಂತರ ಸಣ್ಣ ಜ್ವರ ಬಂದರೂ ಹೆದರುವ ಜನರು ಲಸಿಕೆ ಪಡೆದ ನಂತರ ಎದುರಾಗುವ ಇದರ ಅಡ್ಡಪರಿಣಾಮಗಳಿಗೂ ಹೆದರುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಲಸಿಕೆ ಪಡೆದ ನಂತರ ಕಾಡುವ ಸಮಸ್ಯೆಗೆ ಹೆದರುವ ಅಗತ್ಯವಿಲ್ಲ, ಅದಕ್ಕೆ ಏನು ಮಾಡಬೇಕು ಮುಂದೆ ನೋಡಿ:


               ವ್ಯಾಕ್ಸಿನೇಷನ್ ನಂತರ ನೋವು? ಕೋವಿಡ್‌ ಲಸಿಕೆ ಪಡೆದ ನಂತರ ಕೆಲವರಿಗೆ ಸೌಮ್ಯ ಮತ್ತು ರಿಯಾಕ್ಟೋಜೆನಿಕ್ (ಲಸಿಕೆ ಪಡೆದ ನಂತರ ಎದುರಾಗುವ ಊತ, ನೋವು) ಅಡ್ಡಪರಿಣಾಮಗಳು ಉಂಟಾಗುವುದು ಸಾಮಾನ್ಯ. ಹಲವರಿಗೆ ಈ ನೋವು ತನ್ನಷ್ಟಕ್ಕೆ ತಾನೇ ನಿವಾರಣೆಯಾಗುತ್ತದೆ ಇದಕ್ಕೆ ಯಾವುದೇ ಔಷಧಿಯ ಅಗತ್ಯವಿಲ್ಲ, ಇನ್ನೂ ಕೆಲವರಿಗೆ ಮಾತ್ರ ಅವುಗಳ ತೀವ್ರತೆಯ ಆಧಾರದ ಮೇಲೆ ವಿರಳವಾಗಿ ತೊಂದರೆಗೊಳಗಾಗಬಹುದು. ಉದಾಹರಣೆಗೆ ತೋಳಿನಲ್ಲಿ ನೋವು, ಊತ, ಕೈ ಎತ್ತಲು ಸಾಧ್ಯವಾಗದಂತೆ ಹಿಡಿದುಕೊಳ್ಳುವುದು ಇತ್ಯಾದಿ. ವ್ಯಾಕ್ಸಿನೇಷನ್ ನಂತರದ ಕಾಣುವ ಅಡ್ಡಪರಿಣಾಮಗಳು ಪ್ರಪಂಚದಾದ್ಯಂತ ಸಾಮಾನ್ಯ ಕಂಡುಬಂದಿರುವ ಲಕ್ಷಣವಾಗಿದೆ ಮತ್ತು ಈ ಅಡ್ಡಪರಿಣಾಮಗಳು ಕಡಿಮೆ ಆಗಲು ಹೆಚ್ಚು ಸಮಯ ಸಹ ತೆಗೆದುಕೊಳ್ಳಬಹುದು.
