ತಿರುವನಂತಪುರ: ಕೇರಳದಲ್ಲಿ ಒಟ್ಟು ಝಿಕಾ ವೈರಸ್ ಪ್ರಕರಣಗಳ ಸಂಖ್ಯೆ 21 ಕ್ಕೆ ಏರಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ. ಇಬ್ಬರು ಹೊಸ ರೋಗಿಗಳು ಪತ್ತೆಯಾಗಿದ್ದು, ಒಬ್ಬರು 35 ಮತ್ತು ಇನ್ನೊಬ್ಬರು 41 ವರ್ಷ ವಯಸ್ಸಿನವರು ಎಂದು ತಿಳಿದುಬಂದಿದೆ.
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಇಂದು ಮಾಹಿತಿ ನೀಡಿದ್ದಾರೆ: "ರಾಜ್ಯದಲ್ಲಿ ಇಂದು ಇಬ್ಬರು ಜನರಿಗೆ ಝಿಕಾ ವೈರಸ್ ಇರುವುದು ಪತ್ತೆಯಾಗಿದೆ. ಪೂಂದುರ ಎಂಬಲ್ಲಿಯ 35 ವರ್ಷದ ವ್ಯಕ್ತಿಗೆ ಮತ್ತು ಸಾಸ್ತಮಂಗಳಂ ನ 41 ವರ್ಷದ ವ್ಯಕ್ತಿಗಳಿಗೆ ವೈರಸ್ ಪತ್ತೆಯಾಗಿದೆ. (ಸಕಾರಾತ್ಮಕ ಪರೀಕ್ಷೆ ಮಾಡಿದ್ದಾರೆ).ಈ ಮೂಲಕ ಒಟ್ಟು ಝಿಕಾ ಬಾಧಿತರ ಸಂಖ್ಯೆ 21 ಕ್ಕೆ ಏರಿಕೆಯಾಗಿದೆ.
73 ವರ್ಷದ ಮಹಿಳೆಯೋರ್ವೆ ಸೋಮವಾರ ಝಿಕಾ ವೈರಸ್ ಧನಾತ್ಮಕ ಪರೀಕ್ಷೆ ಮಾಡಿದ್ದರು. ಮಹಿಳೆ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಲಪ್ಪುಳದಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‍ಐವಿ) ಗೆ ಕಳುಹಿಸಲಾದ ಐದು ಸ್ಯಾಂಪಲ್‍ಗಳು ಝಿಕಾ ವೈರಸ್‍ಗೆ ನಕಾರಾತ್ಮಕವಾಗಿ ಮರಳಿದೆ ಎಂದು ಸಚಿವರು ನಿನ್ನೆ ಹೇಳಿದ್ದರು.
ಅಂಬೆಗಾಲಿಡುವ ಮಗು ಸೇರಿದಂತೆ ಇನ್ನೂ ಮೂವರಿಗೆ ಝಿಕಾ ವೈರಸ್‍ಗೆ ತುತ್ತಾಗಿರುವುದನ್ನು ಕೇರಳ ಅಧಿಕಾರಿಗಳು ಭಾನುವಾರ ಖಚಿತಪಡಿಸಿದ್ದರು.
ಝಿಕಾ ವೈರಸ್‍ಗಾಗಿ ಪಿಣರಾಯಿ ವಿಜಯನ್ ಸರ್ಕಾರ ಈಗಾಗಲೇ 2,100 ಪರೀಕ್ಷಾ ಕಿಟ್‍ಗಳನ್ನು ಪಡೆದುಕೊಂಡಿದೆ ಮತ್ತು ಇವುಗಳನ್ನು ರಾಜ್ಯದ ನಾಲ್ಕು ವೈದ್ಯಕೀಯ ಕಾಲೇಜುಗಳಲ್ಲಿ ಬಳಸಲಾಗುವುದು. ಈ ಪರೀಕ್ಷಾ ಸೌಲಭ್ಯಗಳು ತಿರುವನಂತಪುರ, ತ್ರಿಶೂರ್ ಮತ್ತು ಕೋಝಿಕೋಡ್ ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಅಲಪ್ಪುಳ ಎನ್‍ಐವಿ ಯಲ್ಲಿವೆ.
ಜ್ವರ, ದದ್ದು ಮತ್ತು ದೇಹ ಪೂರ್ತಿ ನೋವು ಇರುವ ರೋಗಿಗಳನ್ನು, ವಿಶೇಷವಾಗಿ ಗರ್ಭಿಣಿ ಮಹಿಳೆಯರನ್ನು ಪರೀಕ್ಷಿಸಲು ಸರ್ಕಾರ ರಾಜ್ಯದ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.
ಕೇರಳದಲ್ಲಿ ಕೋವಿಡ್ ಮಹಾಮಾರಿ ಇನ್ನೂ ನಿಯಂತ್ರಣಕ್ಕೆ ಬಾರದ ಹೊತ್ತಲ್ಲೇ ಮೊತ್ತೊಂದೆಡೆ ಝಿಕಾ ವೈರಸ್ ಪ್ರಕರಣಗಳು ವರದಿಯಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.