ತಿರುವನಂತಪುರ: ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರ ನೀಡುವ ಉಚಿತ ಓಣಂ ಕಿಟ್‍ನಲ್ಲಿ ಮಕ್ಕಳಿಗೆ ನೀಡಬೇಕೆಂದು ಉದ್ದೇಶಿಸಲಾಗಿದ್ದ ಕ್ರೀಮ್ ಬಿಸ್ಕತ್ತು ಅಥವಾ ಚಾಕಲೇಟ್ ಗಳನ್ನು ಕೊಡದೆ ಇರಲು ತೀರ್ಮಾನಿಸಲಾಗಿದೆ. ಬೊಕ್ಕಸಕ್ಕೆ 22 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಉಂಟಾಗುವ ಹಿನ್ನೆಲೆಯಲ್ಲಿ ಕ್ರೀಮ್ ಬಿಸ್ಕತ್ತುಗಳನ್ನು ಕಿಟ್‍ನಿಂದ ಹೊರಗಿಡಲಾಗಿದೆ. ಮಕ್ಕಳ ಕೋರಿಕೆಯಂತೆ ಉತ್ತಮ ಗುಣಮಟ್ಟದ ಕ್ರೀಂ ಬಿಸ್ಕತ್ತು ನೀಡಲಾಗುವುದು ಎಂದು ಸಚಿವ ಜಿ.ಆರ್ ಅನಿಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಓಣಂ ಕಿಟ್ ಘೋಷಣೆಯ ಮೊದಲು ಕಿಟ್ ನಲ್ಲಿ 20 ಮಿಠಾಯಿಗಳನ್ನು ಒಳಗೊಂಡಿರುವ ಚಾಕೊಲೇಟ್ ಪ್ಯಾಕ್ ನೀಡಲು ಯೋಜಿಸಲಾಗಿತ್ತು. ಒಂದು ಪ್ಯಾಕ್‍ಗೆ 20 ರೂ. ವೆಚ್ಚವಾಗುವುದರಿಂದ ಬದಲಾಗಿ ಬಿಸ್ಕತ್ತು ನೀಡಲು ನಿರ್ಧರಿಸಲಾಯಿತು.
90 ಲಕ್ಷ ಕಿಟ್‍ಗಳಲ್ಲಿ ಬಿಸ್ಕತ್ತು ಸೇರಿಸುವುದರಿಂದ ರಾಜ್ಯ ಸರ್ಕಾರಕ್ಕೆ 22 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಉಂಟಾಗುತ್ತದೆ ಎಂದು ಅಂದಾಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮಕ್ಕಳ ಊಸಾಬರಿಯೇ ಬೇಡವೆಂದು ನಿರ್ಧಾರ ಕೈಬಿಡಲಾಯಿತು.
ಈ ಮಧ್ಯೆ ಪ್ರಚಾರ ಗೀಳಿನ ಸರ್ಕಾರದ ಅಪಕ್ವ ನಿರ್ಧಾರ, ನಿಮಿಷಕ್ಕೊಂದು ಹೇಳಿಕೆಗಳು, ಕೋವಿಡ್ ಪ್ರತಿರೋಧದಲ್ಲಿ ಸುಳ್ಳುಗಳ ತೋರಣ ಕಟ್ಟುವ ಮೂಲಕ ಎಡ ಸರ್ಕಾರ ಮಹತ್ತರ ಟೀಕೆಗೊಳಗಾಗಿದೆ.