             ಚುಚ್ಚುಮದ್ದು ನೀಡಿರುವ ಜಾಗದಲ್ಲಿ ನೋವಾಗಲು ಕಾರಣವೇನು? ಲಸಿಕೆ ಪಡೆದ ನಂತರ ಇದರ ಅಡ್ಡಪರಿಣಾಮಗಳು ಹಲವಾರು ವಿಧಗಳಲ್ಲಿ, ವಿಭಿನ್ನವಾಗಿ ಕಾಣಿಸಿಕೊಳ್ಳಬಹುದು. ಲಸಿಕೆ ಪಡೆದ ಹೆಚ್ಚಿನ ಜನರಲ್ಲಿ ತೋಳಿನ ಸುತ್ತಲು ನೋವು ಅನುಭವಿಸುವುದು ಸಾಮಾನ್ಯ ಪ್ರತಿಕ್ರಿಯೆಗಳಾಗಿರಬಹುದು. ಚುಚ್ಚುಮದ್ದು ನೀಡಿದ ಕೆಲವು ನಿಮಿಷಗಳ ಕಾಲ ಮರಗಟ್ಟುವಿಕೆ ಉಂಟಾಗಬಹುದು, ಆದರೆ ಇದು ತಾತ್ಕಾಲಿಕವಾಗಿರುತ್ತದೆ. ಚುಚ್ಚುಮದ್ದಿನ ನೋವು ಕಡಿಮೆ ಆಗಲು ಹಾಗೂ ಇತರ ಯಾವುದೇ ಅಡ್ಡಪರಿಣಾಮಗಳು ಉಂಟಾಗದೇ ಇರಲು ನೀವು ಅಗತ್ಯ ವಿಶ್ರಾಂತಿ ಪಡೆಯಬೇಕಿರುತ್ತದೆ. ಕೆಲವರಿಗೆ ನೋವಿನಿಂದ ಉಂಟಾಗುವ ಮುಂದಿನ ಸಮಸ್ಯೆಗಳ ಬಗ್ಗೆ ಮಾನಸಿಕವಾಗಿ ಸಹ ಗೊಂದಲಕ್ಕೀಡಾಗಬಹುದು. * ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ತಕ್ಷಣ ನೋವು ಕಾಣಿಸಿಕೊಳ್ಳುವುದು ಮತ್ತು ಅದನ್ನುಹತ್ತಯಿಂದ ಒರೆಸಿದಾಗ ನೋವಾಗುವುದು ಲಸಿಕೆ ಪಡೆದಾಗ ಪ್ರಾರಂಭವಾಗುವ ಮೊದಲ ಅಡ್ಡಪರಿಣಾಮಗಳಲ್ಲಿ ಒಂದಾಗಿದೆ. * ದೇಹವು ಲಸಿಕೆಯನ್ನು ಹೇಗೆ ಗ್ರಹಿಸುತ್ತದೆ ಅಥವಾ ಹೇಗೆ ಸ್ವೀಕರಿಸುತ್ತದೆ ಎಂಬುದಕ್ಕೆ ತೋಳಿನ ಕಾಣಿಸಿಕೊಳ್ಳುವ ನೋವೇ ಉದಾಹರಣೆಯಾಗಿದೆ. ನೀವು ಚುಚ್ಚುಮದ್ದನ್ನು ಪಡೆದ ನಂತರ ದೇಹವು ರಕ್ತಸ್ರಾವ ಅಥವಾ ಕತ್ತರಿಸಿದ ಗಾಯವೆಂದು ಪರಿಗಣಿಸಿ ಪ್ರತಿರಕ್ಷಣಾ ಕೋಶಗಳನ್ನು ತೋಳಿಗೆ ಕಳುಹಿಸುತ್ತದೆ ಮತ್ತು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. * ಲಸಿಕೆಯ ಪಡೆದ ನಂತರ ಉಂಟಾಗುವ ದೈಹಿಕ ಪ್ರಕ್ರಿಯೆಯು ಇಲ್ಲಿಂದಲೇ ಆರಂಭವಾಗುತ್ತದೆ. ದೇಹ ಬಿಡುಗಡೆ ಮಾಡಿದ ಪ್ರತಿರಕ್ಷಣಾ ಕೋಶಗಳು ಸಹ ಉರಿಯೂತವನ್ನು ಉಂಟುಮಾಡುತ್ತವೆ, ಅಂದರೆ ಮತ್ತೆ ನೀವು ಅದೇ ರೋಗಕಾರಕಕ್ಕೆ ಒಳಗಾದರೆ ಅದನ್ನು ಎದುರಿಸಿದರೆ ಅಥವಾ ರಕ್ಷಿಸಲು ಸಹಾಯ ಮಾಡುತ್ತದೆ. ಇದನ್ನು ತಜ್ಞರು ಲಸಿಕೆಯ 'ರಿಯಾಕ್ಟೋಜೆನಿಸಿಟಿ' ಎಂದು ಕರೆಯುತ್ತಾರೆ. * ನೋವಿನ ಹೊರತಾಗಿ, ಕೆಲವರಿಗೆ ಚುಚ್ಚುಮದ್ದು ಪಡೆದ ಸ್ಥಳದಲ್ಲಿ ತ್ವಚೆಯ ಬಣ್ಣ ಕೆಂಪು ಬಣ್ಣಕ್ಕೆ ಬದಲಾಗುತ್ತದೆ, ತುರಿಕೆ ಉಂಟಾಗಬಹುದು, ಕಿರಿಕಿರಿ ಮತ್ತು ಊತವನ್ನು ಸಹ ಅನುಭವಿಸಬಹುದು. ಒಬ್ಬರಿಗಿಂತ ಒಬ್ಬರಿಗೆ ವಿಭಿನ್ನ ಪ್ರತಿಕ್ರಿಯೆಗಳು ಕಂಡುಬರಬಹುದು.


