ತಿರುವನಂತಪುರ: ಕೇರಳದಲ್ಲಿ ಕೋವಿಡ್ ಆತಂಕದ ಸ್ಥಿತಿ ಇಂದು ಮತ್ತೆ ಪುನರಾವರ್ತನೆಯಾಗಿದ್ದು,ವ್ಯಾಪಕ ಭೀತಿಯ ವಾತಾವರಣ ಸೃಷ್ಟಿಸಿದೆ. ಕಲಕೆದ ವಾರ ಒಂದಷ್ಟು ಸಮಧಾನಕರ ವಾತಾವರಣ ಕಂಡುಬಂದಿರುವ ನಡುವೆ ಇಂದಿನ ಅಂಕಿಅಂಶ ಸಂಶಯಗಳೊಂದಿಗೆ ಆತಂಕಕ್ಕೂ ಕಾರಣವಾಗುತ್ತಿದೆ.
ರಾಜ್ಯದಲ್ಲಿ ಇಂದು 22,129 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 4037, ತ್ರಿಶೂರ್ 2623, ಕೋಝಿಕೋಡ್ 2397, ಎರ್ನಾಕುಳಂ 2352, ಪಾಲಕ್ಕಾಡ್ 2115, ಕೊಲ್ಲಂ 1914, ಕೊಟ್ಟಾಯಂ 1136, ತಿರುವನಂತಪುರ 1100, ಕಣ್ಣೂರು 1072, ಆಲಪ್ಪುಳ 1064, ಕಾಸರಗೋಡು 813, ವಯನಾಡ್ 583, ಪತ್ತನಂತಿಟ್ಟು 523, ಇಡುಕ್ಕಿ 400 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 1,79,130 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ. 12.35. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,65,36,792 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಇಂದು, 156 ಮಂದಿ ಕೋವಿಡ್ ಬಾಧಿಸಿ ಮೃತರಾಗಿರುವುದು ಖಚಿತಪಡಿಸಲಾಗಿದೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 16,326 ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
ಇಂದು,ಸೋಂಕು ಪತ್ತೆಯಾದವರಲ್ಲಿ 124 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 20,914 ಮಂದಿ ಜನರಿಗೆ ಸೋಂಕು ತಗುಲಿತು. 975 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 3925, ತ್ರಿಶೂರ್ 2606, ಕೋಝಿಕೋಡ್ 2354, ಎರ್ನಾಕುಳಂ 2301, ಪಾಲಕ್ಕಾಡ್ 1461, ಕೊಲ್ಲಂ 1910, ಕೊಟ್ಟಾಯಂ 1063, ತಿರುವನಂತಪುರ 1017, ಕಣ್ಣೂರು 973, ಆಲಪ್ಪುಳ 1047, ಕಾಸರಗೋಡು 801, ವಯನಾಡು 570, ಪತ್ತನಂತಿಟ್ಟು 500, ಇಡುಕ್ಕಿ 386 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 116 ಮಂದಿ ಆರೋಗ್ಯ ಕಾರ್ಯಕರ್ತರಿಗೂ ಕೋವಿಡ್ ದೃಢಪಡಿಸಲಾಗಿದೆ. ಕಣ್ಣೂರು 26, ಮಲಪ್ಪುರಂ 11, ಪತ್ತನಂತಿಟ್ಟು, ತ್ರಿಶೂರ್, ಪಾಲಕ್ಕಾಡ್, ಕಾಸರಗೋಡು ತಲಾ 10, ವಯನಾಡ್ 9, ಕೊಟ್ಟಾಯಂ, ಕೋಝಿಕೋಡ್ ತಲಾ 8, ಕೊಲ್ಲಂ, ಇಡಕ್ಕಿ 4, ಆಲಪ್ಪುಳ 3, ತಿರುವನಂತಪುರ 2 ಮತ್ತು ಎರ್ನಾಕುಳಂ 1 ಎಂಬಂತೆ ಆರೋಗ್ಯ ಕಾರ್ಯಕರ್ತರು ಸೋಂಕಿಗೊಳಗಾಗಿರುವರು.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 13,415 ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 859, ಕೊಲ್ಲಂ 653, ಪತ್ತನಂತಿಟ್ಟು 393, ಆಲಪ್ಪುಳ 603, ಕೊಟ್ಟಾಯಂ 801, ಇಡುಕ್ಕಿ 245, ಎರ್ನಾಕುಳಂ 1151, ತ್ರಿಶೂರ್ 2016, ಪಾಲಕ್ಕಾಡ್ 1015, ಮಲಪ್ಪುರಂ 2214, ಕೋಝಿಕೋಡ್ 1758, ವಯನಾಡ್ 325, ಕಣ್ಣೂರು 664, ಕಾಸರಗೋಡು 718 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,45,371 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 31,43,043 ಮಂದಿ ಜನರನ್ನು ಈವರೆಗೆ ಕೋವಿಡ್‌ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,36,387 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 4,09,931 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 26,266 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರ. 2351 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.