ಕಾಸರಗೋಡು: ರಾಜ್ಯ ಮಟ್ಟದ 2019-20 ವರ್ಷದ ಅತ್ಯುತ್ತಮ ಸಹಕಾರಿ ಸಂಸ್ಥೆಗಳ ಆಯ್ಕೆಯಲ್ಲಿ ಮೊದಲ 2 ಬಹುಮಾನ ಮತ್ತು 4ನೇ ಬಹುಮಾನಗಳು ಕಾಸರಗೋಡು ಜಿಲ್ಲೆಗೆ ಲಭಿಸಿದೆ.
ಪನತ್ತಡಿ ಸೇವಾ ಸಹಕಾರಿ ಬ್ಯಾಂಕ್ ಮೊದಲ ಬಹುಮಾನಕ್ಕೆ ಭಾಜನವಾಗಿದೆ. ಮಡಿಕೈ ಸಹಕಾರಿ ಸೇವಾ ಬ್ಯಾಂಕ್ ದ್ವಿತೀಯ ಬಹುಮಾನ ಗಳಿಸಿದೆ. ಕೋಟೆಚ್ಚೇರಿ ಸೇವಾ ಸಹಕಾರಿ ಬ್ಯಾಂಕ್ 4ನೇ ಬಹುಮಾನ ಪಡೆದಿದೆ. ಅಂತಾರಾಷ್ಟ್ರೀಯ ಸಹಕಾರಿ ದಿನಾಚರಣೆ ಅಂಗವಾಗಿ ತಿರುವನಂತಪುರಂ ನಲ್ಲಿ ಈ ಬಹುಮಾನಗಳ ಘೋಷಣೆ ನಡೆದಿದೆ.
ಸಹಕಾರಿ ಇಲಾಖೆ ವ್ಯಾಪ್ತಿಯ ಪ್ರಾಥಮಿಕ ಸಾಲ ಸಹಕಾರಿ ಸಂಘಗಳು, ಮಹಿಳಾ ಸಂಘಗಳು, ಹಲವಿಧ ಸಂಘಗಳು, ಶಿಕ್ಷಣ ಸಂಘಗಳು, ಆಸ್ಪತ್ರೆ ಸಂಘಗಳು ಎಂಬ ಸಂಸ್ಥೆಗಳನ್ನು ಅವುಗಳ ಸಾಧನೆಗಳ ಹಿನ್ನೆಲೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಸಾಮಾಜಿಕ ಸಂರಕ್ಷಣೆ, ಕೃಷಿ, ಬ್ಯಾಂಕಿಂಗೇತರ ಚಟುವಟಿಕೆಗಳು ಇತ್ಯಾದಿಗಳನ್ನು ಈ ವೇಳೆ ಪರಿಶೀಲಿಸಲಾಗುತ್ತದೆ. ಉದುಮಾ ಮಹಿಳಾ ಸಹಕಾರಿ ಸಂಘ ಈ ವಿಭಾಗದಲ್ಲೂ, ಮುಳಿಯಾರು ಕೃಷಿ ಕಲ್ಯಾಣ ಸಹಕಾರಿ ಸಂಘ ಹಲವಿಧ ಸಂಘ ವಿಭಾಗದಲ್ಲೂ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿವೆ.