ತಿರುವನಂತಪುರ: ರಾಜ್ಯದಲ್ಲಿ ಇಂದು 20,772 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 3670, ಕೋಝಿಕೋಡ್ 2470, ಎರ್ನಾಕುಳಂ 2306, ತ್ರಿಶೂರ್ 2287, ಪಾಲಕ್ಕಾಡ್ 2070, ಕೊಲ್ಲಂ 1415, ಆಲಪ್ಪುಳ 1214, ಕಣ್ಣೂರು 1123, ತಿರುವನಂತಪುರ 1082, ಕೊಟ್ಟಾಯಂ 1030, ಕಾಸರಗೋಡು 681, ವಯನಾಡ್ 564, ಪತ್ತನಂತಿಟ್ಟು 504, ಇಡುಕ್ಕಿ 356 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 1,52,639 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಧನಾತ್ಮಕ ದರ ಶೇ.13.61 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎನ್ಎಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,70,49,431 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
ಇಂದು, ಕೋವಿಡ್ ಬಾಧಿಸಿ 116 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 16,701 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 137 ಮಂದಿ ಜನರು ರಾಜ್ಯದ ಹೊರಗಿಂದ ಬಂದವರು. 19,622 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 932 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 3526, ಕೋಯಿಕ್ಕೋಡ್ 2441, ಎರ್ನಾಕುಳಂ 2257, ತ್ರಿಶೂರ್ 2268, ಪಾಲಕ್ಕಾಡ್ 1459, ಕೊಲ್ಲಂ 1408, ಅಲಪ್ಪುಳಾ 1200, ಕಣ್ಣೂರು 1041, ತಿರುವನಂತಪುರ 985, ಕೊಟ್ಟಾಯಂ 982, ಕಾಸರಗೋಡು 670, ವಯನಾಡ್ 549, ಪತ್ತನಂತಿಟ್ಟ 497, ಮತ್ತು ಇಡುಕ್ಕಿ 339 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾಗಿದೆ.
ಇಂದು 81 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಕಣ್ಣೂರು 28, ಪಾಲಕ್ಕಾಡ್ 13, ತ್ರಿಶೂರ್, ವಯನಾಡ್ 8, ಕಾಸರಗೋಡು 6, ಕೊಲ್ಲಂ, ಎರ್ನಾಕುಳಂ 4, ಮಲಪ್ಪುರಂ 3, ಕೊಟ್ಟಾಯಂ, ಕೋಯಿಕ್ಕೋಡ್ ತಲಾ 2, ತಿರುವನಂತಪುರ, ಪತ್ತನಂತಿಟ್ಟ ಮತ್ತು ಇಡುಕ್ಕಿ 1 ಎಂಬಂತೆ ಸೋಂಕು ದೃಢಪಟ್ಡಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 14,651 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1169, ಕೊಲ್ಲಂ 1382, ಪತ್ತನಂತಿಟ್ಟ 271, ಅಲಪ್ಪುಳ 983, ಕೊಟ್ಟಾಯಂ 740, ಇಡುಕ್ಕಿ 222, ಎರ್ನಾಕುಳಂ 1599, ತ್ರಿಶೂರ್ 2659, ಪಾಲಕ್ಕಾಡ್ 908, ಮಲಪ್ಪುರಂ 1838, ಕೋಝಿಕ್ಕೋಡ್ 1029, ವಯನಾಡ್ 239, ಕಣ್ಣೂರು 959 ಮತ್ತು ಕಾಸರಗೋಡು 653 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,60,824 ಮಂದಿ ಜನರಿಗೆ ಸೋಂಕು ಇರುವುದು ಪತ್ತೆಯಾಗಿದ್ದು, ಅವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 31,92,104 ಮಂದಿ ಈವರೆಗೆ ಕೋವಿಡ್‌ನಿಂದ ಮುಕ್ತರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,56,951 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 4,29,118 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 27,833 ಮಂದಿ ಆಸ್ಪತ್ರೆಯ ಮೇಲ್ವಿಚಾರಣೆಯಲ್ಲಿದ್ದಾರೆ. 2804 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.