ಪಾಟ್ನಾ: ಕೋವಿಡ್ ನಿಂದ ಸಾವನ್ನಪ್ಪಿದ ಸುಮಾರು 240 ರೋಗಿಗಳ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದ 49 ವರ್ಷದ ಮುಖೇಶ್ ಹಿಸ್ಸಾರಿಯಾ ಅವರಿಗೆ ಡೆಟ್ಟಾಲ್ ಗೌರವ ಸಲ್ಲಿಸಿದೆ.
ಸುಮಾರು 100 ಜನರು ಹಿಸ್ಸಾರಿಯಾ ಅವರನ್ನು ಆಯ್ಕೆ ಮಾಡಿದ್ದು, ಡೆಟ್ಟಾಲ್ ಬಾಟಲ್ ಮೇಲೆ ಅವರ ಫೋಟೋ ಮುದ್ರಿಸಲಾಗಿದೆ, ಹಿಸ್ಸಾರಿಯಾ ಅವರನ್ನು ಸಂರಕ್ಷಕ ಎಂದು ಬರೆಯಲಾಗಿದೆ, ಕೋವಿಡ್ ವೈರಸ್ ನಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರಕ್ಕೆ ಅಗತ್ಯ ವ್ಯವಸ್ಥೆ ಮಾಡಿದ್ದರು.
ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಭಾರತದ ಜನರಿಗೆ ಸಹಾಯ ಮಾಡುವ ಅಸಾಧಾರಣ ಪ್ರಯತ್ನಗಳಿಗಾಗಿ ಮುಖೇಶ್ ಹಿಸ್ಸಾರಿಯಾ ಅವರಿಗೆ 'ನಮ್ಮ ರಕ್ಷಕ' ಎಂದು ಡೆಟ್ಟಾಲ್ ಸೆಲ್ಯೂಟ್ಸ್ ನೀಡಿದೆ.
ರಾಜ್ಯದಲ್ಲಿ ಅನೇಕ ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ್ದಕ್ಕಾಗಿ 'ಬಿಹಾರದ ರಕ್ತ ಮನುಷ್ಯ' ಎಂದೂ ಕರೆಯಲ್ಪಡುವ ಹಿಸ್ಸಾರಿಯಾ 2020 ರಲ್ಲಿ 96 ಸಂತ್ರಸ್ತರಿಗೆ ಮತ್ತು ಈ ವರ್ಷ 145 ಮಂದಿಗೆ ಶವ ಸಂಸ್ಕಾರ ಮಾಡಲು ಅನುಕೂಲ ಮಾಡಿಕೊಟ್ಟರು ಮತ್ತು ನಗರದ ವಿವಿಧ ಶವಸಂಸ್ಕಾರದ ಘಟ್ಟಗಳಲ್ಲಿ ಸಮಸ್ಯೆಗೊಳಗಾಗಿದ್ದ ರಕ್ತಸಂಬಂಧಿಗಳಿಗೆ ಸಹಾಯ ಮಾಡಿದರು.
ಅವರು ಪಾಟ್ನಾದ ಮಾ ವೈಷ್ಣೋ ದೇವಿ ಸೇವಾ ಸಮಿತಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಬಡ ಜನರಿಗೆ, ಥಲಸ್ಸೆಮಿಯಾದಿಂದ ಬಳಲುತ್ತಿರುವ ಮಕ್ಕಳಿಗಾಗಿ ಹಲವಾರು ಸೇವೆಗಳನ್ನು ಒದಗಿಸುತ್ತಿದ್ದಾರೆ. ಖರ್ಚು ಭರಿಸಲಾಗದ ಜನರಿಗೆ ಸಾಮೂಹಿಕ ವಿವಾಹಗಳನ್ನು ಆಯೋಜಿಸಿದ್ದಾರೆ.
145 ರಲ್ಲಿ, 52 ಮಂದಿ ಕುಟುಂಬ ಸದಸ್ಯರು ಘಾಟ್‌ಗಳಲ್ಲಿ ಶವಸಂಸ್ಕಾರ ಮಾಡುವಂತೆ ವಿಡಿಯೋ ಕರೆಗಳ ಮೂಲಕ ವಿನಂತಿಸಿಕೊಂಡರು. ನಮ್ಮ ಸ್ವಯಂಸೇವಕರು, ವೈದಿಕ ಮಂತ್ರಗಳನ್ನು ಪಠಿಸುವ ಪಂಡಿತರಿಗೆ ಹಣ ನೀಡಿ ಸರಿಯಾದ ರೀತಿ ಸಂಸ್ಕಾರ ಮಾಡಿದರು. ನಾವು ಕ್ಷೌರಿಕರನ್ನು, ಕೋವಿಡ್ ರೋಗಿಗಳ ಶವಗಳನ್ನು ಘಾಟ್‌ಗಳಿಗೆ ಕೊಂಡೊಯ್ಯಲು
ನಾಲ್ಕು ಕಾರ್ಮಿಕರನ್ನು ಮತ್ತು ಶವಸಂಸ್ಕಾರದ ಆಚರಣೆಗಳಿಗೆ ಅಗತ್ಯವಾದ ವಸ್ತುಗಳನ್ನು ಒದಗಿಸಲು ಒಬ್ಬ ಅಂಗಡಿಯವರನ್ನು ನೇಮಿಸಿಕೊಂಡಿದ್ದೇವೆ 'ಎಂದು ಹಿಸ್ಸಾರಿಯಾ ಹೇಳಿದರು.
ಪಾಟ್ನಾದಲ್ಲಿ ದಾನಿಗಳ ಹಣಕಾಸಿನ ಬೆಂಬಲದೊಂದಿಗೆ ಅವರು 6 ಕೋಟಿ ರೂ.ಗಳ ವೆಚ್ಚದಲ್ಲಿ ರಾಜ್ಯದ ಮೊದಲ ವಾಣಿಜ್ಯೇತರ ರಕ್ತ ಬ್ಯಾಂಕ್ ನಿರ್ಮಿಸಿದರು, ಇದು ಈ ವರ್ಷದ ಅಕ್ಟೋಬರ್ 1 ರಿಂದ ಎಚ್‌ಐವಿ ಮತ್ತು ಥಲಸ್ಸಾಮಿನಾ ರೋಗಿಗಳಿಗೆ ಉಚಿತ ರಕ್ತವನ್ನು ಒದಗಿಸುತ್ತದೆ. ಕಳೆದ 10 ವರ್ಷಗಳಲ್ಲಿ ಮಾ ವೈಷ್ಣೋ ದೇವಿ ಸೇವಾ ಸಮಿತಿಯ ಬ್ಯಾನರ್ ಅಡಿಯಲ್ಲಿ ಬಡ ಕುಟುಂಬಗಳ 488 ಬಾಲಕಿಯರ ವಿವಾಹಗಳನ್ನು ಏರ್ಪಡಿಸಲಾಗಿತ್ತು ಎಂದು ಹಿಸ್ಸಾರಿಯಾ ತಿಳಿಸಿದ್ದಾರೆ.