ನವದೆಹಲಿ: ಭಾರತದ ಕೈಗಾರಿಕಾ ಉತ್ಪಾದನೆ ಮೇ ತಿಂಗಳಲ್ಲಿ ಶೇ.29.3 ರಷ್ಟು ಬೆಳವಣಿಗೆ ದಾಖಲಿಸಿದೆ.
ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‌ಎಸ್‌ಒ) ಜು.12 ರಂದು ಬಿಡುಗಡೆ ಮಾಡಿರುವ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಡೆಟಾ ಪ್ರಕಾರ ಮೇ ತಿಂಗಳಲ್ಲಿ ಉತ್ಪಾದನಾ ಕ್ಷೇತ್ರದ ಉತ್ಪತ್ತಿ ಶೇ.34.5 ರಷ್ಟು ಏರಿಕೆ ಕಂಡಿದೆ.
ಗಣಿಗಾರಿಕೆ ಶೇ.23.3 ರಷ್ಟು, ವಿದ್ಯುತ್ ಉತ್ಪಾದನೆ ಶೇ.7.5 ರಷ್ಟು ಏರಿಕೆ ಕಂಡಿದೆ. ಕೊರೋನಾ ಹಿನ್ನೆಲೆಯಲ್ಲಿ ಕಳೆದ ವರ್ಷದ ಮಾರ್ಚ್ ನಲ್ಲಿ ಶೇ.18.7 ರಷ್ಟು ಕುಸಿದಿದ್ದ ಐಐಪಿ 2020 ರ ಮೇ ತಿಂಗಳಲ್ಲಿ ಶೇ.33.4 ರಷ್ಟು ಕುಸಿತ ಕಂಡಿತ್ತು.
ಲಾಕ್ ಡೌನ್ ಹಿನ್ನೆಲೆಯಲ್ಲಿ 2020 ರ ಏಪ್ರಿಲ್ ತಿಂಗಳಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಐಐಪಿ ದಾಖಲೆಯ ಶೇ.57.3 ರಷ್ಟು ಕುಸಿತ ಕಂಡಿತ್ತು.