    ನೋವು ಎಷ್ಟು ಕಾಲ ಉಳಿಯುತ್ತದೆ? ಲಸಿಕೆ ಪಡೆದ ನಂತರ ಇದರ ಅಡ್ಡಪರಿಣಾಮಗಳು ಹಾಗೂ ತೋಳಿನ ನೋವು 2ರಿಂದ 3 ದಿನಗಳವರೆಗೆ ಇರುತ್ತದೆ. ಆದರೂ, ನಿಮಗೆ ಉರಿಯೂತ ಹೆಚ್ಚು ಕಂಡುಬಂದರೆ, ನೀವು ನೋವಿಗೆ ಹೆಚ್ಚು ಸಂವೇದನಾಶೀಲರಾಗಿದ್ದರೆ ಲಸಿಕೆ ಪಡೆದ ನಂತರದ 5 ದಿನಗಳವರೆಗೆ ನೋವು ಇರಬಹುದು. ಇದರ ಹೊರತಾಗಿ ಲಸಿಕೆ ಪಡೆದು ಒಂದು ವಾರದ ನಂತರವೂ ನೋವು ಅಥವಾ ಉರಿಯೂತ ಕಡಿಮೆ ಆಗದಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.
       ತೋಳಿನ ನೋವು ಒಳ್ಳೆಯದೇ? ಲಸಿಕೆ ಪಡೆದ ನಂತರ ನೋವು, ಉರಿಯೂತ ನಿಮ್ಮ ತೋಳು ಪ್ರತಿಕ್ರಿಯಿಸುತ್ತದೆ ಎಂಬುದು ನೇರವಾಗಿ ಸಂಬಂಧಿಸಿದೆ. ಅಂದರೆ ಅನೇಕ ತಜ್ಞರು ಹೇಳಿರುವ ಪ್ರಕಾರ ತೋಳಿನಲ್ಲಿ ತೀವ್ರವಾದ ನೋವು ಸಹ ನಿಮ್ಮ ದೇಹದಲ್ಲಿ ಲಸಿಕೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಪ್ರಮುಖ ಸಂಕೇತವಾಗಿದೆ. ಲಸಿಕೆ ದೇಹದಲ್ಲಿ ಉರಿಯೂತವನ್ನು ಪ್ರೇರೇಪಿಸುತ್ತದೆ ಮತ್ತು ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ನೀವು ಹೆಚ್ಚಿನ ಮಟ್ಟದ ಉರಿಯೂತವನ್ನು ಅನುಭವಿಸಿದರೆ ಲಸಿಕೆ ತನ್ನ ಕೆಲಸವನ್ನು ಉತ್ತಮವಾಗಿ ನಿರ್ವಹಿಸುತ್ತಿದೆ ಮತ್ತು ಸಾಕಷ್ಟು ರಕ್ಷಣೆ ನೀಡಲು ಕೆಲಸ ಮಾಡುತ್ತಿದೆ ಎಂಬುದರ ಸಂಕೇತವಾಗಿದೆ.
