ನವದೆಹಲಿ: ಜೆಇಇ ಮೇನ್ಸ್ 2021 ಪರೀಕ್ಷೆಗಳು ಎರಡು ಆವೃತ್ತಿಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ.
ಜೆಇಇ ಮೇನ್ಸ್ ಜುಲೈ 20 ರಿಂದ ಜುಲೈ 25ರವರೆಗೆ ನಡೆಯಲಿದ್ದು ಎರಡನೇ ಆವೃತ್ತಿ ಜುಲೈ 27ರಿಂದ ಆಗಸ್ಟ್ 2ರವರೆಗೆ ನಡೆಯಲಿದೆ.
ಕೊರೋನಾ ಕಾರಣದಿಂದ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮೊದಲ ಆವೃತ್ತಿಯಲ್ಲಿ ಪರೀಕ್ಷೆಗೆ ಕೂರುವ ವಿದ್ಯಾರ್ಥಿಗಳು ಜುಲೈ 6ರಿಂದ ಜುಲೈ 8ರ ರಾತ್ರಿಯವರೆಗೆ ಎನ್ ಟಿಎ ನಲ್ಲಿ ಅರ್ಜಿಗಳನ್ನು ಪಡೆಯಬಹುದು.
ಎರಡನೇ ಆವೃತ್ತಿಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಜುಲೈ 9ರಿಂದ ಜುಲೈ 12ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಅಲ್ಲದೆ, ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಲು ಸಹ ಅವಕಾಶವಿದೆ.