ಇಡುಕ್ಕಿ: ಇಡುಕ್ಕಿ ಜಿಲ್ಲೆಯ ಪೀರಮೇಡ್ ಮತ್ತು ಕುಮಿಳಿ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ 8.44 ಮತ್ತು 9.05 ಕ್ಕೆ ಎರಡು ಭೂಕಂಪನ ಸಂಭವಿಸಿದೆ. ಎರಡನೇ ಭೂಕಂಪದ ಪ್ರಮಾಣ ಹೆಚ್ಚಿತ್ತು.
ಚಲನೆ 5 ಸೆಕೆಂಡುಗಳ ಕಾಲ ಇತ್ತೆನ್ನಲಾಗಿದೆ.
ಭೂಕಂಪನವು ಪೆರುವಂತನಂ, ಕುಟ್ಟಿಕಾನಂ, ವಂಡಿಪೇರಿಯಾರ್, ಕುಮಳಿ ಮತ್ತು ಚಕ್ಕುಪಲ್ಲಂ ಜಿಲ್ಲೆಗಳಲ್ಲಿ ಅನುಭವ ಬೀರಿತ್ತು. ಜ್ವಾಲಾಮುಖಿ ಡಿಸ್ಕವರಿ ಸೈಟ್ ಪ್ರಕಾರ, ಪ್ರಮಾಣವು 3.4 ಆಗಿತ್ತು.
ಮೂರನೇ ಭೂಕಂಪನವು ಕೇರಳ ಗಡಿಯ ಸಮೀಪ ತಮಿಳುನಾಡಿನಿಂದ ನೈಋ್ಯಕ್ಕೆ 19 ಕಿ.ಮೀ.ದೂರದಲ್ಲಿ ಕೇಂದ್ರೀಕೃತವಾಗಿತ್ತು.