        ಇತರೆ ಅಡ್ಡಪರಿಣಾಮಗಳನ್ನು ಅನುಭವಿಸುತ್ತೀರಾ? ಲಸಿಕೆಯನ್ನು ತೋಳಿನ ಮೇಲೆ ಚುಚ್ಚಿದಾಗ, ಲಸಿಕೆ ನೀಡಿದ ಸ್ಥಳದಲ್ಲಿ ಸಾಮಾನ್ಯ ಪ್ರತಿಕ್ರಿಯೆಯನ್ನು ಅನುಭವಿಸಲಾಗುತ್ತದೆ ಮತ್ತು ಉರಿಯೂತ ಸಂಭವಿಸುತ್ತದೆ. ಚುಚ್ಚುಮದ್ದಿನ ಸ್ಥಳದಲ್ಲಿ ನೋವು, ಅಸ್ವಸ್ಥತೆಯನ್ನು ಅನುಭವಿಸುವುದು ಸಹ ಸಾಮಾನ್ಯವಾಗಿದೆ. ಆದರೆ ಕೆಲವರಿಗೆ ಸ್ನಾಯು ನೋವು, ಅಸ್ವಸ್ಥತೆ, ಜ್ವರ, ತಲೆನೋವಿನಂಥ ಸಮಸ್ಯೆಗಳು ಸಹ ಎದುರಾಗಬಹುದು. ಇದುಸಹ 2ರಿಂದ 3ದಿನಗಳು ಇರಬಹುದು. ಇದಕ್ಕೂ ಹೆಚ್ಚು ದಿನ ನೋವು ಕಂಡರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
      ನೋವನ್ನು ಕಡಿಮೆ ಮಾಡುವುದು ಹೇಗೆ? ಲಸಿಕೆಯಿಂದ ಅನುಭವಿಸುವ ನೋವು ಹೆಚ್ಚು ಅಸ್ವಸ್ಥತೆಯನ್ನುಂಟು ಮಾಡುತ್ತದೆ ಮತ್ತು ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ಕನಿಷ್ಟ ಒಂದೆರಡು ದಿನಗಳವರೆಗೆ ತೋಳನ್ನು ಬಾದಿಸುತ್ತದೆ. ನಿಮ್ಮ ತೋಳಿನ ನೋವಿನ ತೀವ್ರತೆಯನ್ನು ಕಡಿಮೆ ಮಾಡಲು ಅಥವಾ ನಿವಾರಿಸಲು ಮತ್ತು ಅಡ್ಡಪರಿಣಾಮ ಇಲ್ಲದೆ ವೇಗವಾಗಿ ಚೇತರಿಸಿಕೊಳ್ಳಲು ಕೆಲವು ಮಾರ್ಗಗಳಿವೆ. ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಜನರು ಐಸ್ ಪ್ಯಾಕ್, ಚುಚ್ಚುಮದ್ದಿನ ಸ್ಥಳದಲ್ಲಿ ಬೆಚ್ಚಗಿನ ನೀರಿನಿಂದ ಮೆತ್ತಗೆ ಮಸಾಜ್‌ ಮಾಡುವುದನ್ನು ಹೆಚ್ಚಿನ ತಜ್ಞರು ಶಿಫಾರಸು ಮಾಡುತ್ತಾರೆ. ಎಪ್ಸಮ್‌ ಉಪ್ಪಿನ ಸ್ನಾನ ಮಾಡುವುದರಿಂದ ಸಹ ನಿವಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ತೋಳಿನಲ್ಲಿನ ಬಿಗಿತವನ್ನು ಕಡಿಮೆ ಮಾಡಲು ವ್ಯಾಯಾಮ ಮತ್ತು ಆಗಾಗ ನಿಧಾನವಾಗಿ ಚಲನೆಯನ್ನು ಮಾಡುವುದು ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಆದೆರೆ, ನಿಮ್ಮ ಪ್ರಯತ್ನಗಳನ್ನು ಅತಿಯಾಗಿ ಮಾಡಬಾರದು ಮತ್ತು ಯಾವುದೇ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವಂತಿದ್ದರೆ ವೈದ್ಯರ ಸಲಹೆ ಕಡ್ಡಾಯ ಎಂಬುದನ್ನು ನೆನಪಿಡಿ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries