ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಎನ್ ಡಿಎ 2.0 ಸರ್ಕಾರದ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆ ಸರಳವಾಗಿ ಸಂಪನ್ನವಾಗಿದೆ. 43 ಮಂದಿ ನೂತನ ಸಚಿವರು ಸಂಪುಟ ಸೇರ್ಪಡೆಗೊಂಡಿದ್ದಾರೆ.
ಕೋವಿಡ್ 19 ಮಾರ್ಗಸೂಚಿಯಂತೆ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ಯಾರು ಯಾರು ಸಂಪುಟ ಸೇರಿದರು.
ಕರ್ನಾಟಕದಿಂದ ಮೋದಿ ಸಂಪುಟಕ್ಕೆ ನಾಲ್ವರು ಸೇರ್ಪಡೆಗೊಂಡಿದ್ದಾರೆ. ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬೀದರ್ ಸಂಸದ ಭಗವಂತ್ ಖೂಬಾ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಯಾವ ಸಚಿವರಿಗೆ ಯಾವ ಖಾತೆ:
* ಅಮಿತ್ ಶಾ: ಸಹಕಾರ ಖಾತೆ(ಹೊಸ ಖಾತೆ)
* ಅಶ್ವಿನಿ ವೈಷ್ಣವ್: ರೈಲ್ವೆ ಸಚಿವ
* ಜ್ಯೋತಿರಾದಿತ್ಯ ಸಿಂಧಿಯಾ: ನಾಗರಿಕ ವಿಮಾನಯಾನ ಖಾತೆ
* ಹರ್ದೀಪ್ ಸಿಂಗ್ ಪುರಿ: ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ
* ಮನ್ಸುಖ್ ಮಾಂಡವಿಯಾ: ಆರೋಗ್ಯ ಸಚಿವ.
* ಧರ್ಮೇಂದ್ರ ಪ್ರಧಾನ್: ಶಿಕ್ಷಣ ಸಚಿವ, ಕೌಶಲ್ಯಾಭಿವೃದ್ಧಿ ಹೆಚ್ಚುವರಿ ಖಾತೆ.
* ಪಿಯೂಷ್ ಗೊಯೆಲ್: ಜವಳಿ ವಾಣಿಜ್ಯ ವ್ಯವಹಾರ.
* ಗಿರಿರಾಜ್ ಸಿಂಗ್: ಗ್ರಾಮೀಣಾಭಿವೃದ್ಧಿ ಖಾತೆ
* ಅನುರಾಗ್ ಸಿಂಗ್ ಠಾಕೂರ್: ವಾರ್ತಾ ಮತ್ತು ಪ್ರಸಾರ ಖಾತೆ, ಕ್ರೀಡೆ ಮತ್ತು ಯುವಜನ ಖಾತೆ
* ಮೀನಾಕ್ಷಿ ಲೇಖಿ: ವಿದೇಶಾಂಗ ಸಚಿವಾಲಯ(ರಾಜ್ಯ ಸಚಿವೆ)
* ಸ್ಮೃತಿ ಇರಾನಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ.
* ಭೂಪೇಂದ್ರ ಯಾದವ್ : ಕಾರ್ಮಿಕ ಖಾತೆ ಸಚಿವ.
* ಕಿರಣ್ ರಿಜಿಜು: ಕಾನೂನು ಖಾತೆ
* ಸರ್ಬಾನಂದ್ ಸೊನೊವಾಲ್: ಶಿಪ್ಪಿಂಗ್ ಹಾಗೂ ಆಯುಷ್.
* ಶೋಭಾಕರಂದ್ಲಾಜೆ: ಕೃಷಿ (ರಾಜ್ಯ ಖಾತೆ)
* ರಾಜೀವ್ ಚಂದ್ರಶೇಖರ್: ಕೌಶಲ್ಯಾಭಿವೃದ್ಧಿ, ಉದ್ಯಮ, ಎಲೆಕ್ಟ್ರಾನಿಕ್ಸ್ ಹಾಗೂ ಐಟಿ(ರಾಜ್ಯ ಸಚಿವ)
* ಪರಷೋತ್ತಮ ರುಪಾಲ: ಹೈನುಗಾರಿಕೆ ಹಾಗೂ ಮೀನುಗಾರಿಕೆ.
* ಜಿ ಕಿಶನ್ ರೆಡ್ಡಿ: ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಅಭಿವೃದ್ಧಿ ಈಶಾನ್ಯ ರಾಜ್ಯ.
ಇನ್ನಷ್ಟು ಅಪ್ಡೇಟ್ ನಿರೀಕ್ಷಿಸಿ....