ಕಾಸರಗೋಡು: ಕಾಸರಗೋಡಿನಲ್ಲಿ ಮಲಬಾರ್ ಪ್ರದೇಶದ ಮೊದಲ ಸೆಕೆಂಡರಿ ಸ್ಟಾಂಡರ್ಡ್ ಲೆಬೋರೆಟರಿ ಮತ್ತು ಟಾಂಕರ್ ಲಾರಿ ಕಲಾಬ್ರೇಷನ್ ಯೂನಿಟ್ ಸ್ಥಾಪನೆಗೊಳ್ಳಲಿದ್ದು, ಜು.22ರಂದು ಆನ್ ಲೈನ್ ಮೂಲಕ ಲೀಗಲ್ ಮೆಟ್ರಾಲಜಿ ಸಚಿವ ಜಿ.ಆರ್.ಅನಿಲ್ ಕುಮಾರ್ ಅವರು ನಿರ್ಮಾಣ ಚಟುವಟಿಕೆಗೆ ಚಾಲನೆ ನೀಡುವರು. ಬಟ್ಟತ್ತೂರು- ಪಳ್ಳಿಕ್ಕರೆಯಲ್ಲಿ ಆನ್ ಲೈನ್ ಕಾರ್ಯಕ್ರಮದ ಪ್ರದರ್ಶನವಿರುವುದು. ಶಾಸಕ ಸಿ.ಎಚ್.ಕುಂಞಂಬು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಪನೆಯಾಲ ಗ್ರಾಮದ ಬಟ್ಟತ್ತೂರಿನ ಕಾಸರಗೋಡು- ಕಾಞಂಗಾಡು ರಾಷ್ಟ್ರೀಯ ಹೆದ್ದಾರಿ 66ರ ಬಳಿಯಲ್ಲಿ 1.95 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಳ್ಳಲಿದೆ.