ಟೋಕ್ಯೋ: ಕೋವಿಡ್-19 ನಿರ್ಬಂಧ ಮತ್ತು ಭಯ, ಆತಂಕ ಮಧ್ಯೆ ಟೋಕ್ಯೋ ಒಲಿಂಪಿಕ್ 2020 ಈ ತಿಂಗಳ 23ರಂದು ಆರಂಭವಾಗುತ್ತಿದೆ. ಟೋಕಿಯೊ ಒಲಿಂಪಿಕ್ ಗ್ರಾಮದಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆಯಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಪಂದ್ಯ ನಡೆಯುವ ಟೋಕಿಯೊ ಗ್ರಾಮದಲ್ಲಿ ಕೋವಿಡ್-19 ಕೇಸು ಪತ್ತೆಯಾಗಿದ್ದು, ಇದರಿಂದ ಆಟಗಾರರು ವಿಚಲಿತರಾಗಬೇಕಿಲ್ಲ, ಸ್ಪರ್ಧಾಳುಗಳಿಗೆ ಪಂದ್ಯ ನಡೆಯುವ ಜಾಗ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಭರವಸೆ ನೀಡುವುದಾಗಿ ಸಂಘಟಕರು ಹೇಳಿದ್ದಾರೆ.
ಗ್ರಾಮದಲ್ಲಿ ಒಬ್ಬನಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸದ್ಯ ಸ್ಥಳದಲ್ಲಿ ಸಾವಿರಾರು ಅಥ್ಲೆಟ್ ಗಳು ಮತ್ತು ಅಧಿಕಾರಿಗಳು ಸೇರಿದ್ದಾರೆ, ತಪಾಸಣೆ ಮಾಡುವ ವೇಳೆ ಒಬ್ಬರಿಗೆ ಪಾಸಿಟಿವ್ ಬಂದಿದೆ ಸದ್ಯ ಪಾಸಿಟಿವ್ ಬಂದ ವ್ಯಕ್ತಿಯನ್ನು ಹೊಟೇಲ್ ರೂಂವೊಳಗೆ ಇರಿಸಲಾಗಿದೆ ಎಂದು ಟೋಕಿಯೊ ಸಂಘಟನಾ ಸಂಸ್ಥೆಯ ವಕ್ತಾರೆ ಮಾಸ ಟಕಯ ತಿಳಿಸಿದ್ದಾರೆ.