ತಿರುವನಂತಪುರ: ರಾಜ್ಯದಲ್ಲಿ ಇಂದಿ 22,056 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 3931, ತ್ರಿಶೂರ್ 3005, ಕೋಝಿಕೋಡ್ 2400, ಎರ್ನಾಕುಳಂ 2397, ಪಾಲಕ್ಕಾಡ್ 1649, ಕೊಲ್ಲಂ 1462, ಆಲಪ್ಪುಳ 1461, ಕಣ್ಣೂರು 1179, ತಿರುವನಂತಪುರ 1101, ಕೊಟ್ಟಾಯಂ 1067, ಕಾಸರಗೋಡು 895, ವಯನಾಡ್ 685, ಪತ್ತನಂತಿಟ್ಟು 549, ಇಡುಕ್ಕಿ 375 ಎಂಬಂತೆ ಸೋಂಕು ದೃಢಪಟ್ಟಿದೆ.
ಇಂದು ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಕಳೆದ 24 ಗಂಟೆಗಳಲ್ಲಿ 1,96,902 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ. 11.2. ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಆಂಟಿಜೆನ್ ಪರೀಕ್ಷೆ ಸೇರಿದಂತೆ ಒಟ್ಟು 2,67,33,694 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಇಂದು, ಕೋವಿಡ್ ಬಾಧಿಸಿದ 131 ಮಂದಿ ಮೃತಪಟ್ಟಿರುವುದಾಗಿ ಅಂಕಿಅಂಶಗಳು ತಿಳಿಸಿವೆ. ಒಟ್ಟು ಸಾವಿನ ಸಂಖ್ಯೆ 16,457 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 120 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 20,960 ಮಂದಿ ಜನರಿಗೆ ಸೋಂಕು ತಗುಲಿತು. 876 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 3679, ತ್ರಿಶೂರ್ 2989, ಕೋಝಿಕೋಡ್ 2367, ಎರ್ನಾಕುಳಂ 2296, ಪಾಲಕ್ಕಾಡ್ 1196, ಕೊಲ್ಲಂ 1451, ಆಲಪ್ಪುಳ 1446, ಕಣ್ಣೂರು 1086, ತಿರುವನಂತಪುರ 991, ಕೊಟ್ಟಾಯಂ 1017, ಕಾಸರಗೋಡು 875, ವಯನಾಡ್ 676, ಪತ್ತನಂತಿಟ್ಟು 527, ಇಡುಕ್ಕಿ 364 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 100 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಗೊಂಡಿದೆ. ಕಣ್ಣೂರು 18, ಪಾಲಕ್ಕಾಡ್ ಮತ್ತು ಕಾಸರಗೋಡು ತಲಾ 14, ಪತ್ತನಂತಿಟ್ಟು 10, ಕೊಟ್ಟಾಯಂ 8, ಕೊಲ್ಲಂ, ತ್ರಿಶೂರ್ ತಲಾ 7, ತಿರುವನಂತಪುರ, ಎರ್ನಾಕುಲಂ ತಲಾ 5, ಆಲಪ್ಪುಳ, ವಯನಾಡ್ 4 ತಲಾ, ಕೋಝಿಕೋಡ್ 3 ಮತ್ತು ಮಲಪ್ಪುರಂ 1 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 17,761ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1226, ಕೊಲ್ಲಂ 2484, ಪತ್ತನಂತಿಟ್ಟು 488, ಆಲಪ್ಪುಳ 624, ಕೊಟ್ಟಾಯಂ 821, ಇಡುಕ್ಕಿ 355, ಎರ್ನಾಕುಲಂ 1993, ತ್ರಿಶೂರ್ 2034, ಪಾಲಕ್ಕಾಡ್ 1080, ಮಲಪ್ಪುರಂ 2557, ಕೋಝಿಕೋಡ್ 2091, ವಯನಡ್ 441,ಕಣ್ಣೂರು 1025, ಕಾಸರಗೋಡು 542 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,49,534 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 31,60,804 ಮಂದಿ ಜನರನ್ನು ಈವರೆಗೆ ಕೋವಿಡ್‌ನಿಂದ ಮುಕ್ತಗೊಳಿಸಲಾಗಿದೆ.